ಹಲಾಲ್ ಕಟ್ ಅಂತ ಬೋರ್ಡ್ ಹಾಕಿರುವ ಮುಸಲ್ಮಾನರ ಮಾಂಸದ ಅಂಗಡಿಗಳಿಗೆ ಹೋಗುವುದನ್ನು ನಿಲ್ಲಿಸಿ: ಕಾಳಿ ಸ್ವಾಮಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 29, 2022 | 9:16 PM

ಮುಸ್ಲಿಂ ವ್ಯಾಪಾರಿಗಳು ಮಾಡಿಕೊಳ್ಳುವ ಲಾಭದ ಹೆಚ್ಚಿನಂಶ ಭಯೋತ್ಪಾದನೆಗೆ ಹೋಗುತ್ತಿದೆ, ಇದನ್ನು ಎಲ್ಲ ಹಿಂದೂಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳುವ ಸ್ವಾಮಿಗಳು ಹಿಂದೂಗಳು ಆರ್ಥಿಕವಾಗಿ ಸಬಲರಾಗುವ ಅಗತ್ಯವಿದೆ ಅನ್ನುತ್ತಾರೆ.

ಬೆಂಗಳೂರು:  ಕಾಳಿ ಸ್ವಾಮಿ (Kali Swamy) ಮತ್ತೇ ಸುದ್ದಿಯಲ್ಲಿದ್ದಾರೆ. ಕೋಳಿ ಮತ್ತು ಕುರಿಮಾಂಸವನ್ನು ಹಲಾಲ್ ಕಟ್ (Halal Cut) ಎಂದು ಬೋರ್ಡ್ಗಳನ್ನು ಹಾಕಿಕೊಂಡು ಮಾರುವ ಮುಸಲ್ಮಾನರ ಅಂಗಡಿಗಳಿಂದ ಮಾಂಸ (meat) ಖರೀದಿಸದಂತೆ ಅವರು ಹಿಂದೂಗಳನ್ನು ಆಗ್ರಹಿಸಿದ್ದಾರೆ. ಕೇವಲ ಜಾತ್ರೆ ಮತ್ತು ಹಿಂದೂ ದೇವಸ್ಥಾನದ ಆವರಣಗಳಲ್ಲಿ ಮುಸ್ಲಿಮರನ್ನು ವ್ಯಾಪಾರ ಮಾಡದಂತೆ ತಡೆದರೆ ಏನೂ ಆಗೋದಿಲ್ಲ, ಅವರು ನಡೆಸುವ ಚಿಕನ್ ಮತ್ತು ಮಟನ್ ಅಂಗಡಿಗಳಿಂದ ಮಾಂಸ ಖರೀದಿಸುವುದನ್ನು ನಿಲ್ಲಿಸುವ ಕೆಲಸ ಮೊದಲು ಅಗಬೇಕು. ಮಾಂಸದ ಅಂಗಡಿಗಳನ್ನು ಬರೀ ಮುಸಲ್ಮಾನರೇ ಜಾಸ್ತಿ ನಡೆಸುತ್ತಾರೆ ಅನ್ನೋದು ಸತ್ಯ, ಆ ಕಾರಣಕ್ಕಾಗೇ ಜಿಲ್ಲಾ, ತಾಲ್ಲೂಕು, ಹೋಬಳಿ ಮತ್ತು ಗ್ರಾಮೀಣ ಮಟ್ಟದಲ್ಲಿ ಹಿಂದೂಗಳು ಮಾಂಸದಂಗಡಿಗಳನ್ನು ಆರಂಭಿಸಬೇಕು, ಆಗ ಅವರ ಒಡೆತನದ ಅಂಗಡಿಗಳಿಗೆ ಹೋಗುವುದು ತಪ್ಪುತ್ತದೆ ಎಂದು ಕಾಳಿ ಸ್ವಾಮಿ ಮಂಗಳವಾರದಂದು ಬೆಂಗಳೂರಲ್ಲಿ ಹೇಳಿದರು.

ಮುಂದುವರೆದು ಮಾತಾಡಿದ ಸ್ವಾಮಿಗಳು, ಮುಸ್ಲಿಮರು ಎಲ್ಲಾ ವಿಷಯಗಳಲ್ಲೂ ಹಲಾಲ್ ಅಂಶವನ್ನು ಮುಂದಿಡುತ್ತಿದ್ದಾರೆ. ಅಸ್ಪತ್ರೆಗಳಲ್ಲೂ ಅದನ್ನು ಅಳವಡಿಸಬೇಕು ಅಂತ ಅವರು ಹೇಳುತ್ತಿದ್ದಾರೆ, ಆಸ್ಪತ್ರೆಯ ಬಾಗಿಲು ಮಕ್ಕಾ ಕಡೆ ಮುಖಮಾಡಿರಬೇಕು, ಕಿಟಕಿಗಳು ನಿರ್ದಿಷ್ಟ ದಿಕ್ಕಿಗೆ ಇರಬೇಕು ಅಂತೆಲ್ಲ ವಾದಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಮುಸ್ಲಿಂ ವ್ಯಾಪಾರಿಗಳು ಮಾಡಿಕೊಳ್ಳುವ ಲಾಭದ ಹೆಚ್ಚಿನಂಶ ಭಯೋತ್ಪಾದನೆಗೆ ಹೋಗುತ್ತಿದೆ, ಇದನ್ನು ಎಲ್ಲ ಹಿಂದೂಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳುವ ಸ್ವಾಮಿಗಳು ಹಿಂದೂಗಳು ಆರ್ಥಿಕವಾಗಿ ಸಬಲರಾಗುವ ಅಗತ್ಯವಿದೆ ಅನ್ನುತ್ತಾರೆ. ಹಾಗೆಯೇ ಹಿಂದೂ ಮಿಲಿಟರಿ ಹೋಟಲುಗಳಲ್ಲಿ ಹಲಾಲ್ ಕಟ್ ಅಂತ ಹಾಕುವ ಬೋರ್ಡಗಳನ್ನು ಮೊದಲು ತೆಗೆಯಬೇಕು ಅಂತ ಅವರು ಹೇಳುತ್ತಾರೆ.

ಇದನ್ನೂ ಓದಿ:    ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿ ಎಂಬ ಸಂದೇಶ ಹರಡಿದ ಕಿಡಿಗೇಡಿಗಳನ್ನು ಮಟ್ಟ ಹಾಕಿ: ಹೆಚ್​ಡಿ ಕುಮಾರಸ್ವಾಮಿ ಆಗ್ರಹ