ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್
ಒಡಿಶಾದ ಗಂಜಾಂ ಮತ್ತು ಕಂಧಮಾಲ್ ಜಿಲ್ಲೆಗಳ ಗಡಿಯಲ್ಲಿರುವ ಕಳಿಂಗ ಘಾಟ್ ರಸ್ತೆಯಲ್ಲಿ ನಿರಂತರ ಭಾರೀ ಮಳೆಯಿಂದಾಗಿ ಭೀಕರ ಭೂಕುಸಿತ ಸಂಭವಿಸಿದ್ದು, ನೂತನವಾಗಿ ನಿರ್ಮಿಸಲಾಗಿದ್ದ ತಡೆಗೋಡೆ ಹಾಗೂ ನಿರ್ಮಾಣ ಹಂತದಲ್ಲಿದ್ದ ರಸ್ತೆಯ ಒಂದು ಭಾಗ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಮುಂಡಿಯಾ ಬೆಟ್ಟಗಳಿಂದ ಹರಿದುಬಂದ ರಭಸದ ಮಳೆನೀರಿನಿಂದಾಗಿ ಹೆದ್ದಾರಿಯ ಒಂದು ಬದಿ ಕುಸಿದುಬಿದ್ದಿದೆ. ಇದರೊಂದಿಗೆ ಇತ್ತೀಚೆಗಷ್ಟೇ ನಿರ್ಮಿಸಲಾಗಿದ್ದ ತಡೆಗೋಡೆ ಹಾಗೂ ಕಾಮಗಾರಿ ಹಂತದಲ್ಲಿದ್ದ ರಸ್ತೆಯ ಭಾಗ ಕೊಚ್ಚಿಹೋಗಿದೆ. ಈ ರಸ್ತೆಯು ಪ್ರಸಿದ್ಧ ರಾಂಚಿ-ವಿಜಯವಾಡ ಆರ್ಥಿಕ ಕಾರಿಡಾರ್‌ನ ಪ್ರಮುಖ ಭಾಗವಾಗಿದ್ದು, ದಕ್ಷಿಣ ಒಡಿಶಾ ಮತ್ತು ಪಶ್ಚಿಮ ಒಡಿಶಾ ನಡುವಿನ ಪ್ರಮುಖ ವಾಣಿಜ್ಯ ಹಾಗೂ ಸಾರಿಗೆ ಕೊಂಡಿಯಾಗಿದೆ.
ಭುವನೇಶ್ವರ, ಸೆಪ್ಟೆಂಬರ್ 24: ಒಡಿಶಾದ ಗಂಜಾಂ ಮತ್ತು ಕಂಧಮಾಲ್ ಜಿಲ್ಲೆಗಳ ಗಡಿಯಲ್ಲಿರುವ ಕಳಿಂಗ ಘಾಟ್ ರಸ್ತೆಯಲ್ಲಿ ನಿರಂತರ ಭಾರೀ ಮಳೆಯಿಂದಾಗಿ ಭೀಕರ ಭೂಕುಸಿತ ಸಂಭವಿಸಿದ್ದು, ನೂತನವಾಗಿ ನಿರ್ಮಿಸಲಾಗಿದ್ದ ತಡೆಗೋಡೆ ಹಾಗೂ ನಿರ್ಮಾಣ ಹಂತದಲ್ಲಿದ್ದ ರಸ್ತೆಯ ಒಂದು ಭಾಗ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಮುಂಡಿಯಾ ಬೆಟ್ಟಗಳಿಂದ ಹರಿದುಬಂದ ರಭಸದ ಮಳೆನೀರಿನಿಂದಾಗಿ ಹೆದ್ದಾರಿಯ ಒಂದು ಬದಿ ಕುಸಿದುಬಿದ್ದಿದೆ. ಇದರೊಂದಿಗೆ ಇತ್ತೀಚೆಗಷ್ಟೇ ನಿರ್ಮಿಸಲಾಗಿದ್ದ ತಡೆಗೋಡೆ ಹಾಗೂ ಕಾಮಗಾರಿ ಹಂತದಲ್ಲಿದ್ದ ರಸ್ತೆಯ ಭಾಗ ಕೊಚ್ಚಿಹೋಗಿದೆ. ಈ ರಸ್ತೆಯು ಪ್ರಸಿದ್ಧ ರಾಂಚಿ-ವಿಜಯವಾಡ ಕಾರಿಡಾರ್‌ನ ಪ್ರಮುಖ ಭಾಗವಾಗಿದ್ದು, ದಕ್ಷಿಣ ಒಡಿಶಾ ಮತ್ತು ಪಶ್ಚಿಮ ಒಡಿಶಾ ನಡುವಿನ ಪ್ರಮುಖ ವಾಣಿಜ್ಯ ಹಾಗೂ ಸಾರಿಗೆ ಕೊಂಡಿಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us