‘ಕಲ್ಕಿ 2898 ಎಡಿ’ ಸಿನಿಮಾದ ಬುಜ್ಜಿ ಕಾರು ನೋಡಲು ಮುಗಿಬಿದ್ದ ಬೆಂಗಳೂರು ಮಂದಿ
‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮಿಂಚಿರುವ ಬುಜ್ಜಿ ಕಾರು ಈಗ ಬೆಂಗಳೂರಿನಲ್ಲಿ ನೋಡಲು ಸಿಗುತ್ತಿದೆ. ಇದರ ವಿಶೇಷತೆ ಏನು ಎಂಬುದನ್ನು ತಂಡದವರು ವಿವರಿಸಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್ ಓಡಿಸಿರುವ ಈ ಕಾರು ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೂ ಪ್ರೊಡಕ್ಷನ್ ತಂಡದ ರಮೇಶ್ ಅವರು ಉತ್ತರ ನೀಡಿದ್ದಾರೆ. 7 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾರು ತಯಾರಾಗಿದೆ.
ನಟ ಪ್ರಭಾಸ್ ಅವರು ಅಭಿನಯಿಸಿದ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಬಳಕೆಯಾದ ಬುಜ್ಜಿ ಕಾರು ಬೆಂಗಳೂರಿಗೆ ಬಂದಿದೆ. ಇಲ್ಲಿನ ಖಾಸಗಿ ಮಾಲ್ನಲ್ಲಿ ಬುಜ್ಜಿ ಕಾರನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ಇದು ಎಲೆಕ್ಟ್ರಿಕ್ ಕಾರು. ಅಡ್ವಾನ್ಸ್ ಟೆಕ್ನಾಲಜಿ ಹೊಂದಿರುವ ಕಾರನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಸಿನಿಮಾದಲ್ಲಿ ಬುಜ್ಜಿ ನೋಡಿ ಎಂಜಾಯ್ ಮಾಡಿರುವ ಜನರು ಈಗ ಇದನ್ನು ನೇರವಾಗಿ ನೋಡಲು ಬರುತ್ತಿದ್ದಾರೆ. ಈ ಕಾರಿನ ವಿಶೇಷತೆ ಏನು ಎಂಬುದು ಈ ವಿಡಿಯೋದಲ್ಲಿ. ಇದರ ಬಜೆಟ್ ಎಷ್ಟು? ಯಾವೆಲ್ಲ ಆಯ್ಕೆಗಳು ಇದರಲ್ಲಿ ಇವೆ ಎಂಬುದನ್ನು ಚಿತ್ರತಂಡದವರಾದ ರಮೇಶ್ ಅವರು ವಿವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos