ಬೆಂಗಳೂರಿನಲ್ಲಿ ಕಲ್ಕಿ ಬುಜ್ಜಿ ಮೇನಿಯಾ; ಏಳು ಕೋಟಿ ವೆಚ್ಚದ ಬುಜ್ಜಿ ವಿಶೇಷತೆಗಳೇನು?

| Updated By: ಆಯೇಷಾ ಬಾನು

Updated on: Jul 28, 2024 | 7:41 AM

ಈ ಕಾರ್ ಮಾತಾಡುತ್ತೆ. ಕೋಪ ಮಾಡ್ಕೊಳ್ಳುತ್ತೆ. ಕಾಮಿಡಿ ಮಾಡುತ್ತೆ. ರೋಡ್​ ಮೇಲೆ ಮಾತ್ರವಲ್ಲ ಗಾಳಿಯಲ್ಲೂ ಸಂಚರಿಸುತ್ತೆ. ಯಾಕಂದ್ರೆ ಇದು ಅಂತಿಂತ ಕಾರ್ ಅಲ್ಲ ಇದು ಬುಜ್ಜಿ. ಕಲ್ಕಿ ಸಿನಿಮಾ ಮೂಲಕ ಸೆನ್ಸೇಷನ್ ಸೃಷ್ಟಿಸಿದ ವೆರಿ ವೆರಿ ಸ್ಪೆಷಲ್ ಬುಜ್ಜಿ. ಪ್ಯಾನ್ ಇಂಡಿಯಾ ಮೋಡಿ ಮಾಡಿರುವ ಬುಜ್ಜಿ ಸದ್ಯ ಸಿಲಿಕಾನ್ ಸಿಟಿಯಲ್ಲಿ ಸದ್ದು ಮಾಡ್ತಿದೆ. ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದು, ನಮ್ಮೂರ ಹೈಕ್ಳನ್ನ ಅಟ್ರ್ಯಾಕ್ಟ್​ ಮಾಡ್ತಿದೆ.

ಬೆಂಗಳೂರು, ಜುಲೈ.28: ಬುಜ್ಜಿ, ಕೇವಲ ಕಾರ್ ಅಲ್ಲ. ಇದೊಂದು ಮಾಯಾ ವಾಹನ. ಪ್ರಭಾಸ್ (Prabhas) ನಟನೆಯ ಕಲ್ಕಿ (Kalki 2898 AD) ಸಿನಿಮಾದ ಸ್ಪೆಷಲ್ ಅಟ್ರ್ಯಾಕ್ಷನ್. ಆ ಕಡೆ ಕಲ್ಕಿ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಾವಿರ ಕೋಟಿ ಗಳಿಸಿ ಕಮಾಲ್ ಮಾಡ್ತಿದ್ರೆ, ಈ ಕಡೆ ಬುಜ್ಜಿ ಕಾರ್ ದೇಶಾದ್ಯಂತ ರೌಂಡ್ ಹಾಕಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಈಗಾಗಲೇ ಹೈದರಾಬಾದ್​, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿ ಪ್ರದಕ್ಷಿಣೆ ಹಾಕಿರುವ ಬುಜ್ಜಿ ಕಾರ್ ಈಗ ಸಿಲಿಕಾನ್ ಸಿಟಿ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದು, ಅಭಿಮಾನಿಗಳನ್ನ ಆಕರ್ಷಿಸುತ್ತಿದೆ.

ಬಿಗ್ ಸ್ಕ್ರೀನ್ ಮೇಲೆ ಜಾದೂ ಮಾಡಿದ್ದ ಬುಜ್ಜಿ ಕಾರ್ ಈಗ ಬೆಂಗಳೂರಿಗೆ ಬಂದಿದ್ದು, ಕೋಣನಕುಂಟೆ ಕ್ರಾಸ್​ ಬಳಿಯಿರುವ ಫೋರಂ ಮಾಲ್​ ಬಳಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಸಿಲಿಕಾನ್ ಸಿಟಿಗೆ ಕಲ್ಕಿಯ ಬುಜ್ಜಿ ಬಂದಿದೆ ಅನ್ನೋ ಸುದ್ದಿ ತಿಳಿಯುತ್ತಿದ್ದಂತೆ ಸಾಕಷ್ಟು ಜನರು ಮಾಲ್​ಗೆ ಭೇಟಿ ನೀಡಿ ಬುಜ್ಜಿ ಕಾರ್ ಜೊತೆ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ನಟಿಸೋಕೆ ರಾಜಮೌಳಿ ಒಪ್ಪಿಸಿದ್ದು ಹೇಗೆ? ನಿರ್ದೇಶಕ ಹೇಳಿದ್ದು ಇಷ್ಟು  

ಬುಜ್ಜಿ ಕಾರ್ ಬಗ್ಗೆ ಹೇಳುವುದಾದರೇ ಮಹೀಂದ್ರಾ ಮತ್ತು ಜಯಮ್ ಆಟೋಮೋಟಿವ್ಸ್ ಸಹಯೋಗದಲ್ಲಿ ಕಲ್ಕಿ ಸಿನಿಮಾಗಾಗಿಯೇ ಈ ಕಾರ್​ನ ಸಿದ್ಧಗೊಳಿಸಿದ್ದಾರೆ. ಈ ಕಾರ್​ನ ನಿರ್ಮಾಣ ಮಾಡುವುದಕ್ಕಾಗಿ ಸುಮಾರು ಒಂದೂವರೆ ವರ್ಷಗಳ ಸಮಯ ತೆಗೆದುಕೊಂಡಿದ್ದು, 7 ಕೋಟಿ ಖರ್ಚಾಗಿದೆ. ಇನ್ನು ಈ ಕಾರ್​ 6 ಸಾವಿರ ಕೆಜಿ ತೂಕವಿದ್ದು, 12 ಅಡಿ ಅಗಲ ಹಾಗೂ 19 ಅಡಿ ಉದ್ದ ಇದೆ. ಇದು ಎಲೆಕ್ಟ್ರಾನಿಕ್ ವೆಹಿಕಲ್ ಆಗಿದ್ದು, 18 ಗಂಟೆಗಳ ಕಾಲ ಚಾರ್ಜ್ ಹಾಕಿದ್ರೆ ಬ್ಯಾಟರಿ ಫುಲ್ ಆಗುತ್ತೆ. ಕಿ.ಮೀಟರ್​ಗೆ 40 ಸ್ಪೀಡ್​ನಲ್ಲಿ ಬುಜ್ಜಿ ಕಾರ್​ ಚಲಿಸಲಿದ್ದು, ರೆಗ್ಯುಲರ್​ ಕಾರ್​ಗಳಲ್ಲಿ ಇರುವಂತೆ ಎಸಿ, ಕ್ಯಾಮೆರಾ ಸಿಸ್ಟಮ್, ಕಂಟ್ರೋಲ್ ಸಿಸ್ಟಮ್ ಎಲ್ಲವೂ ಇದೆ.

ಪ್ಯಾನ್ ಇಂಡಿಯಾ ಸೆನ್ಸೇಷನ್ ಆಗಿರುವ ಬುಜ್ಜಿ ಕಾರ್ ಈಗ ನಮ್ಮೂರಿಗೂ ಬಂದಿದ್ದು, ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಫೋರಂ ಮಾಲ್​ನಲ್ಲೇ ಉಳಿಯಲಿದೆ. ಬುಜ್ಜಿ ನೋಡ್ಬೇಕು ಅಂದ್ರೆ ಇಂದೇ ಭೇಟಿ ನೀಡಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ