ಕಲಾಕಾರ ಈ ಕಮಲಾಕರ: ಸುಚಿತ್ರಾಗಿಂತ ಮೊದಲು ಮತ್ತೊಬ್ಬಳ ಜೊತೆಗಿತ್ತು ಅಕ್ರಮ ಸಂಬಂಧ!; ಸ್ಪೋಟಕ ಆಡಿಯೋ ಲಭ್ಯ

Edited By:

Updated on: Feb 09, 2026 | 12:50 PM

ಜ್ಯೋತಿಷಿ ಕಮಲಾಕರ್ ಭಟ್ ಕಾಮಪುರಾಣದ ಮತ್ತೊಂದು ಮುಖ ಬಯಲಾಗಿದೆ. ಸುಚಿತ್ರಾ ಜೊತೆಗಿನ ಸಂಬಂಧಕ್ಕೂ ಮುನ್ನ, ಕಮಲಾಕರ್ ಭಟ್ ಶಿರಸಿ ಮೂಲದ ಮಹಿಳೆಯೊಬ್ಬರೊಂದಿಗೆ ಒಂಭತ್ತು ವರ್ಷಗಳ ಕಾಲ ಅಕ್ರಮ ಸಂಬಂಧ ಹೊಂದಿದ್ದರು ಎಂಬ ವಿಚಾರ ಬಹಿರಂಗಗೊಂಡಿದೆ. ಸುಚಿತ್ರಾ ಪರಿಚಯದ ಬಳಿಕ ಆ ಮಹಿಳೆಯನ್ನು ಕಮಲಾಕರ್ ನಿರ್ಲಕ್ಷಿಸಿದ್ದರು ಎನ್ನಲಾಗಿದೆ.

ಕಾರವಾರ, ಫೆಬ್ರವರಿ 09: ಕೊಲೆ ಪ್ರಕರಣದ ಆರೋಪಿ ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧಗಳ ಕುರಿತು ದಿನಕ್ಕೊಂದು ಹೊಸ ಮಾಹಿತಿ ಬಯಲಾಗುತ್ತಿದೆ. ಇದೀಗ ಟಿವಿ9 ಕನ್ನಡಕ್ಕೆ ಕಮಲಾಕರ್ ಭಟ್ ಇನ್ನೊಂದು ಆಡಿಯೋ ಲಭ್ಯವಾಗಿದ್ದು, ಸುಚಿತ್ರಾಳಿಗಿಂತಲೂ ಮುನ್ನ ಈತ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಎಂಬ ಅಂಶ ಬಹಿರಂಗವಾಗಿದೆ. ಶಿರಸಿ ಮೂಲದ ಮಹಿಳೆಯೊಂದಿಗೆ ಕಮಲಾಕರ್ ಭಟ್​​ ಸುಮಾರು ಒಂಭತ್ತು ವರ್ಷಗಳ ಕಾಲ ಸಂಬಂಧ ಹೊಂದಿದ್ದ.  ಆದರೆ ಸಚಿತ್ರಾ ಪರಿಚಯದ ಬಳಿಕ ಇವರ ಸಂಬಂಧ ಹಳಸಿತ್ತು. ಹೀಗಿದ್ದರೂ ಕಮಲಾಕರನಿಗೆ ಆ ಮಹಿಳೆ ಆಗಾಗ ಕರೆ ಮಾಡುತ್ತಿದ್ದಳು. ಈ ವಿಚಾರ ಸುಚಿತ್ರಾಳಿಗೆ ಗೊತ್ತಾಗಿದ್ದು, ಈತನಿಗೆ ಕ್ಲಾಸ್​​ ಕೂಡ ತೆಗೆದುಕೊಂಡಿದ್ದಳು. ಹೀಗಾಗಿ ಆಕೆಯ ಎದುರೇ ಶಿರಸಿಯ ಮಹಿಳೆಗೆ ಈತ ಧ್ವನಿ ಸಂದೇಶ ಕಳುಹಿಸಿದ್ದ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

 

Published on: Feb 09, 2026 12:45 PM