ಒಂದೆರಡಲ್ಲ ಸುಚಿತ್ರಾ ರಂಗಿನಾಟ: ಜ್ಯೋತಿಷಿ, ಜಮೀನ್ದಾರ್​ ಮಾತ್ರವಲ್ಲದೆ ಮತ್ತೊಬ್ಬನ ಜೊತೆಗೂ ಇತ್ತು ದೋಸ್ತಿ!

Edited By:

Updated on: Feb 10, 2026 | 1:31 PM

ಕೊಲೆ ಪ್ರಕರಣದಲ್ಲಿ ಬಂಧಿತಳಾದ ಸುಚಿತ್ರಾ ಅಲಿಯಾಸ್ ಸುರೇಖಾಳ ಒಂದೊಂದೇ ಲೀಲೆಗಳು ಬೆಳಕಿಗೆ ಬರುತ್ತಿವೆ. ಜ್ಯೋತಿಷಿ ಕಮಲಾಕರ ಭಟ್, ಜಮೀನ್ದಾರ್ ಶರಣಬಸಪ್ಪ ಮಾತ್ರವಲ್ಲದೆ, ಜೆಸಿಬಿ ಪ್ರಕಾಶ್ ಜೊತೆಗೂ ಆಕೆಗೆ ಸಂಬಂಧವಿತ್ತು. ರೀಲ್ಸ್, ಫೋಟೋಶೂಟ್ ಹಾಗೂ ಆರ್ಥಿಕ ಸಹಾಯದ ಮೂಲಕ ಈಕೆ ಶ್ರೀಮಂತರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು ಎನ್ನಲಾಗಿದೆ.

ಶಿವಮೊಗ್ಗ, ಫೆಬ್ರವರಿ 10: ಸಿದ್ದಾಪುರದ ವಸಂತ್ ನಾಯಕ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಸುಚಿತ್ರಾ ಅಲಿಯಾಸ್ ಸುರೇಖಾಳ ಹಲವು ರಂಗಿನಾಟಗಳು ಇದೀಗ ಬಯಲಾಗುತ್ತಿವೆ. ಜ್ಯೋತಿಷಿ ಕಮಲಾಕರ ಭಟ್ ಹಾಗೂ ಜಮೀನ್ದಾರ್ ಶರಣಬಸಪ್ಪ ಜೊತೆಗಿನ ಈಕೆಯ ಸಂಬಂಧಗಳ ಬಗ್ಗೆ ಈಗಾಗಲೇ ಮಾಹಿತಿ ಹೊರಬಿದ್ದಿತ್ತು. ಇದೀಗ ಜೆಸಿಬಿ ಪ್ರಕಾಶ್ ಎಂದು ಗುರುತಿಸಲ್ಪಟ್ಟ ಸಿದ್ದಾಪುರದ ಯುವಕನೊಂದಿಗೆ ಆಕೆ ರೀಲ್ಸ್ ಮತ್ತು ಫೋಟೋಶೂಟ್ ಮಾಡಿಸಿಕೊಂಡಿರೋದು ಬಹಿರಂಗವಾಗಿದೆ. ಮಹೇಶ್ ನಾಯಕ್ ಅವರೊಂದಿಗೆ ವಿವಾಹವಾದ ನಂತರವೂ ಸುಚಿತ್ರಾ ಪ್ರಕಾಶ್ ಜೊತೆ ಸ್ನೇಹ ಮುಂದುವರಿಸಿದ್ದಳು. ಪ್ರಕಾಶ್‌ಗೆ ಜೆಸಿಬಿ ಖರೀದಿಸಲು ಆರ್ಥಿಕವಾಗಿ ಸಹಾಯ ಕೂಡ ಮಾಡಿದ್ದಳು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 10, 2026 01:31 PM
Loading...
Unable to load recommendations.
Follow Us
ಬಸವರಾಜ್​ ಯರಗಣವಿ

ಬಸವರಾಜ್ ಯರಗಣವಿಯವರು ಮೂಲತಃ ಧಾರವಾಡ ಜಿಲ್ಲೆಯವರು. ಇವರು ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿ 2008ರ ಏಪ್ರಿಲ್ ನಿಂದ ವೃತ್ತಿ ಆರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 3 ವರ್ಷ, ನಂತರ ಹಾವೇರಿ ಜಿಲ್ಲೆಯಲ್ಲಿ 3 ವರ್ಷ ವರದಿಗಾರಿಕೆಯ ಕೆಲಸ ನಿರ್ವಹಿಸಿದ್ದಾರೆ. ಸಧ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಟಿವಿ9 ಕನ್ನಡ ಸುದ್ದಿ ವಾಹಿನಿಯ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ರಾಜಕೀಯ, ಅಪರಾಧ, ಮಹತ್ವದ ಬೆಳವಣಿಗೆ ಹಾಗೂ ಮಾನವೀಯ ಸುದ್ದಿಗಳನ್ನು ವರದಿ ಮಾಡಿರುವ ಅನುಭವವಿದೆ.

Read More