ಡಿಕೆಶಿ ನಟ್ಟು ಬೋಲ್ಟು ಹೇಳಿಕೆ: ಕರ್ನಾಟಕಕ್ಕೆ ಬಂದು ತಿರುಗೇಟು ನೀಡಿದ ಕಂಗನಾ ರಣಾವತ್
ಚಿತ್ರರಂಗದ ಬಗ್ಗೆ ಡಿಕೆ ಶಿವಕುಮಾರ್ ಅವರು ಮಾತನಾಡಿದ್ದನ್ನು ನಟಿ ಕಂಗನಾ ರಣಾವತ್ ಕೂಡ ಖಂಡಿಸಿದ್ದಾರೆ. ಚಿತ್ರರಂಗದವರ ನಟ್ಟು ಬೋಲ್ಟು ಟೈಟ್ ಮಾಡುವುದು ತಮಗೆ ಗೊತ್ತು ಎಂದು ಡಿಕೆಶಿ ಹೇಳಿದ್ದರು. ಅದನ್ನು ಅನೇಕ ಸೆಲೆಬ್ರಿಟಿಗಳು ವಿರೋಧಿಸಿದ್ದಾರೆ. ಈಗ ಬಾಲಿವುಡ್ ನಟಿ ಕಂಗನಾ ಕೂಡ ಆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
‘ಕಲಾವಿದರ ಜೊತೆ ಯಾವಾಗಲೂ ದೇವರು ಇರುತ್ತಾನೆ. ಅವರ ನಟ್ಟು ಟೈಟ್ ಮಾಡಲು ಬಂದರೆ ಕಾಪಾಡಲು ದೇವರು ಬರುತ್ತಾನೆ’ ಎಂದು ಕಂಗನಾ ರಣಾವತ್ ಅವರು ಹೇಳಿದ್ದಾರೆ. ಕನ್ನಡ ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಮಾಡುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದರು. ಅವರ ಈ ಮಾತಿಗೆ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ. ಕರ್ನಾಟಕಕ್ಕೆ ಬಂದ ಕಂಗನಾ ಅವರು ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.