ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ ಕೇಳಿ..

Updated By: ಮದನ್​ ಕುಮಾರ್​

Updated on: May 09, 2025 | 8:02 PM

‘ಎಲ್ಲಿಯೇ ಹೋದರೂ ನಮ್ಮ ಮೂಲವನ್ನು ನಾವು ಮರೆಯಬಾರದು. ಕನ್ನಡದ ಹೆಸರು ಉಳಿಸಬೇಕು. ಕಲಾವಿದರು ಇಲ್ಲಿಂದ ಹೋಗಿ ಅಲ್ಲಿ ನಟಿಸುತ್ತಿರುವುದಕ್ಕೆ ಜನರಿಗೂ ಹೆಮ್ಮೆ ಇದೆ’ ಎಂದು ನಟ ಚಂದು ಗೌಡ ಅವರು ಹೇಳಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು ಸಂಭಾವನೆ ಬಗ್ಗೆ ವಿಷಯ ಹಂಚಿಕೊಂಡಿದ್ದಾರೆ.

ಕನ್ನಡದ ಅನೇಕ ನಟ-ನಟಿಯರು ತೆಲುಗು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ನಟ ಚಂದು ಗೌಡ (Chandu Gowda) ಅವರು ತೆಲುಗು ಕಿರುತೆರೆಯಲ್ಲಿ ಹೆಸರು ಮಾಡಿದ್ದಾರೆ. ತೆಲುಗಿನಲ್ಲಿ ಸಿಗುವ ಸಂಭಾವನೆ (Chandu Gowda Salary) ಬಗ್ಗೆ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಎಲ್ಲರ ಅಗತ್ಯಗಳು ಬೇರೆ ಆಗಿರುತ್ತದೆ. ಸಂಭಾವನೆ ಜಾಸ್ತಿ-ಕಡಿಮೆ ಎಂಬ ಚರ್ಚೆ ನಾನು ಮಾಡಲ್ಲ. ಯಾಕೆಂದರೆ ನನಗೆ ಎರಡೂ ಕಡೆಗಳಲ್ಲಿ ಒಂದೇ ರೀತಿಯ ಸಂಭಾವನೆ ಇದೆ’ ಎಂದು ಚಂದು ಗೌಡ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.