ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?

Edited By:

Updated on: Jun 26, 2025 | 9:24 PM

ದಾಂಪತ್ಯದಲ್ಲಿ ಇರುವ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಜನರು ಈ ದೇವಾಯಲಕ್ಕೆ ಬರುತ್ತಾರೆ. ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಾರೆ. ನಟ ದರ್ಶನ್ ಹಾಗೂ ಅವರ ಕುಟುಂಬದವರು ಮಾಡಿಸಿದ ಪೂಜೆಯ ಬಗ್ಗೆ ದೇವಸ್ಥಾನದ ಸಿಬ್ಬಂದಿ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..

ಪ್ರತಿ ವರ್ಷ 28 ದಿನಗಳು ಮಾತ್ರ ಕೇರಳದ ಕೊಟ್ಟಿಯೂರು ದೇವಸ್ಥಾನ (Kottiyoor Temple) ತೆರೆದಿರುತ್ತದೆ. ಈ ದೇವಸ್ಥಾನಕ್ಕೆ ದಂಪತಿಗಳು ಬರುವುದೇ ಹೆಚ್ಚು.ಇತ್ತೀಚೆಗೆ ನಟ ದರ್ಶನ್ (Darshan) ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರು ಇಲ್ಲಿಗೆ ಭೇಟಿ ನೀಡಿದ್ದರು. ದಾಂಪತ್ಯದಲ್ಲಿ ಇರುವ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಈ ದೇವಾಯಲಕ್ಕೆ ಜನರು ಬರುತ್ತಾರೆ. ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಾರೆ. ದರ್ಶನ್ ಮಾಡಿಸಿದ ಪೂಜೆಯ ಬಗ್ಗೆ ದೇವಸ್ಥಾನದ ಸಿಬ್ಬಂದಿ ಮಾತನಾಡಿದ್ದಾರೆ. ‘ಬೆಳ್ಳಿ ಕೊಡವನ್ನು ದೇವರಿಗೆ ಸಮರ್ಪಿಸುವುದಾಗಿ ದರ್ಶನ್ ಹೇಳಿದ್ದಾರೆ. ಇಡೀ ಕುಟುಂಬದವರು ಸಂತೋಷವಾಗಿ ವಾಪಸ್ ತೆರಳಿದರು. ಮುಂದಿನ ವರ್ಷ ಕೂಡ ಅವರು ಬರುತ್ತಾರೆ’ ಎಂದು ದೇವಸ್ಥಾನದ ಸಿಬ್ಬಂದಿ ರಮೇಶ್ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.