ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ: ಆಸ್ಪತ್ರೆ ಎದುರು ಪತ್ನಿ, ಮಗನ ಕಣ್ಣೀರು

Updated on: Nov 06, 2025 | 1:39 PM

ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ಹರೀಶ್ ರಾಯ್ ಅವರು ಕೊನೆಯುಸಿರು ಎಳೆದಿದ್ದಾರೆ. ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಇಂದು (ನವೆಂಬರ್ 6) ನಿಧನರಾಗಿದ್ದಾರೆ. ಅವರ ಕುಟುಂಬದವರು ಶೋಕದಲ್ಲಿ ಮುಳುಗಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..

ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿದ್ದ ಹರೀಶ್ ರಾಯ್ (Harish Roy) ಅವರು ಕೊನೆಯುಸಿರು ಎಳೆದಿದ್ದಾರೆ. ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಇಂದು (ನ.6) ನಿಧನರಾಗಿದ್ದಾರೆ. ಅವರ ಕುಟುಂಬದವರು ಶೋಕದಲ್ಲಿ ಮುಳುಗಿದ್ದಾರೆ. ಪತ್ನಿ ಆರತಿ ಹಾಗೂ ಮಗ ರೋಷನ್ ಅವರು ಆಸ್ಪತ್ರೆಯ ಮುಂಭಾಗ ಕಣ್ಣೀರು ಹಾಕುತ್ತಿದ್ದಾರೆ. ಹರೀಶ್ ರಾಯ್ ನಿಧನಕ್ಕೆ (Harish Roy Death) ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆ. ಹರೀಶ್ ರಾಯ್ ಅವರ ಚಿಕಿತ್ಸೆಗೆ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ನೆರವಾಗಿದ್ದರು. ಅದರಿಂದ ಹರೀಶ್ ರಾಯ್ ಅವರಿಗೆ ಸಹಾಯ ಆಗಿತ್ತು. ಹಾಗಿದ್ದರೂ ಕೂಡ ಅವರು ಕ್ಯಾನ್ಸರ್ (Cancer) ವಿರುದ್ಧ ಹೋರಾಡಿ ಗೆಲ್ಲಲು ಸಾಧ್ಯವಾಗಲಿಲ್ಲ. 55ನೇ ವಯಸ್ಸಿನಲ್ಲಿ ಅವರು ಮೃತರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.