ಚಿಕ್ಕಮಗಳೂರಲ್ಲಿ ಜಮೀನು ಸರ್ವೆ ವೇಳೆ ಹೈಡ್ರಾಮಾ: ಕಾಂತಾರಾ ಸಿನಿಮಾ ನೆನಪಿಸಿದ ವ್ಯಕ್ತಿ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಕುಟುಂಬದ ನಡುವಿನ ಪಿತ್ರಾರ್ಜಿತ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದಿದೆ. ಕೋರ್ಟ್ ಆದೇಶದಂತೆ ಜಮೀನು ಸರ್ವೆ ಕಾರ್ಯ ನಡೆಯುತ್ತಿದ್ದ ವೇಳೆ, ವ್ಯಕ್ತಿಯೊಬ್ಬ ದೈವ ಬಂದಂತೆ ವರ್ತಿಸಿದ್ದು ಕೈಯಲ್ಲಿ ದೊಂದಿ ಹಿಡಿದು ಬಂದು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.
ಚಿಕ್ಕಮಗಳೂರು, ನವೆಂಬರ್ 06: ಜಮೀನು ಸರ್ವೆ ವೇಳೆ ಕೈಯಲ್ಲಿ ಬೆಂಕಿ ಹಿಡಿದು ಕಾಂತಾರ ಸಿನಿಮಾದಲ್ಲಿ ಬರುವ ದೈವದ ರೀತಿಯಲ್ಲೇ ವರ್ತಿಸಿ ವ್ಯಕ್ತಿಯೋರ್ವ ಹೈಡ್ರಾಮಾ ನಡೆಸಿರುವ ಪ್ರಸಂಗ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಚಿಕ್ಕನಗುಂಡಿ ಗ್ರಾಮದಲ್ಲಿ ನಡೆದಿದೆ. ಜಮೀನು ಸರ್ವೆ ಮಾಡುವ ಸ್ಥಳಕ್ಕೆ ದೈವ ಮೈಮೇಲೆ ಬಂದಿದೆ ಎಂದು ಹೈಡ್ರಾಮಾ ಮಾಡಿ ಬಂದ ವ್ಯಕ್ತಿ ಸುರೇಶ್, ಓಡಿಬಂದು ನಿಂತಿದ್ದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಕಂಡು ಜಮೀನು ಸರ್ವೆಗೆ ಬಂದಿದ್ದ ಅಧಿಕಾರಿಗಳು, ಪೊಲೀಸರು ಶಾಕ್ ಆಗಿದ್ದಾರೆ. ಸುರೇಶ್ ಅಣ್ಣ ತಮ್ಮರ ನಡುವೆ ಪಿತ್ರಾರ್ಜಿತ ಆಸ್ತಿಗಾಗಿ ಗಲಾಟೆ ನಡೆದಿದ್ದು,ಸರ್ವೆ ನಡೆಸುವಂತೆ ಕೊಪ್ಪ JMFC ಕೋರ್ಟ್ ಆದೇಶಿಸಿದೆ. ಹೀಗಾಗಿ ಜಮೀನು ಸರ್ವೆ ನಡೆಸಲಾಗುತ್ತಿದ್ದ ವೇಳೆ ಬೆಂಕಿ ಹಿಡಿದು ಬಂದ ಸುರೇಶ್, ತನ್ನ ತಮ್ಮನ ಹೆಂಡತಿ ರಮ್ಯಾ ಮೇಲೆ ಹಲ್ಲೆ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

