AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವ್ ಒಲ್ಲೆ ಎಂದ ಯುವಕ: ಸಿಟ್ಟಿನಲ್ಲಿ ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಯುವತಿ ಅರೆಸ್ಟ್

ಲವ್ ಒಲ್ಲೆ ಎಂದ ಯುವಕ: ಸಿಟ್ಟಿನಲ್ಲಿ ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಯುವತಿ ಅರೆಸ್ಟ್

ಪ್ರಜ್ವಲ್​ ಕುಮಾರ್ ಎನ್​ ವೈ
| Updated By: Ganapathi Sharma|

Updated on:Nov 06, 2025 | 2:17 PM

Share

ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪದಲ್ಲಿ ಗುಜರಾತ್ ಮೂಲದ ಮಹಿಳಾ ಟೆಕ್ಕಿ ರೆನೆ ಜೋಶಿಲ್ದಾ ಎಂಬಾಕೆಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ದೊರೆತ ಪ್ರಾಥಮಿಕ ಮಾಹಿತಿಯ ಪ್ರಕಾರ, ಬಂಧಿತೆ ರೆನೆ ಜೋಶಿಲ್ದಾ ಇಂಟರ್ನೆಟ್ ಪ್ರಾಕ್ಸಿ ಹಾಗೂ ನಕಲಿ ಇ-ಮೇಲ್ ಖಾತೆಗಳ ಮೂಲಕ ಈ ಬೆದರಿಕೆ ಸಂದೇಶ ಕಳುಹಿಸಿದ್ದಳು ಎಂಬುದು ಗೊತ್ತಾಗಿದೆ.

ಬೆಂಗಳೂರು, ನವೆಂಬರ್ 6: ಕರ್ನಾಟಕ ರಾಜಧಾನಿ ಬೆಂಗಳೂರಿನ ಹಲವು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಪ್ರಕರಣದಲ್ಲಿ ಗುಜರಾತ್ ಮೂಲದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್‌ ರೆನೆ ಜೋಶಿಲ್ದಾ ಎಂಬಾಕೆಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಆಕೆ ಯುವಕನೊಬ್ಬನನ್ನು ಪ್ರೀತಿಸಿದ್ದಳು. ಯುವಕ ಆಕೆಯ ಪ್ರೀತಿಯನ್ನು ನಿರಾಕರಿಸಿದ್ದ. ಹೀಗಾಗಿ ಯುವಕನನ್ನು ಸಿಲುಕಿಸುವ ಉದ್ದೇಶದಿಂದ ಆಕೆ ಸಂಚು ಹೂಡಿದ್ದಳು. ಶಾಲೆಗಳಿಗೆ ಬಾಂಬ್​​ ಬೆದರಿಕೆ ಸಂದೇಶ ಕಳುಹಿಸಿ ಸಿಲುಕಿಸಲು ಉದ್ದೇಶಿಸಿದ್ದಳು. ಆಕೆ ವಿಪಿಎನ್ ಬಳಸಿ ಬೆದರಿಕೆ ಇ-ಮೇಲ್ ಕಳುಹಿಸಿರುವುದು ಪತ್ತೆಯಾಗಿದೆ. ಗೇಟ್ ಕೋಡ್ ಎಂಬ ಅಪ್ಲಿಕೇಷನ್ ಮೂಲಕ ವರ್ಚುವಲ್ ಮೊಬೈಲ್ ನಂಬರ್ ಪಡೆದು ಕೃತ್ಯ ಎಸಗಿರುವುದು ಗೊತ್ತಾಗಿದೆ.

ಬಂಧಿತ ಮಹಿಳೆ ಬಳಿ 7 ವಾಟ್ಸ್​​ಆ್ಯಪ್​​ ಖಾತೆಗಳು ಇರುವುದು ಪತ್ತೆಯಾಗಿದೆ. ಈ ಹಿಂದೆಯೂ ಬಾಂಬ್​ ಬೆದರಿಕೆ ಕೇಸ್​​​ನಲ್ಲಿ ಮಹಿಳೆಯ ಬಂಧನವಾಗಿತ್ತು. ಚೆನ್ನೈ ಪೊಲೀಸರು ಬಂಧಿಸಿದ್ದರು. ಆಕೆಯ ವಿರುದ್ಧ ದೇಶದ ಹಲವೆಡೆ ಕೇಸ್​​ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಗಳೂರಿನ 7 ಶಾಲೆಗಳಿಗೆ ಬಂದಿತ್ತು ಬಾಂಬ್ ಬೆದರಿಕೆ ಸಂದೇಶ

ಕೆಲವು ವಾರಗಳ ಹಿಂದೆ ಬೆಂಗಳೂರಿನ 7 ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಇದರಿಂದ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿತ್ತು. ಶಾಲಾ ಆವರಣಗಳಲ್ಲಿ ಪೊಲೀಸರು ಬೃಹತ್ ಮಟ್ಟದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಯಾವುದೇ ಸ್ಫೋಟಕ ವಸ್ತುಗಳು ಸಿಕ್ಕಿಲ್ಲವೆಂದು ಸ್ಪಷ್ಟಪಡಿಸಿದ್ದರು.

ಘಟನೆಯ ನಂತರ ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡು, ಆ ಇ-ಮೇಲ್‌ಗಳ ಮೂಲವನ್ನು ಪತ್ತೆಹಚ್ಚಿದರು. ತನಿಖೆ ವೇಳೆ ಆ ಇ-ಮೇಲ್‌ಗಳು ಬೆಂಗಳೂರಿಗಷ್ಟೇ ಅಲ್ಲದೆ ಚೆನ್ನೈ, ಹೈದರಾಬಾದ್ ಮತ್ತು ಗುಜರಾತ್‌ನ ಕೆಲವು ಶಾಲೆಗಳಿಗೂ ಕಳುಹಿಸಲ್ಪಟ್ಟಿದ್ದವು ಎಂಬುದೂ ಬಹಿರಂಗವಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 06, 2025 01:54 PM