ಹಾಸನದಲ್ಲಿ ರವಿಚಂದ್ರನ್ ನೋಡಲು ಮುಗಿಬಿದ್ದ ಜನ; ವಿಡಿಯೋ ನೋಡಿ

Updated on: Sep 25, 2026 | 5:35 PM

ಖಾಸಗಿ ಕಾರ್ಯಕ್ರಮಕ್ಕೆ ಹಾಸನಕ್ಕೆ ಆಗಮಿಸಿದ್ದ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ವೇಳೆ ರವಿಚಂದ್ರನ್ ಅವರು ಹಾಸನದ ಬಗ್ಗೆ ಮಾತನಾಡಿದರು. ಒಬ್ಬೊರನ್ನ ಒಬ್ಬರು ಭೇಟಿಯಾಗಬೇಕಾದರೆ ಋಣ ಇರಬೇಕು. ನಿಮ್ಮ ಅಭಿಮಾನ, ಪ್ರೀತಿ ಇಲ್ಲಿಗೆ ಕರೆದುಕೊಂಡು ಬಂದಿದೆ’ ಎಂದು ಅವರು ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದ ಸಲುವಾಗಿ ಹಾಸನಕ್ಕೆ ಆಗಮಿಸಿದ್ದ ನಟ ‘ಕ್ರೇಜಿ ಸ್ಟಾರ್’ ವಿ. ರವಿಚಂದ್ರನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ವೇಳೆ ರವಿಚಂದ್ರನ್ ಅವರು ಹಾಸನದ ಬಗ್ಗೆ ಮಾತನಾಡಿದರು. ‘25 ವರ್ಷದ ಹಿಂದೆ ‘ಶಾಂತಿ ಕ್ರಾಂತಿ’ ಸಿನಿಮಾ ರಿಲೀಸ್ ಆದ ಸಮಯದಲ್ಲಿ ಹಾಸನಕ್ಕೆ ಬಂದಿದ್ದೆ. ಹಾಸನಕ್ಕೆ ಬಾರದೇ ನಾನು ಸಕಲೇಶಪುರಕ್ಕೆ ಹೋಗೋದೇ ಇಲ್ಲ. ಬೈಪಾಸ್ ಮಾಡಿ, ಬೈಪಾಸ್‌ನಲ್ಲಿ ಹೋಗುವ ಹಾಗೇ ಆಗಿದೆ ಪ್ರಪಂಚ ಈಗ. ಸಕಲೇಶಪುರಕ್ಕೆ ಜಾಸ್ತಿ ಶೂಟಿಂಗ್‌ಗೆ ಹೋಗಬೇಕಾದರೆ ಹಾಸನ ಮೇಲೆ ಹೋಗೊದು ನಾನು. ನನಗೆ ತುಂಬಾ ಇಷ್ಟವಾದ ಜಾಗ ಸಕಲೇಶಪುರ. ನಾನು ಎಲ್ಲೇ ಕಾಲಿಟ್ಟರು ಒಳ್ಳೆಯದಾಗಲಿ ಎಂದು ಬಯಸುವುದು ಸತ್ಯ. ನಾನು ಹಾಸನಕ್ಕೆ ಬಂದ ಕೂಡಲೇ ಮಳೆ ಕೂಡ ಬಂತು. ಒಬ್ಬೊರನ್ನ ಒಬ್ಬರು ಭೇಟಿಯಾಗಬೇಕಾದರೆ ಋಣ ಇರಬೇಕು. ನಿಮ್ಮ ಅಭಿಮಾನ, ಪ್ರೀತಿ ಇಲ್ಲಿಗೆ ಕರೆದುಕೊಂಡು ಬಂದಿದೆ’ ಎಂದು ರವಿಚಂದ್ರನ್ ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More