ಒಂದೇ ಒಂದು ಗುಡ್​ ನ್ಯೂಸ್​ಗಾಗಿ ಕಾಯುತ್ತಿದೆ ಚಿತ್ರರಂಗ; ಮತ್ತೆ ರಂಗೇರಲಿದೆ ಗಾಂಧಿನಗರ

| Updated By: ಮದನ್​ ಕುಮಾರ್​

Updated on: Sep 21, 2021 | 9:58 AM

ಕೊರೊನಾ ವೈರಸ್​ ಎರಡನೇ ಅಲೆ ಕಾರಣದಿಂದ ಚಿತ್ರಮಂದಿರದಲ್ಲಿ ಕೇವಲ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇದೆ. ಶೇ.100ರಷ್ಟು ಆಸನ ಭರ್ತಿಗೆ ಅನುಮತಿ ಸಿಗಲಿ ಎಂದು ಇಡೀ ಚಿತ್ರರಂಗ ಕಾಯುತ್ತಿದೆ.

ಗಾಂಧಿನಗರದಲ್ಲಿ ಈಗ ಮೊದಲಿದ್ದ ವೈಭವ ಇಲ್ಲ. ಕೊರೊನಾ ಹಾವಳಿಯಿಂದಾಗಿ ಚಿತ್ರಮಂದಿರಗಳು ಬಿಕೋ ಎನ್ನುತ್ತಿವೆ. ಸದ್ಯಕ್ಕೆ ಕೇವಲ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇದೆ. ಆದರೆ ಶೀಘ್ರದಲ್ಲೇ ಶೇ.100ರಷ್ಟು ಆಸನ ಭರ್ತಿಗೆ ಅನುಮತಿ ಸಿಗುವ ಸಾಧ್ಯತೆ ಇದೆ. ಸರ್ಕಾರದಿಂದ ಬರಲಿರುವ ಆ ಒಂದು ಆದೇಶಕ್ಕಾಗಿ ಇಡೀ ಚಿತ್ರರಂಗ ಕಾದು ಕುಳಿತಿದೆ. ಈ ಹಿನ್ನೆಲೆಯಲ್ಲಿ ಭರ್ಜರಿ ತಯಾರಿ ಕೂಡ ಮಾಡಿಕೊಳ್ಳಲಾಗುತ್ತಿದೆ. ಮೊದಲಿನ ವೈಭವ ಮರುಕಳಿಸಲು ದಿನಗಣನೆ ಶುರುವಾಗಿದೆ.

ಸ್ಯಾಂಡಲ್​ವುಡ್​ನಲ್ಲಿ ಅನೇಕ ಸ್ಟಾರ್​ ಸಿನಿಮಾಗಳು ರಿಲೀಸ್​ಗೆ ರೆಡಿ ಆಗಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಗಣೇಶ ಚತುರ್ಥಿ ಸಂದರ್ಭದಲ್ಲಿಯೇ ಆ ಸಿನಿಮಾಗಳು ರಿಲೀಸ್​ ಆಗಿ ಧೂಳೆಬ್ಬಿಸಬೇಕಿತ್ತು. ಆದರೆ ಕೊರೊನಾದಿಂದ ಅದು ಸಾಧ್ಯವಾಗಲಿಲ್ಲ. ಶಿವರಾಜ್​ಕುಮಾರ್​ ಅಭಿನಯದ ‘ಭಜರಂಗಿ 2’, ದುನಿಯಾ ವಿಜಯ್​ ನಟನೆಯ ‘ಸಲಗ’, ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಸೇರಿದಂತೆ ಅನೇಕ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.

ಇದನ್ನೂ ಓದಿ:

Kichcha Sudeep: ‘ಕೋಟಿಗೊಬ್ಬ 3’ ಚಿತ್ರದ ಓಟಿಟಿ ರಿಲೀಸ್​ ಬಗ್ಗೆ ಬಹುಕೋಟಿ ಗಾಸಿಪ್​; ಚಿತ್ರತಂಡದ ಸ್ಪಷ್ಟನೆ ಏನು?

Shivarajkumar: ‘ಭಜರಂಗಿ 2’ ರಿಲೀಸ್​ ಡೇಟ್​ ಮುಂದೂಡಿಕೆ; ಕೊರೊನಾ ಭೀತಿಯಿಂದ ಚಿತ್ರತಂಡದ ನಿರ್ಧಾರ