‘ಓವರ್ಲೋಡ್ ಮಾಡಿಕೊಳ್ಳೋಕೆ ಆಗಲ್ಲ’; ರಾಜಕೀಯದ ಬಗ್ಗೆ ಶಿವಣ್ಣ ಮಾತು..

Updated on: Dec 15, 2023 | 11:28 AM

ಶಿವಣ್ಣ ಅವರು ಈಗ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ರಾಜಕೀಯಕ್ಕೆ ಬರೋಕೆ ಇಷ್ಟ ಇಲ್ಲ. ಇದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಶಿವರಾಜ್​ಕುಮಾರ್ (Shivarajkumar) ಅವರ ವಯಸ್ಸು ಈಗ 61 ವರ್ಷ. ಈಗಲೂ ಅವರಲ್ಲಿ ಸಖತ್ ಎನರ್ಜಿ ಇದೆ. ಯುವಕರನ್ನು ನಾಚಿಸುವಂತೆ ಅವರು ಫೈಟ್, ಡ್ಯಾನ್ಸ್ ಮಾಡುತ್ತಾರೆ. ಅವರು ಈಗ ಕೆಸಿಸಿ ಕಪ್ ಆಡುತ್ತಿದ್ದಾರೆ. ಇದಕ್ಕೆ ಅವರು ಪ್ರಾಕ್ಟಿಸ್ ಮಾಡಿಕೊಂಡಿದ್ದಾರೆ. ಶಿವಣ್ಣ ಅವರು ಈಗ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ರಾಜಕೀಯಕ್ಕೆ ಬರೋಕೆ ಇಷ್ಟ ಇಲ್ಲ. ಇದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ‘ನನಗೆ ಓವರ್​ಲೋಡ್ ಮಾಡಿಕೊಳ್ಳೋಕೆ ಆಗಲ್ಲ. ನಾನು ಸಿನಿಮಾ ಲೈನ್​ನಲ್ಲಿ ಚೆನ್ನಾಗಿದ್ದೇನೆ. ಹೀಗಿರುವಾಗ ಮತ್ತೊಂದು ಲೈನ್​​ಗೆ ಕಾಲಿಡೋದು ಏಕೆ? ಜನರು ನನ್ನ ಹೀರೋ ಆಗಿ ಒಪ್ಪಿದ್ದಾರೆ. ನನ್ನ ಸಿನಿಮಾ ನೋಡಲು ಬಯಸುತ್ತಿದ್ದಾರೆ. ಇದರಲ್ಲೇ ಮುಂದುವರಿಯುವೆ’ ಎಂದಿದ್ದಾರೆ ಶಿವಣ್ಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More