ಸೋಲಿನಿಂದ ಕಂಗೆಡುವುದು ಬೇಡ ಮತ್ತಷ್ಟು ಸಂಘಟಿತರಾಗಿ ಕೆಲಸ ಮಾಡೋಣ; ಕಾರ್ಯಕರ್ತರಿಗೆ ಸಂಯುಕ್ತಾ ಪಾಟೀಲ್ ಕರೆ

|

Updated on: Jun 06, 2024 | 2:48 PM

ಚುನಾವಣೆಯಲ್ಲಿ 6.20 ಲಕ್ಷಕ್ಕಿಂತ ಹೆಚ್ಚು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ, ಅಷ್ಟು ಜನರನ್ನು ತಾನು ಭೇಟಿಯಾಗಿಲ್ಲವಾದರೂ ಅವರು ತನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸ ಅನನ್ಯವಾದದ್ದು ಅವರಿಗೆ ತಾನು ಚಿರಋಣಿಯಾಗಿದ್ದೇನೆ ಎಂದು ಸಚಿವ ಶಿವಾನಂದ ಪಾಟೀಲ್ ಪುತ್ರಿ ಹೇಳಿದರು. ಚುನಾವಣೆ ಸಂದರ್ಭದಲ್ಲಿ ತನ್ನ ಬೆನ್ನೆಲುಬಾಗಿ ನಿಂತ ಪತಿ, ತಾಯಿ ಮತ್ತು ತಂಗಿಯನ್ನು ಸಹ ಅವರು ನೆನೆದರು.

ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಯುವ ಕಾಂಗ್ರೆಸ್ ನೇತಾರೆ ಸಂಯುಕ್ತಾ ಪಾಟೀಲ್ (Samyukta Patil) ಇಂದು ನಗರದಲ್ಲಿ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಚುನಾವಣೆಯಲ್ಲಿ ತನ್ನ ಪರವಾಗಿ ಕೆಲಸ ಮಾಡಿದ ಪಕ್ಷದ ನಾಯಕರಿಗೆ, ಮುಖಂಡರಿಗೆ ಮತ್ತು ಬಾಗಲಕೋಟೆ ಹಾಗೂ ವಿಜಯಪುರದ ಸಮಸ್ತ ಕಾರ್ಯಕರ್ತರಿಗೆ (party workers) ಕೃತಜ್ಞತೆಗಳನ್ನು ಸಲ್ಲಿಸಿದರು. ಸೋಲಿನಿಂದ ಕಾರ್ಯಕರ್ತರು ಧೃತಿಗೆಡಬೇಕಿಲ್ಲ, ಇದು ವಿರೋಚಿತ ಸೋಲು ಯಾಕೆಂದರೆ 2019 ರ ಲೋಕಸಭಾ ಚುನಾವನಣೆಯಲ್ಲಿ (2019 Lok Sabha Polls) ತಮ್ಮ ಪಕ್ಷದ ಅಭ್ಯರ್ಥಿ ಗಳಿಸಿದ ಮತಗಳಿಗಿಂತ ಒಂದು ಲಕ್ಷ ಮತ ಹೆಚ್ಚು ಪಡೆದಿದ್ದೇವೆ, ಹಾಗಾಗಿ ಮತ್ತಷ್ಟು ಸಂಘಟಿತರಾಗಿ ನಾವು ಕೆಲಸ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಫಲಿತಾಂಶ ತಮ್ಮ ಪರವಾಗಿ ಬರಲಿದೆ ಎಂದು ಸಂಯುಕ್ತಾ ಹೇಳಿದರು. ಚುನಾವಣೆಯಲ್ಲಿ 6.20 ಲಕ್ಷಕ್ಕಿಂತ ಹೆಚ್ಚು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ, ಅಷ್ಟು ಜನರನ್ನು ತಾನು ಭೇಟಿಯಾಗಿಲ್ಲವಾದರೂ ಅವರು ತನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸ ಅನನ್ಯವಾದದ್ದು ಅವರಿಗೆ ತಾನು ಚಿರಋಣಿಯಾಗಿದ್ದೇನೆ ಎಂದು ಸಚಿವ ಶಿವಾನಂದ ಪಾಟೀಲ್ ಪುತ್ರಿ ಹೇಳಿದರು. ಚುನಾವಣೆ ಸಂದರ್ಭದಲ್ಲಿ ತನ್ನ ಬೆನ್ನೆಲುಬಾಗಿ ನಿಂತ ಪತಿ, ತಾಯಿ ಮತ್ತು ತಂಗಿಯನ್ನು ಸಹ ಅವರು ನೆನೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪಂಚಮಸಾಲಿ ಸಮುದಾಯದ ಹೆಸರು ಹೇಳಿಕೊಂಡು ಹೊರಗಿನಿಂದ ಬಂದು ಟಿಕೆಟ್ ಪಡೆಯುವುದು ಅನ್ಯಾಯ: ವೀಣಾ ಕಾಶಪ್ಪನವರ್​

Follow us on