ಮೂರನೇ ಬಾರಿಗೆ ದೇಶದ ನೇತೃತ್ವ ವಹಿಸಿರುವ ಪ್ರಧಾನಿ ಮೋದಿ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಮೂರನೇ ಬಾರಿಗೆ ದೇಶದ ನೇತೃತ್ವ ವಹಿಸಿರುವ ಪ್ರಧಾನಿ ಮೋದಿ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 10, 2024 | 1:03 PM

ಪ್ರಧಾನಿ ಮೋದಿಯವರ ಮಿಷನ್ 2047 ನಲ್ಲಿ ಅವರೊಂದಿಗೆ ಕೆಲಸ ಮಾಡುತ್ತಾ ದೇಶದ ಪ್ರಗತಿಗಾಗಿ ಅಲ್ಪ ಕಾಣಿಕೆ ನೀಡುವುದಾಗಿ ಕೇಂದ್ರ ಸಚಿವೆ ಹೇಳಿದರು. ಕ್ಷೇತ್ರಕ್ಕೆ ತಾನು ಹೊಸಬಳಾದರೂ, ಭಾರೀ ಬಹುಮತದಿಂದ ಗೆಲ್ಲಿಸಿರುವ ಬೆಂಗಳೂರು ಉತ್ತರ ಕ್ಷೇತ್ರದ ಜನತೆಗೆ ಚಿರಋಣಿಯಾಗಿದ್ದೇನೆ, ತನ್ನ ಗೆಲುವಿಗೆ ಹಗಲು ರಾತ್ರಿ ಶ್ರಮಪಟ್ಟ ಕಾರ್ಯಕರ್ತರಿಗೆ ಸ್ಥಳೀಯ ಮುಖಂಡರಿಗೆ ಧನ್ಯವಾದಗಳು ಎಂದು ಶೋಭಾ ಹೇಳಿದರು

ದೆಹಲಿ: ಮೂರನೇ ಬಾರಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿರುವ ನರೇಂದ್ರ ಮೋದಿಯವರ (PM Narendra Modi) ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಸಚಿವರಾಗಿರುವ ಶೋಭಾ ಕರಂದ್ಲಾಜೆ (Shobha Karandlaje) ಇಂದು ರಾಷ್ಟ್ರದ ರಾಜಧಾನಿಯಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿ, 2047 ವಿಕಸಿತ ಭಾರತದ (Viksit Bharat) ಸಂಕಲ್ಪದೊಂದಿಗೆ ಮತ್ತೊಮ್ಮೆ ಪ್ರಧಾನಿಯಾಗಿರುವ ಮೋದಿಯವರು ಸಾಮಾಜಿಕವಾಗಿ, ಆರ್ಥಿವಾಗಿಅ ದೇಶವನ್ನು ಮತ್ತಷ್ಟು ಸಧೃಢಗೊಳಿಸಲು ಕಟಿಬದ್ಧರಾಗಿದ್ದು ಅವರೊಂದಿಗೆ ಪುನಃ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ತನ್ನ ಅದೃಷ್ಟ ಎಂದು ಹೇಳಿದರು. ಪ್ರಧಾನಿ ಮೋದಿಯವರೊಂದಿಗೆ ಕೆಲಸ ಮಾಡೋದೇ ಒಂದು ವಿಶಿಷ್ಟ ಅನುಭವ ಎಂದು ಹೇಳಿದ ಶೋಭಾ ಕರಂದ್ಲಾಜೆ ರಾಜ್ಯದಿಂದ 5ಜನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದೇವೆ, ಸಂಸ್ತತಿಗೆ ಆಯ್ಕೆಯಾಗಿರುವ ಎಲ್ಲ ಸಹಯೋಗಿಗಳಿಗೆ ಅಭಿನಂದನೆಗಳು. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಪ್ರಧಾನಿ ಮೋದಿಯವರ ಮಿಷನ್ 2047 ನಲ್ಲಿ ಅವರೊಂದಿಗೆ ಕೆಲಸ ಮಾಡುತ್ತಾ ದೇಶದ ಪ್ರಗತಿಗಾಗಿ ಅಲ್ಪ ಕಾಣಿಕೆ ನೀಡುವುದಾಗಿ ಕೇಂದ್ರ ಸಚಿವೆ ಹೇಳಿದರು. ಕ್ಷೇತ್ರಕ್ಕೆ ತಾನು ಹೊಸಬಳಾದರೂ, ಭಾರೀ ಬಹುಮತದಿಂದ ಗೆಲ್ಲಿಸಿರುವ ಬೆಂಗಳೂರು ಉತ್ತರ ಕ್ಷೇತ್ರದ ಜನತೆಗೆ ಚಿರಋಣಿಯಾಗಿದ್ದೇನೆ, ತನ್ನ ಗೆಲುವಿಗೆ ಹಗಲು ರಾತ್ರಿ ಶ್ರಮಪಟ್ಟ ಕಾರ್ಯಕರ್ತರಿಗೆ ಸ್ಥಳೀಯ ಮುಖಂಡರಿಗೆ ಧನ್ಯವಾದಗಳು ಎಂದು ಶೋಭಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಎಂಪಿಯಾಗೋಕೆ ಬಂದಿದ್ದಾ? ಬೆಂಕಿ ಹಚ್ಚೋಕೆ ಬಂದಿದ್ದಾ? ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಶಾಸಕ ಆಕ್ರೋಶ