ಸೂರಜ್ ರೇವಣ್ಣ ಬಗ್ಗೆ ಕೇಳಿದಾಗ ಮತ್ತೊಮ್ಮೆ ಅಸಹನೆ, ಸಿಡುಕುತನ ಪ್ರದರ್ಶಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ

|

Updated on: Jun 23, 2024 | 1:27 PM

ಈ ಪ್ರಶ್ನೆಯನ್ನು ನಂಗ್ಯಾಕೆ ಕೇಳ್ತೀರಿ? ನಂಗೂ ಅದಕ್ಕೂ ಏನು ಸಂಬಂಧ? ಇಂಥ ಪ್ರಶ್ನೆಗಳಿಗೆ ಉತ್ತರಿಸುವ ಅವಶ್ಯಕತೆ ನಂಗಿಲ್ಲ, ಅಂತ ಹೇಳುತ್ತಾ ಕಾರು ಹತ್ತುತ್ತಾರೆ. ಕನ್ನಡ ಮಾಧ್ಯಮದ ವರದಿಗಾರ್ತಿಯೊಬ್ಬರು ಈ ಪ್ರಶ್ನೆಗಳಿಗೆ ನೀವು ಉತ್ತರಿಸಲ್ವಾ ಸರ್? ಅಂತ ನೇರವಾಗಿ ಕೇಳಿದಾಗ, ಮಾತಾಡೋಣ ಬನ್ನಿ ಅನ್ನುತ್ತಾ ಅಲ್ಲಿಂದ ಪಲಾಯನಗೈಯುತ್ತಾರೆ! ನಂಗ್ಯಾಕೆ ಈ ಪ್ರಶ್ನೆ ಅಂತ ಕುಮಾರಸ್ವಾಮಿ ಕೇಳೋದೇ ಬಾಲಿಷತನ.

ಬೆಂಗಳೂರು: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಕೋ ಗುಸ್ಸಾ ಕ್ಯೊಂ ಆತಾ ಹೈ? ಬೇರೆ ಯಾವುದೇ ಪ್ರಶ್ನೆ ಕೇಳಿದರೆ ಶಾಂತಚಿತ್ತರಾಗಿ ಉತ್ತರಸುವ ಕುಮಾರಣ್ಣ ತಮ್ಮಣ್ಣ ರೇವಣ್ಣನ (HD Revanna) ಮಗ ಸೂರಜ್ ರೇವಣ್ಣ (Suraj Revanna) ಬಗ್ಗೆ ಪ್ರಶ್ನೆ ಕೇಳಿದಾಕ್ಷಣ ಉರಿದು ಬೀಳುತ್ತಾರೆ. ಬೆಂಗಳೂರಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಇಂಗ್ಲಿಷ್ ಮಾಧ್ಯಮದ ವರದಿಗಾರ್ತಿಯೊಬ್ಬರು ನೀಟ್ ಪರೀಕ್ಷೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರಗಳು ಬೆಳಕಿಗೆ ಬಂದ ನಂತರ ಎನ್ ಟಿಎ ಮುಖ್ಯಸ್ಥನನ್ನು ಕೇಂದ್ರ ಸರ್ಕಾರ ವರ್ಗಾವಣೆ ಮಾಡಿರುವ ಬಗ್ಗೆ ಕುಮಾರಸ್ವಾಮಿಯವರು ಅಭಿಪ್ರಾಯ ಕೇಳಿದಾಗ ಅವರು ಸಮಾಧಾನಚಿತ್ತದಿಂದ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾತಾಡುತ್ತಾರೆ. ಆದರೆ ಅದೇ ವರದಿಗಾರ್ತಿ ಸೂರಜ್ ರೇವಣ್ಣ ಯುವಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಲ್ಲಿ ಅರೆಸ್ಟ್ ಆಗಿರುವ ಬಗ್ಗೆ ಪ್ರಶ್ನೆ ಕೇಳಿದಾಗ ನಖಶಿಖಾಂತ ಉರಿದುಬೀಳುತ್ತಾರೆ.

ಈ ಪ್ರಶ್ನೆಯನ್ನು ನಂಗ್ಯಾಕೆ ಕೇಳ್ತೀರಿ? ನಂಗೂ ಅದಕ್ಕೂ ಏನು ಸಂಬಂಧ? ಇಂಥ ಪ್ರಶ್ನೆಗಳಿಗೆ ಉತ್ತರಿಸುವ ಅವಶ್ಯಕತೆ ನಂಗಿಲ್ಲ, ಅಂತ ಹೇಳುತ್ತಾ ಕಾರು ಹತ್ತುತ್ತಾರೆ. ಕನ್ನಡ ಮಾಧ್ಯಮದ ವರದಿಗಾರ್ತಿಯೊಬ್ಬರು ಈ ಪ್ರಶ್ನೆಗಳಿಗೆ ನೀವು ಉತ್ತರಿಸಲ್ವಾ ಸರ್? ಅಂತ ನೇರವಾಗಿ ಕೇಳಿದಾಗ, ಮಾತಾಡೋಣ ಬನ್ನಿ ಅನ್ನುತ್ತಾ ಅಲ್ಲಿಂದ ಪಲಾಯನಗೈಯುತ್ತಾರೆ! ನಂಗ್ಯಾಕೆ ಈ ಪ್ರಶ್ನೆ ಅಂತ ಕುಮಾರಸ್ವಾಮಿ ಕೇಳೋದೇ ಬಾಲಿಷತನ.

ಅವರು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಹಿಂದೆ ಪ್ರಜ್ವಲ್ ರೇವಣ್ಣ ಬಗ್ಗೆ ಕೇಳಿದಾಗ ಸುದೀರ್ಘವಾದ ಉತ್ತರಗಳನ್ನು ನೀಡಿದ್ದರು ಮತ್ತು ಕೊನೆಗೆ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಸೂರಜ್ ರನ್ನೂ ಉಚ್ಚಾಟಿಸುತ್ತೀರಾ ಅಂತ ಅವರನ್ನಲ್ಲದೆ ಕೆಪಿಸಿಸಿ ಅಧ್ಯಕ್ಷರನ್ನು ಕೇಳಲಾದೀತೆ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅವಸರದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಬಂದ ಹೆಚ್ ಡಿ ಕುಮಾರಸ್ವಾಮಿ, ಸೂರಜ್ ರೇವಣ್ಣ ಬಗ್ಗೆ ಕೇಳಿದಾಗ ಸಿಡುಕಿದರು!

Published on: Jun 23, 2024 12:45 PM