ರಾಹುಲ್ ಗಾಂಧಿ ಇವತ್ತು ಹಾಜರಾಗದಿದ್ದರೆ ಕೋರ್ಟ್ ವಾರಂಟ್ ಜಾರಿಗೊಳಿಸಲಿದೆ: ವಿನೋದ, ಬಿಜೆಪಿ ಪರ ವಕೀಲ

ರಾಹುಲ್ ಗಾಂಧಿ ಇವತ್ತು ಹಾಜರಾಗದಿದ್ದರೆ ಕೋರ್ಟ್ ವಾರಂಟ್ ಜಾರಿಗೊಳಿಸಲಿದೆ: ವಿನೋದ, ಬಿಜೆಪಿ ಪರ ವಕೀಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 01, 2024 | 12:33 PM

ವಕೀಲ ವಿನೋದ್ ಹೇಳುವ ಪ್ರಕಾರ ಕಾಂಗ್ರೆಸ್ ನಾಯಕರು ಆಗಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಭ್ರಷ್ಟಾಚಾರದ ಆಧಾರರಹಿತ ಆರೋಪಗಳನ್ನು ಮಾಡಿದ್ದರು. ಇದೇ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿತ್ತು.

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಇಂದು ನಗರದ ಸಿವಿಲ್ ಕೋರ್ಟ್ ಗೆ ಹಾಜರಾದರು. ಅವರಿಬ್ಬರು ಮತ್ತು ರಾಹುಲ್ ಗಾಂಧಿ (Rahul Gandhi) ವಿರುದ್ಧ ಕರ್ನಾಟಕ ಬಿಜೆಪಿ ಮಾನನಷ್ಟ ಮೊಕದ್ದಮೆ ಹೂಡಿದೆ. ಬಿಜೆಪಿ ಪರ ವಕಾಲತ್ತು ವಹಿಸಿಕೊಂಡಿರುವ ವಕೀಲ ವಿನೋದ್ ಹೇಳುವ ಪ್ರಕಾರ ಕಾಂಗ್ರೆಸ್ ನಾಯಕರು ಆಗಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಭ್ರಷ್ಟಾಚಾರದ ಆಧಾರರಹಿತ ಆರೋಪಗಳನ್ನು ಮಾಡಿದ್ದರು. ಇದೇ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಖುದ್ದಾಗಿ ಹಾಜರಾಗುವಂತೆ ಕೋರ್ಟ್ ಆದೇಶ ನೀಡಿರುವುದರಿಂದ ಸಿಎಂ ಮತ್ತು ಡಿಸಿಎಂ ಇವತ್ತು ಹಾಜರಾಗಿದ್ದಾರೆ, ರಾಹುಲ್ ಗಾಂಧಿಯವರು ಸಹ ಹಾಜರಾಗಬೇಕೆಂದು ನ್ಯಾಯಾಲಯದ ಆದೇಶದಲ್ಲಿದೆ. ಈ ಹಿಂದೆ ಸಹ ಕೋರ್ಟ್ ಹಾಜರಾಗುವಂತೆ ಆದೇಶ ನೀಡಿದ್ದಾಗ ಚುನಾವಣೆಯ ಕಾರಣ ಬರಲಾಗಲ್ಲ ಎಂದು ಹೇಳಿದ್ದರು, ಈ ಸಲವೂ ಅವರು ಬಾರದೆ ಹೋದರೆ ಕೋರ್ಟ್ ವಾರಂಟ್ ಜಾರಿಗೊಳಿಸುತ್ತದೆ ಎಂದು ವಕೀಲ ವಿನೋದ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪರಂಪರೆಯನ್ನು ಮಗನೇ ಮುಂದುವರೆಸಿಕೊಂಡು ಹೋಗಬೇಕು; ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಸ್ಪರ್ಧೆಗೆ ಶಶಿ ತರೂರ್ ಸ್ಪಷ್ಟನೆ