ನಾಳೆ ಮಧ್ಯಾಹ್ನದವರೆಗೆ ಇಂಡಿಯಾ ಮೈತ್ರಿಕೂಟ ನಾವೇ ಅಧಿಕಾರಕ್ಕೆ ಬರೋದು ಅನ್ನುತ್ತೆ: ಕೆಎಸ್ ಈಶ್ವರಪ್ಪ

|

Updated on: Jun 03, 2024 | 1:22 PM

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಹಿಂದಿನ ದಿನ ಫೇಕ್ ವಿಡಿಯೋಗಳನ್ನ ರಿಲೀಸ್ ಮಾಡಿ ತಮ್ಮ ವಿರುದ್ಧ ನಡೆದ ಷಡ್ಯಂತ್ರದ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಕ್ಕೆ, ತನ್ನ ದೂರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸಲಾಗಿದೆಯೆಂದು ಬರೆದಿರುವ ಪತ್ರ ಸಿಕ್ಕಿದೆ ಆದರೆ ಕೇಂದ್ರ ಆಯೋಗ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಈಶ್ವರಪ್ಪ ಹೇಳಿದರು.

ಶಿವಮೊಗ್ಗ: ಭಾರತೀಯರ ಹೃದಯ ಗೆದ್ದಿರುವ ನರೇಂದ್ರ ಮೋದಿಯವರು (PM Narendra Modi) ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಮತದಾನೋತ್ತರ ಸಮೀಕ್ಷೆಗಳ ಮೂಲಕ ಜನರ ಭಾವನೆಗಳು ಹೊರಬಿದ್ದಿವೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಅವರು, ಇಂಡಿಯಾ ಮೈತ್ರಿಕೂಟದವರು (INDIA alliance) ನಾಳೆ ಮಧ್ಯಾಹ್ನದವರೆಗೆ ತಾವೇ ಅಧಿಕಾರಕ್ಕೆ ಬರೋದು ಅಂತ ಹೇಳುತ್ತಾರೆ, ಫಲಿತಾಂಶಗಳು ಹೊರಬಿದ್ದ ಮೇಲೆ ಈವಿಎಂಗಳ ಟ್ಯಾಂಪರಿಂಗ್ ನಡೆದಿದೆ, ನರೇಂದ್ರ ಮೋದಿಯವರು ಪುನಃ ಪ್ರಧಾನಮಂತ್ರಿಯಾಗುತ್ತಿರುವುದು ಆಕಸ್ಮಿಕ ಅನ್ನುತ್ತಾರೆ ಎಂದರು. ಲೋಕಸಭಾ ಚುನಾವಣೆ ಫಲಿತಾಂಶಗಳ ನಂತರ ರಾಜ್ಯದ ರಾಜಕೀಯ ಚಿತ್ರಣ ಬದಲಾಗಲಿದೆ ಎಂದು ಹೇಳಿದ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಹಿಂದಿನ ದಿನ ಫೇಕ್ ವಿಡಿಯೋಗಳನ್ನ ರಿಲೀಸ್ ಮಾಡಿ ತಮ್ಮ ವಿರುದ್ಧ ನಡೆದ ಷಡ್ಯಂತ್ರದ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಕ್ಕೆ, ತನ್ನ ದೂರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸಲಾಗಿದೆಯೆಂದು ಬರೆದಿರುವ ಪತ್ರ ಸಿಕ್ಕಿದೆ ಆದರೆ ಕೇಂದ್ರ ಆಯೋಗ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು. ಒಂದು ಪಕ್ಷ ಕೇಂದ್ರ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳದಿದ್ದರೆ ತಾವು ಕೋರ್ಟ್ ಕದ ತಟ್ಟುವುದಾಗಿ ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಬಗೆದಿರುವ ರಾಘವೇಂದ್ರ ವಿರುದ್ಧ ಎಫ್ಐಆರ್ ದಾಖಲಾಗಬೇಕು: ಕೆಎಸ್ ಈಶ್ವರಪ್ಪ

Published On - 1:22 pm, Mon, 3 June 24

Follow us on