ಸಚಿವ ನಾಗೇಂದ್ರರನ್ನು ಸಂಪುಟದಿಂದ ವಜಾ ಮಾಡುವುದು, ಉಳಿಸಿಕೊಳ್ಳುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು: ಪ್ರಿಯಾಂಕ್ ಖರ್ಗೆ

Updated on: Jun 03, 2024 | 12:33 PM

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಬೆಳಕಿಗೆ ಬಂದಾಗ ನಾಗೇಂದ್ರ ಪಲಾಯನ ಮಾಡುವ ಪ್ರಯತ್ನ ಮಾಡಿಲ್ಲ, 24 ಗಂಟೆಯೊಳಗೆ ಸುದ್ದಿಗೋಷ್ಠಿ ನಡೆಸಿ ಹಣದ ದುರುಪಯೋಗ ನಡೆದಿರುವುದನ್ನು ಅಂಗೀಕರಿಸಿದರು, ಮೃತ ಪಿ ಚಂದ್ರಶೇಖರನ್ ಸಹ ನೇರವಾಗಿ ಸಚಿವನ ಮೇಲೆ ಆರೋಪ ಹೊರಿಸಿಲ್ಲ ಅಧಿಕಾರಿಗಳ ಮೇಲೆ ಒತ್ತಡವಿತ್ತು ಅಂತ ಹೇಳಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Development Corporation) ಅಗಿರುವ ಹಣಕಾಸಿನ ದುರ್ವ್ಯವಹಾರಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೊಡಬೇಕೋ ಬೇಡವೋ ಅನ್ನೋದು ಸಚಿವ ಬಿ ನಾಗೇಂದ್ರ (B Nagendra) ಅವರಿಗೆ ಬಿಟ್ಟ ವಿಚಾರ, ಹಾಗೆಯೇ ಅವರನ್ನು ಸಂಪುಟದಲ್ಲಿಟ್ಟಕೊಳ್ಳಬೇಕೋ ಬೇಡವೋ ಅನ್ನೋದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ಸಂಗರಿ ಮತ್ತು ಸಚಿವ ಸಂಪುಟದ ಮುಖ್ಯಸ್ಥನಾಗಿ ಅವರಿಗಿರುವ ಪರಮಾಧಿಕಾರ ಎಂದು ಹೇಳಿದರು. ಹಿಂದೆ ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಡಿವೈ ಎಸ್ ಪಿ ಎಂಕೆ ಗಣಪತಿ ಮತ್ತು ಐಎಎಸ್ ಅಧಿಕಾರಿ ಡಿಕೆ ರವಿ ಆತ್ಮಹತ್ಯೆ ಪ್ರಕರಣಗಳಲ್ಲಿ ಆಗ ಗೃಹಸಚಿವರಾಗಿದ್ದ ಕೆಜೆ ಜಾರ್ಜ್ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಿದ್ದರು. ನಂತರ ಪ್ರಕರಣವನ್ನು ಸಿಬಿಐಗೆ ವಹಿಸಿಕೊಟ್ಟಾಗ ಜಾರ್ಜ್ ನಿರ್ದೋಷಿ ಅಂತ ಸಾಬೀತಾಯಿತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಬೆಳಕಿಗೆ ಬಂದಾಗ ನಾಗೇಂದ್ರ ಪಲಾಯನ ಮಾಡುವ ಪ್ರಯತ್ನ ಮಾಡಿಲ್ಲ, 24 ಗಂಟೆಯೊಳಗೆ ಸುದ್ದಿಗೋಷ್ಠಿ ನಡೆಸಿ ಹಣದ ದುರುಪಯೋಗ ನಡೆದಿರುವುದನ್ನು ಅಂಗೀಕರಿಸಿದರು ಎಂದು ಖರ್ಗೆ ಹೇಳಿದರು. ಮೃತ ಪಿ ಚಂದ್ರಶೇಖರನ್ ಸಹ ನೇರವಾಗಿ ಸಚಿವನ ಮೇಲೆ ಆರೋಪ ಹೊರಿಸಿಲ್ಲ ಅಧಿಕಾರಿಗಳ ಮೇಲೆ ಒತ್ತಡವಿತ್ತು ಅಂತ ಹೇಳಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಿಮಗಾಗಿ ದುಡಿಯುತ್ತಿದ್ದೇವೆ, ದುಡಿತವನ್ನು ಪರಿಗಣಿಸಿ ಪಗಾರ ಕೊಡಿ ಅಂತ ಜನರಲ್ಲಿಗೆ ಹೋಗಿ: ಕಾರ್ಯಕರ್ತರಿಗೆ ಪ್ರಿಯಾಂಕ್ ಖರ್ಗೆ ಸಲಹೆ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More