ಪ್ರಜ್ವಲ್ ರೇವಣ್ಣರನ್ನು ಎಸ್ಐಟಿ ಕಚೇರಿಗೆ ತರುವಾಗ ನೂಕುನುಗ್ಗಲು, ಕೆಮೆರಾಗಳಿಗೆ ಸೆರೆ ಸಿಗದ ಆರೋಪಿ

|

Updated on: May 31, 2024 | 6:37 PM

ಒಂದೇ ಸಮ ಪೊಲೀಸರ ವಾಹನಗಳು ಒಂದರ ಹಿಂದೆ ಒಂದರಂತೆ ನುಗ್ಗಿ ಬಂದಿದ್ದರಿಂದ ಪ್ರಜ್ವಲ್ ಯಾವ ವಾಹನದಲ್ಲಿದ್ದರು ಅನ್ನೋದು ಗೊತ್ತಾಗಲಿಲ್ಲ. ಎಸ್ಐಟಿ ವಾಹನಗಳು ಬರುತ್ತಿರುವುದು ಗೊತ್ತಾದ ಕೂಡಲೇ ಪೊಲೀಸರು ಮತ್ತು ಮೀಡಿಯಾದವರು ಅವುಗಳ ಕಡೆ ಓಡುತ್ತಾರೆ. ಪೊಲೀಸರ ಸಂಖ್ಯೆ ಜಾಸ್ತಿಯಿದ್ದ ಕಾರಣ ಮಾಧ್ಯಮದವರು ಪ್ರಜ್ವಲ್ ಗ್ಲಿಂಪ್ಸ್ ಗಾಗಿ ಪರದಾಡಬೇಕಾಗುತ್ತದೆ.

ಬೆಂಗಳೂರು: ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಲೈಂಗಿಕ ಅಪರಾಧಗಳ ಆರೋಪಿ ಪ್ರಜ್ವಲ್ ರೇವಣ್ಣರನ್ನು (Prajwal Revanna) 6 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ (SIT custody) ನೀಡಿ ಆದೇಶ ಹೊರಡಿಸಿದ ಬಳಿಕ ಅವರನ್ನು ನ್ಯಾಯಾಲಯದಿಂದ ಎಸ್ಐಟಿ ಕಚೇರಿಗೆ ಬಿಗಿ ಭದ್ರತೆಯಲ್ಲಿ (tight security) ಕರೆತರಲಾಯಿತು. ಎಸ್ಐಟಿ ವಾಹನಗಳು ಸಂಚರಿಸಿದ ಮಾರ್ಗದಲ್ಲಿ ಒಂದರೆಡು ಕಡೆ ವಾಹನ ಸಂಚಾರ ಸ್ಥಗಿತಗೊಂಡ ಸ್ಥಿತಿ ನಿರ್ಮಾಣಗೊಂಡಿತ್ತು. ಈ ಸ್ಥಳದಲ್ಲಿ ನೋಡಿ, ಹಿಂಡು ಹಿಂಡು ಪೊಲೀಸರು ನಿಂತಿದ್ದಾರೆ ಮತ್ತು ಅವರೊಂದಿಗೆ ಮಾಧ್ಯಮ ಪ್ರತಿನಿಧಿಗಳು ಕೂಡ ನೆರೆದಿದ್ದಾರೆ. ಪ್ರಜ್ವಲ್ ರೇವಣ್ಣರ ಒಂದು ದೃಶ್ಯ ಕೆಮೆರಾದಲ್ಲಿ ಕೈದು ಮಾಡಿಕೊಳ್ಳಲು ಮಾಧ್ಯಮದ ಕೆಮೆರಾಮನ್ ಪಡಬಾರದ ಕಷ್ಟಪಟ್ಟರು. ಅದರೆ ಅವರ ಶ್ರಮ ವ್ಯರ್ಥವಾಯಿತು. ಒಂದೇ ಸಮ ಪೊಲೀಸರ ವಾಹನಗಳು ಒಂದರ ಹಿಂದೆ ಒಂದರಂತೆ ನುಗ್ಗಿ ಬಂದಿದ್ದರಿಂದ ಪ್ರಜ್ವಲ್ ಯಾವ ವಾಹನದಲ್ಲಿದ್ದರು ಅನ್ನೋದು ಗೊತ್ತಾಗಲಿಲ್ಲ. ಎಸ್ಐಟಿ ವಾಹನಗಳು ಬರುತ್ತಿರುವುದು ಗೊತ್ತಾದ ಕೂಡಲೇ ಪೊಲೀಸರು ಮತ್ತು ಮೀಡಿಯಾದವರು ಅವುಗಳ ಕಡೆ ಓಡುತ್ತಾರೆ. ಪೊಲೀಸರ ಸಂಖ್ಯೆ ಜಾಸ್ತಿಯಿದ್ದ ಕಾರಣ ಮಾಧ್ಯಮದವರು ಪ್ರಜ್ವಲ್ ಗ್ಲಿಂಪ್ಸ್ ಗಾಗಿ ಪರದಾಡಬೇಕಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:ತನ್ನ ವಿರುದ್ಧ ಮೀಡಿಯ ಟ್ರಯಲ್ ನಡೆಸದಂತೆ ಪ್ರಜ್ವಲ್ ರೇವಣ್ಣ ವಿನಂತಿಸಿಕೊಂಡಿದ್ದಾರೆ: ಜಿ ಅರುಣ್, ಪ್ರಜ್ವಲ್ ವಕೀಲ  

Follow us on