ಬೆಂಗಳೂರು ಉತ್ತರ ತಾಲ್ಲೂಕಿನ ನೆಲಗೆದರಹಳ್ಳಿ ಸರ್ಕಾರಿ ಶಾಲೆಯಲ್ಲಿ ಅದ್ದೂರಿ ಪ್ರಾರಂಭೋತ್ಸವ, ಮನಸೆಳೆದ ಜಾಥಾ!

ಶಾಲೆ ಬಿಟ್ಟು ಹೊಗಿರುವ ಮಕ್ಕಳಲ್ಲಿ ವಾಪಸ್ಸು ಬರುವ ಪ್ರೇರಣೆ ಹುಟ್ಟಸಲು ಶಾಲೆಯ, ಶಿಕ್ಷಕರು, ಮತ್ತು ಶಿಕ್ಷಣಾಧಿಕಾರಿಗಳಿಂದ ಜಾಥಾ ಹಮ್ಮಿಕೊಳ್ಳಲಾಗಿತ್ತು. ವೃತ್ತಿಪರ ಡೊಳ್ಳುವಾದಕರು ಜಾಥಾಗೆ ವಿಶೇಷ ಮೆರಗು ನೀಡಿದರು. ತಾಲ್ಲೂಕಿನ ಶಿಕ್ಷಣಾಧಿಕಾರಿ ಆಂಜಿನಪ್ಪ ಕಾರ್ಯಕ್ರಮದ ಉಸ್ತುವಾರಿವಹಿಸಿಕೊಂಡು ಎಲ್ಲವನ್ನು ಸಾಂಗವಾಗಿ ನೆರವೇರಿಸಿದರು.

ಬೆಂಗಳೂರು ಉತ್ತರ ತಾಲ್ಲೂಕಿನ ನೆಲಗೆದರಹಳ್ಳಿ ಸರ್ಕಾರಿ ಶಾಲೆಯಲ್ಲಿ ಅದ್ದೂರಿ ಪ್ರಾರಂಭೋತ್ಸವ, ಮನಸೆಳೆದ ಜಾಥಾ!
|

Updated on: May 31, 2024 | 5:03 PM

ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪರನ್ನು (Madhu Bangarappa) ವಿರೋಧ ಪಕ್ಷದ ನಾಯಕರು ಟೀಕಿಸುತ್ತಿರುತ್ತಾರೆ, ಅದರೆ ಅವರಿಂದ ಆಗುತ್ತಿರುವ ಉತ್ತಮ ಕೆಲಸಗಳನ್ನು ಅವರು ಗಮನಿಸಬೇಕು. ಇವತ್ತು ರಾಜ್ಯದಾದ್ಯಂತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪುನರಾರಂಭಗೊಂಡಿವೆ (reopened). ಎಲ್ಲ ಶಾಲೆಗಳಲ್ಲಿ ಪ್ರಾರಂಭೋತ್ಸವವನ್ನು ವಿಜೃಂಭಣೆ ಮತ್ತು ಅರ್ಥಗರ್ಭಿತವಾಗಿ ಆಚರಿಸಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ (education department) ಸುತ್ತೋಲೆ ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ನೆಲಗೆದರಹಳ್ಳಿಯ ಗೃಹಲಕ್ಷ್ಮಿ ಬಡಾವಣೆಲ್ಲಿರುವ ನಮ್ಮೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ರೀಓಪನಿಂಗ್ ಕಣ್ಮನ ಸೆಳೆಯಿತು. ಶಾಲೆ ಬಿಟ್ಟು ಹೊಗಿರುವ ಮಕ್ಕಳಲ್ಲಿ ವಾಪಸ್ಸು ಬರುವ ಪ್ರೇರಣೆ ಹುಟ್ಟಸಲು ಶಾಲೆಯ, ಶಿಕ್ಷಕರು, ಮತ್ತು ಶಿಕ್ಷಣಾಧಿಕಾರಿಗಳಿಂದ ಜಾಥಾ ಹಮ್ಮಿಕೊಳ್ಳಲಾಗಿತ್ತು. ವೃತ್ತಿಪರ ಡೊಳ್ಳುವಾದಕರು ಜಾಥಾಗೆ ವಿಶೇಷ ಮೆರಗು ನೀಡಿದರು. ತಾಲ್ಲೂಕಿನ ಶಿಕ್ಷಣಾಧಿಕಾರಿ ಆಂಜಿನಪ್ಪ ಕಾರ್ಯಕ್ರಮದ ಉಸ್ತುವಾರಿವಹಿಸಿಕೊಂಡು ಎಲ್ಲವನ್ನು ಸಾಂಗವಾಗಿ ನೆರವೇರಿಸಿದರು. ತಾಯಿ ಸರಸ್ವತಿಗೆ ಪೂಜೆ ಸಲ್ಲಿಸಿದ ಬಳಿಕ ಮಕ್ಕಳಿಗೆ ಸಮವಸ್ತ್ರ ಮತ್ತು ಸಿಹಿ ಹಂಚಲಾಯಿತು. ಇಂಥ ಕಾರ್ಯಕ್ರಮಗಳು ಕೇವಲ ಖಾಸಗಿ ಶಾಲೆಗಳಲ್ಲಿ ಮಾತ್ರ ನಡೆಯುತ್ತಿದ್ದವು. ಅದರೆ, ಆ ಶಾಲೆಗಳನ್ನು ಮೀರಿಸುವ ಹಾಗೆ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮ ಏರ್ಪರ್ಟ್ಟಿರುವುದು ಶ್ಲಾಘನೀಯ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪರಿಷ್ಕರಣೆಯಾಗುತ್ತಾ ಶಾಲಾ ಪಠ್ಯ ಪುಸ್ತಕ? ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಿಷ್ಟು

Follow us
ದೇಶ ನಮ್ಮದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್: ಜಮೀರ್ ಅಹ್ಮದ್
ದೇಶ ನಮ್ಮದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್: ಜಮೀರ್ ಅಹ್ಮದ್
ಬೇರೆಯವರ ಮೇಲೆ ಗೂಬೆಕೂರಿಸುವುದು ದೇವೇಗೌಡ ಕುಟುಂಬದ ಅಭ್ಯಾಸ: ಡಿಕೆ ಸುರೇಶ್
ಬೇರೆಯವರ ಮೇಲೆ ಗೂಬೆಕೂರಿಸುವುದು ದೇವೇಗೌಡ ಕುಟುಂಬದ ಅಭ್ಯಾಸ: ಡಿಕೆ ಸುರೇಶ್
ಚನ್ನಪಟ್ಟಣ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ತಾಂಡವಾಡುತ್ತಿದೆ ಲಂಚಗುಳಿತನ
ಚನ್ನಪಟ್ಟಣ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ತಾಂಡವಾಡುತ್ತಿದೆ ಲಂಚಗುಳಿತನ
ಅಂಗನವಾಡಿಗಳಲ್ಲಿ ಇನ್ಮುಂದೆ ಸರ್ಕಾರಿ ಮಾಂಟೆಸರಿ, LKG, UKG ಟೀಚಿಂಗ್
ಅಂಗನವಾಡಿಗಳಲ್ಲಿ ಇನ್ಮುಂದೆ ಸರ್ಕಾರಿ ಮಾಂಟೆಸರಿ, LKG, UKG ಟೀಚಿಂಗ್
ಲೋಕಸಭಾ ಸದಸ್ಯೆಯಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ
ಲೋಕಸಭಾ ಸದಸ್ಯೆಯಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ
ಅಂತೂ ಇಂತೂ ಬಂದ ಗೆಳೆಯ; ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ವಿನೋದ್​ ಪ್ರಭಾಕರ್
ಅಂತೂ ಇಂತೂ ಬಂದ ಗೆಳೆಯ; ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ವಿನೋದ್​ ಪ್ರಭಾಕರ್
ಹೆಚ್ಚುವರಿ ಡಿಸಿಎಂಗಳು ಬೇಕೆನ್ನುವವರು ಹೈಕಮಾಂಡ್ ಬಳಿ ಹೋಗಿ ಕೇಳಲಿ: ಖರ್ಗೆ
ಹೆಚ್ಚುವರಿ ಡಿಸಿಎಂಗಳು ಬೇಕೆನ್ನುವವರು ಹೈಕಮಾಂಡ್ ಬಳಿ ಹೋಗಿ ಕೇಳಲಿ: ಖರ್ಗೆ
ಪ್ರಮಾಣ ವಚನ ಸ್ವೀಕರಿಸಿದ ಸಿಟಿ ರವಿ, ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದರು
ಪ್ರಮಾಣ ವಚನ ಸ್ವೀಕರಿಸಿದ ಸಿಟಿ ರವಿ, ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದರು
ದರ್ಶನ್ ನೋಡಲು ಜೈಲಿಗೆ ಬಂದು, ಕ್ಯಾಮೆರಾ ಕಂಡು ವಾಪಸ್​ ಹೋದ ವಿಜಯಲಕ್ಷ್ಮಿ
ದರ್ಶನ್ ನೋಡಲು ಜೈಲಿಗೆ ಬಂದು, ಕ್ಯಾಮೆರಾ ಕಂಡು ವಾಪಸ್​ ಹೋದ ವಿಜಯಲಕ್ಷ್ಮಿ
ಲೋಕಸಭಾ ಸದಸ್ಯನಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ
ಲೋಕಸಭಾ ಸದಸ್ಯನಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ