ಲೋಕಸಭಾ ಚುನಾವಣೆ ಫಲಿತಾಂಶ: ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಗೆ ದಕ್ಕಿದ ಜಯ

|

Updated on: Jun 04, 2024 | 5:23 PM

ಪತಿ ಎಸ್ ಎಸ್ ಮಲ್ಲಿಕಾರ್ಜುನ ಮತ್ತು ಮಾವ ಶಾಮನೂರ ಶಿವಶಂಕರಪ್ಪ ರಾಜಕೀಯಲ್ಲಿ ದಶಕಗಳಿಂದ ಗುರತಿಸಿಕೊಂಡಿದ್ದರೂ ವೈದ್ಯೆಯಾಗಿರುವ ಪ್ರಭಾ ಅವರಿಗೆ ರಾಜಕೀಯ ಕ್ಷೇತ್ರ ಹೊಸದು. ನಗರದ ಮತ ಎಣಿಕೆ ಕೇಂದ್ರದಲ್ಲಿ ಡಾ ಪ್ರಭಾ ಪತಿ ಮಲ್ಲಿಕಾರ್ಜುನ ಅವರೊಂದಿಗೆ ಬಂದಾಗ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಹರ್ಷೋದ್ಗಾರಗಳೊಂದಿಗೆ ಅವರನ್ನು ಬರಮಾಡಿಕೊಂಡರು

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಡಾ ಪ್ರಭಾ ಮಲ್ಲಿಕಾರ್ಜುನ (DR Prabha Mallikarjun) ಗೆದ್ದಾರೆಂದು ಬಹಳ ಜನ ಎಣಿಸಿರಲಿಲ್ಲ. ಅದರೆ ಮತ ಎಣಿಕೆ ಕೊನೆಗೊಂಡಾಗ ಅವರು ತಮ್ಮ ಪ್ರತಿಸ್ಪರ್ಧಿ ಗಾಯತ್ರಿ ಸಿದ್ದೇಶ್ವರ (Gayathri Siddeshwara) ಅವರನ್ನು ಹಿಂದಿಕ್ಕಿ ಗೆಲುವಿನ ಪತಾಕೆ ಹಾರಿಸಿದರು. ದಾವಣಗೆರೆಯ ಜನ ವಿಧಾನ ಸಬೆಗೆ (Assembly) ಕಾಂಗ್ರೆಸ್ ನಾಯಕರನ್ನು ಆರಿಸಿ ಕಳಿಸಿದರೂ ಸಂಸತ್ತಿಗೆ ಮಾತ್ರ ಬಿಜೆಪಿ ನಾಯಕರನ್ನು ತಮ್ಮ ಪ್ರತಿನಿಧಿಯಾಗಿ ಕಳಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ಗಾಯತ್ರಿ ಅವರ ಪತಿ ಜಿಎಂ ಸಿದ್ದೇಶ್ವರ ಅವರು ಎರಡು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು ಮತ್ತು ಒಮ್ಮೆ ಮಂತ್ರಿಯೂ ಆಗಿದ್ದರು. ಪತಿ ಎಸ್ ಎಸ್ ಮಲ್ಲಿಕಾರ್ಜುನ ಮತ್ತು ಮಾವ ಶಾಮನೂರ ಶಿವಶಂಕರಪ್ಪ ರಾಜಕೀಯಲ್ಲಿ ದಶಕಗಳಿಂದ ಗುರತಿಸಿಕೊಂಡಿದ್ದರೂ ವೈದ್ಯೆಯಾಗಿರುವ ಪ್ರಭಾ ಅವರಿಗೆ ರಾಜಕೀಯ ಕ್ಷೇತ್ರ ಹೊಸದು. ನಗರದ ಮತ ಎಣಿಕೆ ಕೇಂದ್ರದಲ್ಲಿ ಡಾ ಪ್ರಭಾ ಪತಿ ಮಲ್ಲಿಕಾರ್ಜುನ ಅವರೊಂದಿಗೆ ಬಂದಾಗ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಹರ್ಷೋದ್ಗಾರಗಳೊಂದಿಗೆ ಅವರನ್ನು ಬರಮಾಡಿಕೊಂಡರು. ಜನ ಡಾ ಪ್ರಭಾ ಬದಲು ಮಲ್ಲಿಕಾರ್ಜುನ ಅವರನ್ನು ಸುತ್ತುವರಿದ್ದು ಅಭಿನಂದಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Karnataka Assembly Polls: ಪತಿಗಾಗಿ ಉತ್ತರ ಮತ್ತು ಮಾವನಿಗಾಗಿ ದಕ್ಷಿಣ ದಾವಣಗೆರೆಯಲ್ಲಿ ಪ್ರಚಾರ ಮಾಡುತ್ತಿರುವ ಡಾ ಪ್ರಭಾ ಮಲ್ಲಿಕಾರ್ಜುನ

Follow us on