ಲೋಕಸಭಾ ಚುನಾವಣೆ ಫಲಿತಾಂಶ: ತಮ್ಮ ಗೆಲುವುಗಿಂತ ಹೆಚ್ಚು ಡಾ ಮಂಜುನಾಥ್ ಗೆಲುವನ್ನು ಕುಮಾರಸ್ವಾಮಿ ಸಂಭ್ರಮಿಸುತ್ತಿದ್ದಾರೆ!
ಕೇಂದ್ರದಲ್ಲಿ ನಿಶ್ಚಿತವಾಗಿ ಎನ್ ಡಿಎ ಸರ್ಕಾರ ರಚಿಸಲಿದೆ ಮತ್ತು ನರೇಂದ್ರ ಮೋದಿಯವರು ಮೂರನೇ ಬಾರಿಗೆ ದೇಶದ ಪ್ರಧಾನಿ ಮಂತ್ರಿಯಾಗಲಿದ್ದಾರೆ ಎಂದು ಹೇಳಿದ ಕುಮಾರಸ್ವಾಮಿ, ಒಬ್ಬ ಜವಾಬ್ದಾರಿಯುತ ಸಂಸದನಾಗಿ ರಾಜ್ಯದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಚರ್ಚಿಸುವುದಾಗಿ ಹೇಳಿದರು.
ರಾಮನಗರ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತಮ್ಮ ಹಾಗೂ ಗೆಲುವಿನ ಸಂಭ್ರಮದಲ್ಲಿದ್ದಾರೆ. ಇನ್ ಫ್ಯಾಕ್ಟ್ ಅವರು ತಮ್ಮ ಗೆಲುವಿಗಿಂತ ಡಾ ಮಂಜುನಾಥ್ (Dr CN Manjunath) ಗೆಲುವನ್ನು ಹೆಚ್ಚು ಸಂಭ್ರಮಿಸುತ್ತಿದ್ದಾರೆ. ರಾಮನಗರದಲ್ಲಿಂದು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, ಎರಡೂ ಗೆಲುವಿನ ಬಗ್ಗೆ ನಿರೀಕ್ಷೆಯಿತ್ತು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ (Bengaluru Rural constituency) ಡಾ ಮಂಜುನಾಥ್ ಅವರ ಗೆಲುವು ಹೆಚ್ಚು ಮಹತ್ವದ್ದಾಗಿದೆ. ಅಮಿತ್ ಶಾ ಮತ್ತು ತಾನು ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗ ಜನ ಟೀಕೆ ಮಾಡಿದರು. ಕ್ಷೇತ್ರದಲ್ಲಿ ಅಣ್ಣತಮ್ಮಂದಿರ ದಬ್ಬಾಳಿಕೆಯಿಂದ ಜನ ಬೇಸತ್ತಿದ್ದರು ಮತ್ತು ಡಾ ಮಂಜುನಾಥ್ ಅವರನ್ನು ಗೆಲ್ಲಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ ಎಂದು ಹೇಳಿದರು. ಕೇಂದ್ರದಲ್ಲಿ ನಿಶ್ಚಿತವಾಗಿ ಎನ್ ಡಿಎ ಸರ್ಕಾರ ರಚಿಸಲಿದೆ ಮತ್ತು ನರೇಂದ್ರ ಮೋದಿಯವರು ಮೂರನೇ ಬಾರಿಗೆ ದೇಶದ ಪ್ರಧಾನಿ ಮಂತ್ರಿಯಾಗಲಿದ್ದಾರೆ ಎಂದು ಹೇಳಿದ ಕುಮಾರಸ್ವಾಮಿ, ಒಬ್ಬ ಜವಾಬ್ದಾರಿಯುತ ಸಂಸದನಾಗಿ ರಾಜ್ಯದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಚರ್ಚಿಸುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
New Year 2026 Live: ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!

