ಅಧಿಕಾರಿಗಳ ಜೊತೆ ಸೇರಿ ನಿಷ್ಠೆಯಿಂದ ಕೆಲಸ ಮಾಡುವಂತೆ ಪ್ರಧಾನಿ ಮೋದಿ ಹೇಳಿದ್ದಾರೆ: ವಿ ಸೋಮಣ್ಣ, ಕೇಂದ್ರ ಸಚಿವ

|

Updated on: Jun 10, 2024 | 11:54 AM

ರಾಜ್ಯದ ಹಲವಾರು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿರುವ ತನಗೆ ಯಾವುದೇ ಖಾತೆ ನೀಡಿದರೂ ಅದನ್ನು ನಿಷ್ಠೆಯಿಂದ ನಿಭಾಯಿಸುವುದಾಗಿ ಹೇಳಿದರು. ತನ್ನೊಂದಿಗೆ ಮಾತಾಡಿದ ಪ್ರಧಾನ ಮಂತ್ರಿಯವರು, ನೀವೊಂದು ಸಾಧನೆ ಮಾಡಿದ್ದೀರಿ ಮತ್ತು ಅಧಿಕಾರಿಗಳ ಜೊತೆ ಸೇರಿ ನಿಷ್ಠೆಯಿಂದ ಕೆಲಸ ಮಾಡಿ, ಯಾವುದೇ ರೀತಿಯ ಗೊಂದಲ ಇಟ್ಟುಕೊಳ್ಳಬೇಡಿ ಮತ್ತು ಸಮಸ್ಯೆ ಎದುರಾದಾಗ ಸೀನಿಯರ್ ಗಳ ಸಲಹೆ ಪಡೆಯಿರಿ ಮತ್ತು ತನ್ನನ್ನೂ ಸಂಪರ್ಕಿಸಿ ಎಂದು ಹೇಳಿದರು ಎಂದು ಸೋಮಣ್ಣ ತಿಳಿಸಿದರು.

ದೆಹಲಿ: ಕೇಂದ್ರದಲ್ಲಿ ಸಚಿವ ಸ್ಥಾನ ಗಿಟ್ಟಿಸಿರುವ ಹಿರಿಯ ಬಿಜೆಪಿ ನಾಯಕ ವಿ ಸೋಮಣ್ಣ (V Somanna) ಖುಷಿಯಿಂದ ಬೀಗುತ್ತಿದ್ದಾರೆ. ದೆಹಲಿಯಲ್ಲಿ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, 2008-09 ರಲ್ಲಿ ಬಿಜೆಪಿ (BJP) ಸೇರಿರುವ ತನಗೆ ಪಕ್ಷ ತಾಯಿಯಿದ್ದಂತೆ. ಪಕ್ಷದ ಸಂದೇಶವನ್ನು ಜನರಿಗೆ ತಲುಪಿಸುವ ಕೆಲಸವನ್ನು ಇದುವರೆಗೆ ಮಾಡಿಕೊಂಡು ಬಂದಿದ್ದೇನೆ, ಕೇಂದ್ರದ ಸಚಿವನಾಗಿ ಅದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ದೂರದೃಷ್ಟಿ ಚಿಂತನೆ ಮತ್ತು ಅವರು ರಾಷ್ಟ್ರಕ್ಕೆ ನೀಡಿರುವ ಕೊಡುಗೆ ಜನರಿಗೆ ಗೊತ್ತಿಲ್ಲದಿಲ್ಲ, ಅವರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಸೋಮಣ್ಣ ಹೇಳಿದರು. ಮಂತ್ರಿಸ್ಥಾನ ನೀಡಿದ ಬಗ್ಗೆ ಪ್ರಧಾನಮಂತ್ರಿಯವರ ಕಚೇರಿಯಿಂದ ಬಂದಾಗ ಸಂತೋಷವನ್ನು ಎಲ್ಲಕ್ಕೂ ಮೊದಲು ಗಣೇಶನೊಂದಿಗೆ ಹಂಚಿಕೊಂಡಿದ್ದಾಗಿ ಹೇಳಿದ ಸೋಮಣ್ಣ ಆಮೇಲೆ ತುಮಕೂರು ಮಹಾಜನತೆಗೆ ಮತ್ತು ಕುಟುಂಬದವರೊಂದಿಗೆ ಹಂಚಿಕೊಂಡಿರುವೆನೆಂದರು. ರಾಜ್ಯದ ಹಲವಾರು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿರುವ ತನಗೆ ಯಾವುದೇ ಖಾತೆ ನೀಡಿದರೂ ಅದನ್ನು ನಿಷ್ಠೆಯಿಂದ ನಿಭಾಯಿಸುವುದಾಗಿ ಹೇಳಿದರು. ತನ್ನೊಂದಿಗೆ ಮಾತಾಡಿದ ಪ್ರಧಾನ ಮಂತ್ರಿಯವರು, ನೀವೊಂದು ಸಾಧನೆ ಮಾಡಿದ್ದೀರಿ ಮತ್ತು ಅಧಿಕಾರಿಗಳ ಜೊತೆ ಸೇರಿ ನಿಷ್ಠೆಯಿಂದ ಕೆಲಸ ಮಾಡಿ, ಯಾವುದೇ ರೀತಿಯ ಗೊಂದಲ ಇಟ್ಟುಕೊಳ್ಳಬೇಡಿ ಮತ್ತು ಸಮಸ್ಯೆ ಎದುರಾದಾಗ ಸೀನಿಯರ್ ಗಳ ಸಲಹೆ ಪಡೆಯಿರಿ ಮತ್ತು ತನ್ನನ್ನೂ ಸಂಪರ್ಕಿಸಿ ಎಂದು ಹೇಳಿದರು ಎಂದು ಸೋಮಣ್ಣ ತಿಳಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತುಮಕೂರು ಬಿಜೆಪಿ ಟಿಕೆಟ್​ ಫೈಟ್: ಟಿಕೆಟ್ ಸಿಗುವ ವಿಶ್ವಾಸದಲ್ಲಿ ಮಾಧುಸ್ವಾಮಿ; ಮತ್ತೊಬ್ಬ ಆಕಾಂಕ್ಷಿ ವಿ ಸೋಮಣ್ಣ ಹೇಳುವುದೇನು?