ತುಮಕೂರು ಲೋಕಸಭಾ ಚುನಾವಣೆ 2024 ಫಲಿತಾಂಶ: ವಿ ಸೋಮಣ್ಣ ಗೆಲುವು, ರಾಜ್ಯದಿಂದ ರಾಷ್ಟ್ರ ರಾಜಕಾರಣದತ್ತ

Tumakur Lok Sabha Election Results 2024: 2024ರ ಲೋಕಸಭಾ ಚುನಾವಣೆ 7 ಹಂತಗಳಲ್ಲಿ ನಡೆದಿದೆ. ಫಲಿತಾಂಶ ಪ್ರಕಟವಾಗಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ವಿ. ಸೋಮಣ್ಣ ಗೆಲ್ಲುವ ಮೂಲಕ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದತ್ತ ನಡೆದಿದ್ದಾರೆ. ಅಲ್ಲದೆ ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಿದ್ದಾರೆ.

ತುಮಕೂರು ಲೋಕಸಭಾ ಚುನಾವಣೆ 2024 ಫಲಿತಾಂಶ: ವಿ ಸೋಮಣ್ಣ ಗೆಲುವು, ರಾಜ್ಯದಿಂದ ರಾಷ್ಟ್ರ ರಾಜಕಾರಣದತ್ತ
ವಿ. ಸೋಮಣ್ಣ
Follow us
| Updated By: ವಿವೇಕ ಬಿರಾದಾರ

Updated on:Jun 04, 2024 | 1:02 PM

ತುಮಕೂರು, ಜೂನ್​ 04: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ (Tumkur Lok Sabha Constituency)  ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ವಿ. ಸೋಮಣ್ಣ (V Somanna) ಅವರು ಗೆದ್ದಿದ್ದಾರೆ. ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಒಕ್ಕಲಿಗ ಸಮುದಾಯದ ಎಸ್‌.ಪಿ ಮುದ್ದಹನುಮೇಗೌಡ (SP Muddahanumegowda) ಸೋತಿದ್ದಾರೆ.

ಸದ್ಯಕ್ಕೆ ತುಮಕೂರಿನಲ್ಲಿ ಬಿಜೆಪಿಯ ಬಸವರಾಜು ಸಂಸದರಾಗಿದ್ದಾರೆ. ಅವರಿಗೆ ಈ ಬಾರಿ ಟಿಕೆಟ್ ಸಿಕ್ಕಿರಲಿಲ್ಲ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾದ ವಿ. ಸೋಮಣ್ಣ ಅವರ ಆಯ್ಕೆಗೆ ಬಿಜೆಪಿ ಪಕ್ಷದವರಿಂದಲೇ ಆಕ್ಷೇಪ ಎದುರಾಗಿತ್ತು. 2023ರ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ವರುಣಾ ಕ್ಷೇತ್ರಗಳಿಂದ ಸೋತಿದ್ದ ವಿ. ಸೋಮಣ್ಣ ಈ ಬಾರಿ ತುಮಕೂರಿನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ವಿಜಯಪತಾಕೆ ಹಾರಿಸಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದಿಂದ ಈ ಬಾರಿ 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆದರೆ, 4 ಜನರು ನಾಮಪತ್ರ ವಾಪಾಸ್ ಪಡೆದಿದ್ದರು. ಅಂತಿಮವಾಗಿ 18 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಆದರೆ, ಬಿಜೆಪಿಯ ವಿ. ಸೋಮಣ್ಣ ಹಾಗೂ ಕಾಂಗ್ರೆಸ್​ನ ಎಸ್​ಪಿ ಮುದ್ದಹನುಮೇಗೌಡ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.

ಇದನ್ನೂ ಓದಿ: ಲೋಕಸಭಾ ಚುನಾವಣೆ ಮತಎಣಿಕೆಗೆ ಕೌಂಟ್ ಡೌನ್; ಬೆಂಗಳೂರಿನಲ್ಲಿ ಹೇಗಿದೆ ಸಿದ್ಧತೆ? ಇಲ್ಲಿದೆ ಪೂರ್ಣ ವಿವರ

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಎಚ್​.ಡಿ. ದೇವೇಗೌಡರು ಬಸವರಾಜು ಅವರ ವಿರುದ್ಧ ಸೋತಿದ್ದರು. 2014ರ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿದ್ದ ಮುದ್ದಹನುಮೇಗೌಡರಿಗೆ ಆಗ ದೇವೇಗೌಡರಿಗಾಗಿ ಟಿಕೆಟ್ ನಿರಾಕರಿಸಲಾಗಿತ್ತು. ಹೀಗಾಗಿ, ಅವರಿಗೆ ತುಮಕೂರಲ್ಲಿ ಲೋಕಸಭಾ ಚುನಾವಣೆಗೆ ಟಿಕೆಟ್ ಸಿಕ್ಕಿರಲಿಲ್ಲ. ಇದೀಗ ಈ ಬಾರಿ ಮುದ್ದಹನುಮೇಗೌಡರಿಗೆ ಟಿಕೆಟ್ ಸಿಕ್ಕಿದ್ದು, ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.

3 ಬಾರಿ ಕಾಂಗ್ರೆಸ್​ನಿಂದ ಮತ್ತು 2 ಬಾರಿ ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದ ಜಿಎಸ್‌ ಬಸವರಾಜು ಇದುವರೆಗೂ 5 ಬಾರಿ ಸಂಸದರಾಗಿದ್ದಾರೆ. ಚುನಾವಣೆಯಲ್ಲಿ ಇನ್ನುಮುಂದೆ ಸ್ಪರ್ಧಿಸುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.

ಕಳೆದ ಬಾರಿ ಬಿಜೆಪಿಯ ಜಿ.ಎಸ್‌. ಬಸವರಾಜು ಪಡೆದ ಮತಗಳು- 5,96,127. ಜೆಡಿಎಸ್- ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್‌.ಡಿ.ದೇವೇಗೌಡರು ಪಡೆದ ಮತಗಳು – 5,82,788. ಒಟ್ಟು 13,339 ಮತಗಳ ಗೆಲುವಿನ ಅಂತರವಿತ್ತು.

ಜಾತಿ ಲೆಕ್ಕಾಚಾರ:

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಮತಗಳ ಪ್ರಾಬಲ್ಯ ಹೆಚ್ಚಾಗಿದೆ. ಬಿಜೆಪಿಯಿಂದ ಸ್ಪರ್ಧಿಸಿರುವ ವಿ. ಸೋಮಣ್ಣ ಲಿಂಗಾಯತ ಸಮುದಾಯದವರಾದರೆ ಕಾಂಗ್ರೆಸ್‌ ಅಭ್ಯರ್ಥಿ ಎಸ್‌ಪಿ ಮುದ್ದಹನುಮೇಗೌಡರು ಒಕ್ಕಲಿಗ ಸಮುದಾಯದವರಾಗಿದ್ದಾರೆ. ತುಮಕೂರಿನಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಿದೆ. ಒಕ್ಕಲಿಗರ ಮತಗಳು 2ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಐತಿಹಾಸಿಕ ದಾಖಲೆ ಬರೆದ ಭಾರತದ ಲೋಕಸಭಾ ಚುನಾವಣೆ, 64 ಕೋಟಿ ಮಂದಿಯಿಂದ ಮತದಾನ

ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ತಾಲೂಕುಗಳಲ್ಲಿ 3.54 ಲಕ್ಷ ಲಿಂಗಾಯತ ಮತಗಳು, 3.26 ಲಕ್ಷ ಒಕ್ಕಲಿಗ ಮತದಾರರು ಇದ್ದಾರೆ. 1.70 ಲಕ್ಷ ಕುರುಬರು, 87 ಸಾವಿರ ತಿಗಳ ಸಮುದಾಯದವರು, 1.21 ಲಕ್ಷ ಗೊಲ್ಲ ಸಮುದಾಯದವರು, 53 ಬಲಿಜಿಗ ಸಮುದಾಯದವರು, ಇತರೆ ಸಮುದಾಯದ 88 ಸಾವಿರ, 2.89 ಲಕ್ಷ ಎಸ್​ಸಿ ಮತ್ತು ಎಸ್​ಟಿ ಸಮುದಾಯದವರಿದ್ದಾರೆ.

ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:31 am, Tue, 4 June 24

ತಾಜಾ ಸುದ್ದಿ