ಪ್ರಧಾನಿ ಮೋದಿ ಪ್ರತಿಯೊಬ್ಬ ಭಾರತೀಯನಲ್ಲಿ ದೇಶಪ್ರೇಮವನ್ನು ಜಾಗೃತಗೊಳಿಸಿದ್ದಾರೆ: ಪವನ್ ಕಲ್ಯಾಣ್

|

Updated on: Jun 07, 2024 | 4:06 PM

ಮುಂದುವರಿದು ಮಾತಾಡಿದ ಪವನ್ ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ಮೋದಿಯವರು ದೇಶದ ಪ್ರತಿಯೊಬ್ಬ ನಾಗರಿಕನಿಗೆ ಪ್ರೇರಣಾದಾಯಕವಾಗಿದ್ದಾರೆ, ಅವರು ದೇಶವನ್ನು ಮುನ್ನಡೆಸುವವರೆಗೆ ಭಾರತ ಯಾರ ಮುಂದೆಯೂ ತಲೆಬಾಗುವುದಿಲ್ಲ, ನಮ್ಮ ಬಲಾಢ್ಯ ಹಿಮಾಲಯ ಪರ್ವತಗಳು ಹೇಗೆ ಅಚಲವೋ ಹಾಗೆಯೇ ಮೋದಿಯವರ ನೇತೃತ್ವದಲ್ಲಿ ಎಲ್ಲ ಭಾರತೀಯರು ಗಟ್ಟಿ ಮನಸ್ಥಿತಿಯವರು ಎಂದು ಹೇಳಿದರು

ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ಎನ್ ಡಿಎ ಸಂಸದೀಯ ಮಂಡಳಿ ನಾಯಕನಾಗಿ (Leader of NDA Parliamentary Board) ಮಂಡಿಸಿದ ಪ್ರಸ್ತಾಪಕ್ಕೆ ಅನುಮೋದನೆ ಸೂಚಿಸಿ ಮಾತಾಡಿದ ಜನಸೇನಾ ಪಕ್ಷದ ಅಧ್ಯಕ್ಷ ಮತ್ತು ತೆಲುಗು ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ (Pawan Kalyan), ಪ್ರಧಾನಿ ಮೋದಿಯವರ ಸಭೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ತನ್ನ ಸೌಭಾಗ್ಯ ಎಂದರು. ಮುಂದುವರಿದು ಮಾತಾಡಿದ ಪವನ್ ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ಮೋದಿಯವರು ದೇಶದ ಪ್ರತಿಯೊಬ್ಬ ನಾಗರಿಕನಿಗೆ ಪ್ರೇರಣಾದಾಯಕವಾಗಿದ್ದಾರೆ, ಅವರು ದೇಶವನ್ನು ಮುನ್ನಡೆಸುವವರೆಗೆ ಭಾರತ ಯಾರ ಮುಂದೆಯೂ ತಲೆಬಾಗುವುದಿಲ್ಲ, ನಮ್ಮ ಬಲಾಢ್ಯ ಹಿಮಾಲಯ ಪರ್ವತಗಳು ಹೇಗೆ ಅಚಲವೋ ಹಾಗೆಯೇ ಮೋದಿಯವರ ನೇತೃತ್ವದಲ್ಲಿ ಎಲ್ಲ ಭಾರತೀಯರು ಗಟ್ಟಿ ಮನಸ್ಥಿತಿಯವರು ಎಂದು ಹೇಳಿದರು. ಪ್ರಧಾನಿ ಮೋದಿಯವರ ಭಾರತೀಯರಲ್ಲಿ ದೇಶಪ್ರೇಮವನ್ನು ಜಾಗೃತಗೊಳಿಸಿದ್ದಾರೆ ಮತ್ತು ಜನಸೇವೆ ಮಾಡುವ ಹುಮ್ಮಸ್ಸು ತುಂಬಿದ್ದಾರೆ. ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಸಲಹೆ ಮತ್ತು ಮಾರ್ಗದರ್ಶನದಿಂದಾಗಿ ತೆಲುಗು ದೇಶಂ ಮತ್ತು ಜನಸೇನಾ ಮೈತ್ರಿಯು ಶೇಕಡಾ 91ರಷ್ಟು ಸ್ಥಾನಗಳನ್ನು ಗೆದ್ದಿದೆ ಎಂದು ಪವನ್ ಕಲ್ಯಾಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ಎನ್​​ಡಿಎ ಬಿಟ್ಟು ಹೋಗುವ ಮಾತೇ ಇಲ್ಲ’; ವದಂತಿಗಳಿಗೆ ತೆರೆ ಎಳೆದ ಪವನ್ ಕಲ್ಯಾಣ್