ರಾಜ್ಯದಲ್ಲಿ ಮಳೆ ಬೀಳಲಿದೆ ಆದರೆ ಸಿದ್ದರಾಮಯ್ಯ ಸರ್ಕಾರ ಬೀಳದು: ಲಖನ್ ಜಾರಕಿಹೊಳಿ

|

Updated on: Jun 06, 2024 | 12:33 PM

ಸತೀಶ್ ಅವರು ಸೀನಿಯರ್ ರಾಜಕಾರಣಿಗಳಲ್ಲೊಬ್ಬರಾಗಿದ್ದಾರೆ ಮತ್ತು ಹಂತ ಹಂತವಾಗಿ ಉನ್ನತ ಸ್ಥಾನಗಳಿಗೆ ಹೋಗುತ್ತಿದ್ದಾರೆ, ಈಗ ಲೋಕೋಪಯೋಗಿ ಸಚಿವರಾಗಿ ರಾಜ್ಯದ ರಸ್ತೆಗಳ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ, ಮುಂಬರುವ ದಿನಗಳಲ್ಲಿ ಅವರು ಡಿಸಿಎಂ ಆಗಬಹುದು ಎಂದು ಲಖನ್ ಹೇಳಿದರು.

ಬೆಳಗಾವಿ: ರಾಜ್ಯದಲ್ಲಿ ಮಳೆ ಬೀಳಬಹುದೇ ಹೊರತು ಸರ್ಕಾರ ಬೀಳುವ ಲಕ್ಷಣಗಳಂತೂ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ (Lakhan Jarkiholi) ನಗುತ್ತಾ ಹೇಳಿದರು. ಸಿದ್ದರಾಮಯ್ಯನವರು (Siddaramaiah) ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸುತ್ತಾರೆ, ಅವರ ಸರ್ಕಾರಕ್ಕೆ ಅಪಾಯವೇನೂ ಇಲ್ಲ ಎಂದು ಹೇಳಿದ ಅವರು ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚಿಸುವ ಕಸರತ್ತು ನಡೆಸಿರುವ ಹಿನ್ನೆಲೆ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿಯಾಗುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯೆ ನೀಡಿ, ಖರ್ಗೆ ಅವರು ಐದು ದಶಕಗಳಿಂದ ರಾಜಕಾರಣಲ್ಲಿದ್ದಾರೆ, ಅವರು ಪ್ರಧಾನ ಮಂತ್ರಿಯಾದರೆ ಮತ್ತೊಬ್ಬ ಕನ್ನಡಿಗ ಆ ಸ್ಥಾನ ಅಲಂಕರಿಸಿದಂತಾಗುತ್ತದೆ ಎಂದರು. ಸಿದ್ದರಾಮಯ್ಯ ಸರ್ಕಾರದಲ್ಲಿ ತಮ್ಮ ಸಹೋದರ ಸತೀಶ್ ಜಾರಕಿಹೊಳಿ (Satish Jarkiholi) ಉಪ ಮುಖ್ಯಮಂತ್ರಿಯಾಗುವ ಬಗ್ಗೆ ನಿರ್ಲಿಪ್ತರಾಗಿ ಮಾತಾಡಿದ ಲಖನ್, ಸದ್ಯಕ್ಕಂತೂ ಅವರು ಡಿಸಿಎಂ ಆಗಲಾರರು ಆದರೆ ಮುಂದೆ ಆಗುವ ಚಾನ್ಸ್ ಇದೆ. ಅವರು ಸೀನಿಯರ್ ರಾಜಕಾರಣಿಗಳಲ್ಲೊಬ್ಬರಾಗಿದ್ದಾರೆ ಮತ್ತು ಹಂತ ಹಂತವಾಗಿ ಉನ್ನತ ಸ್ಥಾನಗಳಿಗೆ ಹೋಗುತ್ತಿದ್ದಾರೆ, ಈಗ ಲೋಕೋಪಯೋಗಿ ಸಚಿವರಾಗಿ ರಾಜ್ಯದ ರಸ್ತೆಗಳ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ, ಮುಂಬರುವ ದಿನಗಳಲ್ಲಿ ಅವರು ಡಿಸಿಎಂ ಆಗಬಹುದು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾಂಗ್ರೆಸ್ ಪಕ್ಷಕ್ಕೆ 40 ಸ್ಥಾನಗಳನ್ನೂ ಗೆಲ್ಲಲಾಗದು, ಸಿದ್ದರಾಮಯ್ಯ ಉಡಾಫೆ ಮಾತುಗಳನ್ನು ನಿಲ್ಲಿಸಬೇಕು: ಬಿವೈ ವಿಜಯೇಂದ್ರ