ಹೆಚ್ಚುವರಿ ಡಿಸಿಎಂಗಳು ಬೇಕೆನ್ನುವವರು ಮಾಧ್ಯಮಗಳ ಮುಂದೆ ಮಾತಾಡುವ ಬದಲು ಹೈಕಮಾಂಡ್ ಬಳಿ ಹೋಗಿ ಕೇಳಲಿ: ಪ್ರಿಯಾಂಕ್ ಖರ್ಗೆ

|

Updated on: Jun 24, 2024 | 2:41 PM

ಮೊನ್ನೆಯಷ್ಟೆ ಲೋಕಸಭಾ ಚುನಾವಣೆ ಮುಗಿದಿದೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆಕ್ಕಿಂತ 4-5 ಸ್ಥಾನಗಳು ಕಡಿಮೆ ಸಿಕ್ಕಿವೆ. ಚುನಾವಣೆಯಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದ ಸಚಿವರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆಯಿದೆ. ಎಷ್ಟು ಸಚಿವರು ತಮಗೆ ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಖರ್ಗೆ ಪ್ರಶ್ನಿಸಿದರು.

ಬೆಂಗಳೂರು: ಹೆಚ್ಚುವರಿ ಡಿಸಿಎಂಗಳನ್ನು ನೇಮಕ ಮಾಡಬೇಕೆಂದು ಒಂದೇ ಸಮ ವರಾತ ತೆಗೆಯುತ್ತಿರುವ ತಮ್ಮ ಪಕ್ಷದ ಕೆಲ ನಾಯಕರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹರಿಹಾಯ್ದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಖರ್ಗೆ, ಹೆಚ್ಚುವರಿ ಡಿಸಿಎಂಗಳು (additional DCMs) ಬೇಕೆಂದು ಹೇಳುತ್ತಿರುವವರು ಮಾಧ್ಯಮಗಳ ಮುಂದೆ ಅವಲತ್ತುಕೊಳ್ಳದೆ ಪಕ್ಷದ ಹೈಕಮಾಂಡ್ ಇಲ್ಲವೇ ಸಿಎಲ್ ಪಿ (CLP) ಮುಂದೆ ಹೋಗಿ ತಮ್ಮ ಬೇಡಿಕೆಯನ್ನಿಡಲಿ. ಮಾಧ್ಯಮಗಳು ಅವರನ್ನು ಡಿಸಿಎಂ ಮಾಡಲಾರವು. ಈ ಬೇಡಿಕೆಯೇ ಹಾಸ್ಯಾಸ್ಪದ ಅನಿಸುತ್ತದೆ. ಒಬ್ಬ ಸಿಎಂರನ್ನು ಬಿಟ್ಟು ಮಿಕ್ಕವರೆಲ್ಲ ಉಪ ಮುಖ್ಯಮಂತ್ರಿಗಳಾಗಲಿ, ಆಗ ಎಲ್ಲ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಕ್ಕಂತಾಗುತ್ತದೆ ಎಂದು ಖರ್ಗೆ ಕುಹುಕವಾಡಿದರು. ಮೊನ್ನೆಯಷ್ಟೆ ಲೋಕಸಭಾ ಚುನಾವಣೆ ಮುಗಿದಿದೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆಕ್ಕಿಂತ 4-5 ಸ್ಥಾನಗಳು ಕಡಿಮೆ ಸಿಕ್ಕಿವೆ. ಚುನಾವಣೆಯಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದ ಸಚಿವರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆಯಿದೆ. ಎಷ್ಟು ಸಚಿವರು ತಮಗೆ ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಖರ್ಗೆ ಪ್ರಶ್ನಿಸಿದರು.

ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಕಾಂಗ್ರೆಸ್ ರಾಷ್ಟ್ರದ ಕ್ಷಮೆ ಕೇಳಬೇಕೆಂದು ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿರುವುದನ್ನು ಖರ್ಗೆ ಗೇಲಿ ಮಾಡಿದರು. ನೀಟ್ ಪರೀಕ್ಷೆಯಲ್ಲಿ ನಡೆದ ಅವ್ಯವಹಾರಗಳಿಂದ 25 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮನ ಸ್ಥಿತಿಯಲ್ಲಿದೆ, ಆರ್ ಅಶೋಕ, ಡಾ ಸಿಎನ್ ಅಶ್ವಥ್ ನಾರಾಯಣ ಮೊದಲಾದವರು ಇದರ ಬಗ್ಗೆ ಪ್ರತಿಭಟನೆ ಯಾಕೆ ಮಾಡಲ್ಲ? ಅಸಲಿಗೆ ಈ ವಿಷಯದಿಂದ ಜನ ಗಮನ ಡೈವರ್ಟ್ ಮಾಡಲು ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಿಯಾಂಕ್ ಖರ್ಗೆ ಹೇಳಿದ್ದು ಗಣನೆಗೆ ಬರಲ್ಲ, ಸಿಎಂ ಮತ್ತು ನಾನು ಹೇಳೋದು ಮಾತ್ರ ಅಧಿಕೃತ: ಜಿ ಪರಮೇಶ್ವರ್, ಗೃಹ ಸಚಿವ

Published on: Jun 24, 2024 02:34 PM