ದರ್ಶನ್ ನೋಡಲು ಜೈಲಿಗೆ ಬಂದು, ಮಾಧ್ಯಮದ ಕ್ಯಾಮೆರಾ ಕಂಡು ವಾಪಸ್ ಹೋದ ವಿಜಯಲಕ್ಷ್ಮಿ
ನ್ಯಾಯಾಂಗ ಬಂಧನದಲ್ಲಿ ಇರುವ ನಟ ದರ್ಶನ್ ಅವರನ್ನು ನೋಡಲು ಪರಪ್ಪನ ಅಗ್ರಹಾರಕ್ಕೆ ಆಪ್ತರು ಬರುತ್ತಿದ್ದಾರೆ. ಇಂದು (ಜೂನ್ 23) ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಜೈಲಿನ ಬಳಿ ಬಂದಿದ್ದರು. ಆದರೆ ಮಾಧ್ಯಮಗಳ ಕ್ಯಾಮೆರಾ ಕಂಡ ತಕ್ಷಣ ಅವರು ವಾಪಸ್ ಹೋಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ದರ್ಶನ್ ಅವರಿಗೆ ಸಂಕಷ್ಟ ಹೆಚ್ಚಾಗಿದೆ.
ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ (Darshan) ಅವರನ್ನು ನೋಡಲು ಆಪ್ತರು ಮತ್ತು ಕುಟುಂಬದವರು ಬರುತ್ತಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ (Darshan wife Vijayalakshmi) ಹಾಗೂ ಪುತ್ರ ವಿನೀಶ್ ಅವರು ಇಂದು (ಜೂನ್ 23) ಜೈಲಿನ ಬಳಿ ಬಂದಿದ್ದರು. ಆದರೆ ಜೈಲಿನ ಮುಂಭಾಗದಲ್ಲಿ ಮಾಧ್ಯಮಗಳ ಕ್ಯಾಮೆರಾಗಳನ್ನು ನೋಡಿದ ಕೂಡಲೇ ಅವರು ವಾಪಸ್ ತೆರಳಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಎಂಬ ವ್ಯಕ್ತಿಯ ಭೀಕರ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆಗಿದ್ದು, ಅವರಿಗೆ ಕಾನೂನಿನ ಸಂಕಷ್ಟ ಹೆಚ್ಚಾಗುತ್ತಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವಿಚಾರಣೆ ತೀವ್ರವಾದಂತೆಲ್ಲ ಅನೇಕ ಶಾಕಿಂಗ್ ವಿಚಾರಗಳು ಹೊರಬರುತ್ತಿವೆ. ಈ ಕೇಸ್ನಲ್ಲಿ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಎ1 ಆಗಿದ್ದಾರೆ. ಇನ್ನುಳಿದ ಸಹಚರರು ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos