ರಾಯಚೂರಿನ ಕಪಗಲ್ ಗ್ರಾಮದ ಶಾಲಾಮಕ್ಕಳು ರಸ್ತೆತಡೆದು ಪ್ರತಿಭಟನೆ ಮಾಡಿರುವುದನ್ನು ಸಾರಿಗೆ ಸಚಿವ ಅರ್ಥಮಾಡಿಕೊಳ್ಳಬೇಕು!

|

Updated on: Jun 24, 2024 | 11:51 AM

ಮಕ್ಕಳು ತಮ್ಮ ಬ್ಯಾಗುಗಳೊಂದಿಗೆ ರೆಡಿಯಾಗಿ ಬಂದು ಬಸ್ ಸ್ಟಾಪ್ ನಲ್ಲಿ ಬಸ್ ಗಾಗಿ ಕಾಯುತ್ತಾ ನಿಂತಾಗ ಊರಿನ ಮೂಲಕ ಹೋಗುವ ಕೆಎಸ್ ಆರ್ ಟಿಸಿ ಬಸ್ಸುಗಳು ನಿಲ್ಲದೆ ವೇಗವಾಗಿ ಹೋಗಿಬಿಟ್ಟರೆ ಮಕ್ಕಳಿಗಾಗುವ ನಿರಾಶೆ ಮತ್ತು ನಷ್ಟವನ್ನು ಸಚಿವ ರಾಮಲಿಂಗಾರೆಡ್ಡಿ ಅರ್ಥಮಾಡಿಕೊಳ್ಳಬೇಕು.

ರಾಯಚೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ (Siddaramaiah Government) ಅದರಲ್ಲೂ ವಿಶೇಷವಾಗಿ ಸಂಪುಟದಲ್ಲಿ ಸಾರಿಗೆ ಸಚಿವರಾಗಿರುವ ರಾಮಲಿಂಗಾರೆಡ್ಡಿ (Ramalinga Reddy ) ಜಿಲ್ಲೆಯ ರಾಯಚೂರು ತಾಲ್ಲೂಕಿನ ಕಪಗಲ್ ಗ್ರಾಮದಲ್ಲಿ (Kapagal village) ಶಾಲಾಮಕ್ಕಳು ರಸ್ತೆ ಬಂದ್ ಮಾಡಿ ನಡೆಸುತ್ತಿರುವ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ತಮ್ಮೂರಲ್ಲಿ ಬಸ್ ಗಳನ್ನು ನಿಲ್ಲಿಸುತ್ತಿಲ್ಲ, ಶಾಲೆಗೆ ಹೋಗುವುದು ಸಾಧ್ಯವಾಗುತ್ತಿಲ್ಲ ಎಂದು ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಗ್ರಾಮಸ್ಥರು ಸಹ ಅವರ ಜೊತೆಗೂಡಿದ್ದಾರೆ. ಮಕ್ಕಳು ಬೇರೆ ಬೇರೆ ತರಗತಿಗಳಲ್ಲಿ ಓದುತ್ತಿದ್ದಾರೆ ಅವರ ಬದುಕಿನ ಈ ಹಂತದಲ್ಲಿ ಶಾಲೆಗೆ ನಿಯಮಿತವಾಗಿ ಹೋಗುವುದು ಬಹಳ ಮಹತ್ವದ ಸಂಗತಿ. ಅವರು ತಮ್ಮ ಬ್ಯಾಗುಗಳೊಂದಿಗೆ ರೆಡಿಯಾಗಿ ಬಂದು ಬಸ್ ಸ್ಟಾಪ್ ನಲ್ಲಿ ಬಸ್ ಗಾಗಿ ಕಾಯುತ್ತಾ ನಿಂತಾಗ ಊರಿನ ಮೂಲಕ ಹೋಗುವ ಕೆಎಸ್ ಆರ್ ಟಿಸಿ ಬಸ್ಸುಗಳು ಅಲ್ಲಿ ನಿಲ್ಲದೆ ವೇಗವಾಗಿ ಹೋಗಿಬಿಟ್ಟರೆ ಮಕ್ಕಳಿಗಾಗುವ ನಿರಾಶೆ ಮತ್ತು ನಷ್ಟವನ್ನು ಸಚಿವ ರಾಮಲಿಂಗಾರೆಡ್ಡಿ ಅರ್ಥಮಾಡಿಕೊಳ್ಳಬೇಕು. ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಗಳ ಸೋಲಿನಿಂದ ಸಚಿವ ರಾಮಲಿಂಗಾರೆಡ್ಡಿ ಚೇತರಿಸಿಕೊಂಡಿದ್ದರೆ ಇಲಾಖೆಗೆ ಸಂಬಂಧಿಸಿದ ಕೆಲಸಗಳ ಕಡೆ ಗಮನ ಹರಿಸಲಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸಚಿವ ರಾಮಲಿಂಗಾರೆಡ್ಡಿ ಆಪ್ತನಿಂದ ಅರಣ್ಯ ಸಿಬ್ಬಂದಿಗೆ ಅವಾಜ್; ಕೋರ್ಟ್ ಆದೇಶದ ನಂತರ FIR ದಾಖಲು

Published On - 11:50 am, Mon, 24 June 24

Follow us on