ಸಚಿವ ರಾಮಲಿಂಗಾರೆಡ್ಡಿ ಆಪ್ತನಿಂದ ಅರಣ್ಯ ಸಿಬ್ಬಂದಿಗೆ ಅವಾಜ್; ಕೋರ್ಟ್ ಆದೇಶದ ನಂತರ FIR ದಾಖಲು

ಕಾವೇರಿ ನೀರು ಪೈಪ್ ಲೈನ್ ಕಾಮಗಾರಿ ತಡೆದ ಅರಣ್ಯ ಇಲಾಖೆ ಸಿಬ್ಬಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಆಪ್ತರೂ ಆಗಿರುವ ಕಾಂಗ್ರೆಸ್ ಮುಖಂಡ, ಬಿಲ್ಡರ್ ಬಾಬುರೆಡ್ಡಿ ಅವಾಚ್ಯ ಶಬ್ದಗಳಿಂದ ಅವಾಜ್ ಹಾಕಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ಆಡಿಯೋ ಲಭ್ಯವಾಗಿದೆ. ಆರಂಭದಲ್ಲಿ ಪೊಲೀಸರು ಎನ್​​ಸಿಆರ್ ದಾಖಲಿಸಿದ್ದರು. ಕೋರ್ಟ್ ಆದೇಶದ ನಂತರ ಎಫ್​ಐಆರ್ ದಾಖಲಿಸಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ ಆಪ್ತನಿಂದ ಅರಣ್ಯ ಸಿಬ್ಬಂದಿಗೆ ಅವಾಜ್; ಕೋರ್ಟ್ ಆದೇಶದ ನಂತರ FIR ದಾಖಲು
ಸಚಿವ ರಾಮಲಿಂಗಾರೆಡ್ಡಿ ಆಪ್ತನಿಂದ ಅರಣ್ಯ ಸಿಬ್ಬಂದಿಗೆ ಅವಾಜ್; FIR ದಾಖಲು
Follow us
| Updated By: Rakesh Nayak Manchi

Updated on: Feb 22, 2024 | 1:27 PM

ಆನೇಕಲ್, ಫೆ.22: ಕಾವೇರಿ ನೀರು ಪೈಪ್ ಲೈನ್ ಕಾಮಗಾರಿ ತಡೆದ ಅರಣ್ಯ ಇಲಾಖೆ ಸಿಬ್ಬಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರ ಆಪ್ತರೂ ಆಗಿರುವ ಕಾಂಗ್ರೆಸ್ ಮುಖಂಡ, ಬಿಲ್ಡರ್ ಬಾಬುರೆಡ್ಡಿ ಅವಾಚ್ಯ ಶಬ್ದಗಳಿಂದ ಅವಾಜ್ ಹಾಕಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ಆಡಿಯೋ ಲಭ್ಯವಾಗಿದೆ.

ಕಲ್ಕೆರೆ ಅರಣ್ಯ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆ ಪೈಪ್ ಲೈನ್ ಕಾಮಗಾರಿ ನಡೆಸಲಾಗುತ್ತಿತ್ತು. ಈ ವಿಚಾರ ತಿಳಿದ ರಾತ್ರಿ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ವಿಜಯ್ ಕುಮಾರ್, ಕಾಮಗಾರಿಯನ್ನು ತಡೆದಿದ್ದಾರೆ. ಫೆಬ್ರವರಿ 16 ರಂದು ರಾತ್ರಿ 10:45 ರ ಸುಮಾರಿಗೆ ನಡೆದ ಘಟನೆ ಇದಾಗಿದೆ. ಈ ವೇಳೆ ಗುತ್ತಿಗೆದಾರ ರಾಮಲಿಂಗಾರೆಡ್ಡಿ ಆಪ್ತರೂ ಆಗಿರುವ ಬನ್ನೇರುಘಟ್ಟ ಸಮೀಪದ ಸಕಲವಾರ ನಿವಾಸಿ ಬಾಬುರೆಡ್ಡಿಗೆ ಕರೆ ಮಾಡಿದ್ದಾರೆ.

ಇದನ್ನೂ ಓದಿ: ಜೆರೋಸಾ ಶಾಲೆ ಶಿಕ್ಷಕಿ ವಿರುದ್ಧ ಆಡಿಯೋ ವೈರಲ್ ಮಾಡಿದ ಆರೋಪ; ಮಹಿಳೆಗೆ ವಿದೇಶದಿಂದ ಬೆದರಿಕೆ ಕರೆ

ಅದರಂತೆ, ಸಿಬ್ಬಂದಿ ಜೊತೆ ಮಾತನಾಡಿದ ಬಾಬುರೆಡ್ಡಿ ಅವಾಚ್ಯ ಶಬ್ದಗಳಿಂದ ಅವಾಜ್ ಹಾಕಿದ್ದಾರೆ. ಸ್ಥಳದಿಂದ ಜಾಗ ಖಾಲಿ ಮಾಡು. ಇಲ್ಲದಿದ್ದರೆ ಸ್ಥಳಕ್ಕೆ ಬಂದು ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೋ ಲಭ್ಯವಾಗಿದೆ. ಈ ಬಗ್ಗೆ ದೂರು ಸ್ವೀಕರಿಸಿದ ಬನ್ನೇರುಘಟ್ಟ ಠಾಣಾ ಪೊಲೀಸರು ಎನ್​ಸಿಆರ್ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲಾಗಿತ್ತು. ಇದೀಗ ಕೋರ್ಟ್ ಆದೇಶದಂತೆ ಬಾಬುರೆಡ್ಡಿ ವಿರುದ್ಧ ಐಪಿಸಿ 1860, 506, 504 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ