ಭೈರಪ್ಪನವರು ಸಾವನ್ನಪ್ಪಿದ್ದು ನನಗೆ ನೋವಾಗಿಲ್ಲ: ಕೆಎಸ್ ಭಗವಾನ್ ಮನದ ಮಾತು ಕೇಳಿ
ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಬೆಂಗಳೂರಿನಲ್ಲಿ ಇಂದು (ಸೆಪ್ಟೆಂಬರ್ 24) ಮಧ್ಯಾಹ್ನ ವಿಧಿವಶರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಆರೆಸ್ಟ್ ಆಗಿ ವಿಧಿವಶರಾಗಿದ್ದಾರೆ. ಇನ್ನು ಕನ್ನಡ ಸರಸ್ವತಿ ಪುತ್ರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ದೊಡ್ಡ ಗಣ್ಯ ನಾಯಕರು ಸಂತಾಪ ಸೂಚಿಸಿದ್ದಾರೆ. ಇನ್ನು ಇಡೀ ಸಾಹಿತ್ಯ ಲೋಕವೇ ಭೈರಪ್ಪ ಅಗಲಿಕೆಗೆ ಕಂಬನಿ ಮಿಡಿದಿದೆ. ಅದರಲ್ಲೂ ಮುಖ್ಯವಾಗಿ ತಮ್ಮ ಎದುರು ಮನೆಯ ಸ್ನೇಹಿತ ಭೈರಪ್ಪನವರನ್ನು ಕಳೆದುಕೊಂಡಿರುವ ಬಗ್ಗೆ ಹಿರಿಯ ಸಾಹಿತಿ ಕೆಎಸ್ ಭಗವಾನ್ ಸಂತಾಪ ಸೂಚಿಸಿದ್ದು, ತಮ್ಮಿಬ್ಬರ ಒಡನಾಟವನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.
ಮೈಸೂರು, (ಸೆಪ್ಟೆಂಬರ್ 24): ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಬೆಂಗಳೂರಿನಲ್ಲಿ ಇಂದು (ಸೆಪ್ಟೆಂಬರ್ 24) ಮಧ್ಯಾಹ್ನ ವಿಧಿವಶರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಆರೆಸ್ಟ್ ಆಗಿ ವಿಧಿವಶರಾಗಿದ್ದಾರೆ. ಇನ್ನು ಕನ್ನಡ ಸರಸ್ವತಿ ಪುತ್ರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ದೊಡ್ಡ ಗಣ್ಯ ನಾಯಕರು ಸಂತಾಪ ಸೂಚಿಸಿದ್ದಾರೆ. ಇನ್ನು ಇಡೀ ಸಾಹಿತ್ಯ ಲೋಕವೇ ಭೈರಪ್ಪ ಅಗಲಿಕೆಗೆ ಕಂಬನಿ ಮಿಡಿದಿದೆ. ಅದರಲ್ಲೂ ಮುಖ್ಯವಾಗಿ ತಮ್ಮ ಎದುರು ಮನೆಯ ಸ್ನೇಹಿತ ಭೈರಪ್ಪನವರನ್ನು ಕಳೆದುಕೊಂಡಿರುವ ಬಗ್ಗೆ ಹಿರಿಯ ಸಾಹಿತಿ ಕೆಎಸ್ ಭಗವಾನ್ ಸಂತಾಪ ಸೂಚಿಸಿದ್ದು, ತಮ್ಮಿಬ್ಬರ ಒಡನಾಟವನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ. ಇದೇ ವೇಳೆ ಭಗವಾನ್ ಅವರು ಭೈರಪ್ಪನವರು ಹೋಗಿದ್ದು ದುಃಖವಾಗಿಲ್ಲ ಎಂದಿದ್ದಾರೆ.
ಅವರು ನೂರು ವರ್ಷ ಬದುಕಬೇಕಿತ್ತು. ಅದು ಆಗಿಲ್ಲ. ಆದರೆ ಬದುಕಿನಷ್ಟು ದಿನದಲ್ಲಿ ಎಲ್ಲಾ ಸಾಧಾನೆ ಮಾಡಿದ್ದಾರೆ, ಹೀಗಾಗಿ ಅವರು ಹೋಗಿದ್ದ ದುಃಖ ಅನ್ನಿಸಲಿಲ್ಲ. ಅವರೆಲ್ಲ ನಮಗೆ ಮಾದರಿಯಾಗಿದ್ದಾರೆ. ಸಾವು ನಿಶ್ಚಿತ. ಅದರಿಂದ ಏನು ಮಾಡುವುದಕ್ಕೆ ಆಗಲ್ಲ ಎಂದು ಸ್ನೇಹಿತನ ಬಗ್ಗೆ ತಮ್ಮ ಭಗವಾನ್ ಮನತುಂಬಿ ಮಾತನಾಡಿದ್ದಾರೆ.

