ಸಿನಿಮಾ ಶೂಟಿಂಗ್ನಲ್ಲಿ ನಟಿ ರಮೋಲಾ ಬ್ಯುಸಿ; ವೈರಲ್ ಆಗುತ್ತಿದೆ ಸಾಂಗ್ ಶೂಟ್ ವಿಡಿಯೋ
‘ರಿಚ್ಚಿ’ ಸಿನಿಮಾದಲ್ಲಿ ಸಾನಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಸಾಂಗ್ ಶೂಟಿಂಗ್ ಪ್ರಗತಿಯಲ್ಲಿದೆ. ಸೆಟ್ನ ಫೋಟೋಗಳು ವೈರಲ್ ಆಗಿವೆ.
‘ಕನ್ನಡತಿ’ ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದರು ರಮೋಲಾ. ಸಾನಿಯಾ ಹೆಸರಿನ ಪಾತ್ರವನ್ನು ಅವರು ಅದ್ಭುತವಾಗಿ ನಿರ್ವಹಿಸುತ್ತಿದ್ದರು. ರತ್ನಾಮಾಲಾ ಅವರ ಕುಟುಂಬದ ಸೊಸೆಯಾಗಿ, ಮಾಲಾ ಶಿಕ್ಷಣ ಸಂಸ್ಥೆಯ ಎಂ.ಡಿ. ಆಗಿ ಅವರು ಕಾಣಿಸಿಕೊಂಡಿದ್ದರು. ಈ ಕ್ಯಾರೆಕ್ಟರ್ ದಿನಕಳೆದಂತೆ ಮಹತ್ವ ಪಡೆದುಕೊಳ್ಳುತ್ತಾ ಸಾಗಿತ್ತು. ಅವರ ನಟನೆಯನ್ನು ಸಾಕಷ್ಟು ಮಂದಿ ಇಷ್ಟಪಟ್ಟಿದ್ದರು. ಆದರೆ, ರಮೋಲಾ ಏಕಾಏಕಿ ಕಿರುತೆರೆ ತೊರೆದು ಹೊರಬಂದಿದ್ದರು. ಇದಕ್ಕೆ ಕಾರಣ ಏನು ಎಂಬುದು ಈಗ ಗೊತ್ತಾಗಿದೆ. ಸಿನಿಮಾವೊಂದರಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ‘ರಿಚ್ಚಿ’ ಸಿನಿಮಾದಲ್ಲಿ ಸಾನಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಸಾಂಗ್ ಶೂಟಿಂಗ್ ಪ್ರಗತಿಯಲ್ಲಿದೆ. ಸೆಟ್ನ ಫೋಟೋಗಳು ವೈರಲ್ ಆಗಿವೆ. ಸಾನಿಯಾ ಹಿರಿತೆರೆಗೆ ಕಾಲಿಡೋಕೆ ಸಜ್ಜಾಗಿರುವ ವಿಚಾರ ಕೇಳಿ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸಿನಿಮಾ ಬಗ್ಗೆ ಸಂಪೂರ್ಣ ಅಪ್ಡೇಟ್ ಇನ್ನಷ್ಟೇ ತಿಳಿದುಬರಬೇಕಿದೆ. ಅವರು ‘ಕನ್ನಡತಿ’ ಧಾರಾವಾಹಿ ತೊರೆದಿದ್ದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.
ಇದನ್ನೂ ಓದಿ: Ramola: ಹಳದಿ ಬಣ್ಣದ ಡ್ರೆಸ್ನಲ್ಲಿ ಹುಡುಗರ ಹಾರ್ಟ್ಬೀಟ್ ಹೆಚ್ಚಿಸಿದ ಕಿರುತೆರೆ ನಟಿ ರಮೋಲಾ
Ramola: ರಮೋಲಾ ಈಗ ನಾಯಕಿ; ‘ಕನ್ನಡತಿ’ ವಿಲನ್ಗೆ ಸಿನಿಮಾದಲ್ಲಿ ಹೀರೋಯಿನ್ ಪಟ್ಟ