ಉತ್ತರ ಪ್ರದೇಶದಲ್ಲಿರುವ ಕನ್ನಡದ ಐಎಎಸ್ ಅಧಿಕಾರಿ ಸುಹಾಸ್ ಟೊಕಿಯೋ ಒಲಂಪಿಕ್ಸ್​​​​ನಲ್ಲಿ ರವಿವಾರ ಇತಿಹಾಸ ಸೃಷ್ಟಿಸಲಿದ್ದಾರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 04, 2021 | 8:42 PM

ಒಂದು ಪಕ್ಷ ಸೋತರೂ, ಉತ್ತರ ಪ್ರದೇಶದ ಗೌತಮ ಬುದ್ಧ ನಗರದ (ನೊಯಿಡಾ) ಜಿಲ್ಲಾ ಮ್ಯಾಜಿಸ್ಟ್ರೇಟ್​ ಆಗಿ ಕರ್ತವ್ಯ ನಿರ್ವಹಿಸುತ್ತಿರುವ 38-ವರ್ಷ ವಯಸ್ಸಿನ ವಿಕಾಸ್​​ ಅವರು ಬೆಳ್ಳಿ ಪದಕ ಗೆದ್ದು ಪ್ಯಾರಾ ಒಲಂಪಿಕ್ಸ್​​​​ನಲ್ಲಿ ಪದಕವೊಂದನ್ನು ಮೊಟ್ಟ ಮೊದಲ ಐ ಎ ಎಸ್​ ಅಧಿಕಾರಿ ಎನಿಸಿಕೊಳ್ಳಲಿದ್ದಾರೆ.

ಉತ್ತರ ಪ್ರದೇಶ ಕೇಡರ್​​ ಐ ಎ ಎಸ್ ಅಧಿಕಾರಿಯಾಗಿರುವ ಕನ್ನಡಿಗ ಸುಹಾಸ್ ಲಲಿನಕೆರೆ ಯತಿರಾಜ್​ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿದ್ದಾರೆ. ಟೋಕಿಯೋ ಪ್ಯಾರಾಒಲಂಪಿಕ್ಸ್​ ಬ್ಯಾಡ್ಮಿಂಟನ್ ಸ್ಫರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಲು ಕೇವಲ ಒಂದು ಹರ್ಡಲ್​ ಮಾತ್ರ ಬಾಕಿ ಇದ್ದು, ನಾಳೆ ಅಂದರೆ ರವಿವಾರದಂದು ನಡೆಯಲಿರುವ ಫೈನಲ್ ನಲ್ಲಿ ಅವರು ಟಾಪ್​ ಸೀಡ್​ ಫ್ರಾನ್ಸಿನ ಲುಕಾಸ್ ಮಾಜರ್​ ಅವರನ್ನು ಸೋಲಿಸಿದರೆ ಬಂಗಾರ ತಮ್ಮ ಕೊರಳಿಗೆ ಹಾಕಿಕೊಂಡು ಇತಿಹಾಸ ನಿರ್ಮಿಸಲಿದ್ದಾರೆ.

ಒಂದು ಪಕ್ಷ ಸೋತರೂ, ಉತ್ತರ ಪ್ರದೇಶದ ಗೌತಮ ಬುದ್ಧ ನಗರದ (ನೊಯಿಡಾ) ಜಿಲ್ಲಾ ಮ್ಯಾಜಿಸ್ಟ್ರೇಟ್​ ಆಗಿ ಕರ್ತವ್ಯ ನಿರ್ವಹಿಸುತ್ತಿರುವ 38-ವರ್ಷ ವಯಸ್ಸಿನ ವಿಕಾಸ್​​ ಅವರು ಬೆಳ್ಳಿ ಪದಕ ಗೆದ್ದು ಪ್ಯಾರಾ ಒಲಂಪಿಕ್ಸ್​​​​ನಲ್ಲಿ ಪದಕವೊಂದನ್ನು ಮೊಟ್ಟ ಮೊದಲ ಐ ಎ ಎಸ್​ ಅಧಿಕಾರಿ ಎನಿಸಿಕೊಳ್ಳಲಿದ್ದಾರೆ.

ಎಸ್​​ಎಲ್​4 ಕೆಟೆಗೆರಿಯಲ್ಲಿ ವಿಶ್ವದ ಮೂರನೇ ಕ್ರಮಾಂಕದ ಆಟಗಾರನಾಗಿರುವ ಸುಹಾಸ್​ ಅವರು ಶನಿವಾರ ಆಡಿದ ಸೆಮಿಫೈನಲ್​ ಪಂದ್ಯವೂ ಸೇರಿದಂತೆ ಮೂರು ಪಂದ್ಯಗಳನ್ನು ಗೆದ್ದಿದ್ದಾರೆ.

ಕಾಲಿನಿಂದ ಊನರಾಗಿರುವ ಸುಹಾಸ್​ ಅವರ ಸಾಧನೆ ಮತ್ತು ಪ್ರಗತಿಯನ್ನು ಬಹಳ ಕುತೂಹಲದಿಂದ ಗಮನಿಸುತ್ತಿರುವ ಐಎಎಸ್​ ಅಧಿಕಾರಿಗಳ ಸಂಘ ಟ್ವೀಟ್​ಮೂಲಕ ಅಭಿನಂಧಿಸುತ್ತಾ ಹಾರೈಸುತ್ತಿದೆ.

https://twitter.com/IASassociation/status/1433993969495470080?s=20

ಸುಹಾಸ ಹಾಸನದವರಾದರೂ ಓದಿ ಬೆಳೆದಿದ್ದು ಶಿವಮೊಗ್ಗದಲ್ಲಿ. ಸುರತ್ಕಲ್ ನ ನ್ಯಾಶನಲ್​ ಇನ್ಸ್​ಸ್ಟಿಟ್ಯೂಟ್​ ಅಫ್​ ಟೆಕ್ನಾಲಜಿಯಲ್ಲಿ ಕಂಪ್ಯೂಟರ್​ ಸೈನ್ಸ್ ಇಂಜಿನೀಯರಿಂಗ್ ಪದವಿ ಪಡೆದ ಮೇಲೆ ಯುಪಿಎಸ್​​ಸಿ ನಡೆಸುವ ಐ ಎ ಎಸ್​ ಪರೀಕ್ಷೆ ಬರೆದು ಉತ್ತಮ ಱಂಕ್​ನೊಂದಿಗೆ ಪಾಸು ಮಾಡಿ ಉತ್ತರ ಪ್ರದೇಶದ ಬೇರೆ ಬೇರೆ ಜಿಲ್ಲೆಗಳಲ್ಲಿ ಡಿಸ್ಟ್ರಿಕ್ಟ್​ ಮ್ಯಾಜಿಸ್ಟ್ರೇಟ್ ಸೇವೆ ಸಲ್ಲಿಸುತ್ತಿದ್ದಾರೆ.

#Cheer4Suhas ಹ್ಯಾಷ್ಟ್ಯಾಗ್ ನೊಂದಿಗೆ ಅನೇಕ ಜನ ಮತ್ತು ವಾಟ್ಸ್ಯಾಪ್​ ಗ್ರೂಪ್​​​ಗಳು ಸುಹಾಸ್​ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿವೆ. ನೀವೂ ಅಭಿನಂದಿಸಿ ಹಾರೈಸಿ.

ಇದನ್ನೂ ಓದಿ:  Tokyo Paralympics: ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದ ಪ್ರಮೋದ್ ಭಗತ್! ಕಂಚು ಗೆದ್ದ ಮನೋಜ್ ಸರ್ಕಾರ್