ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು

Edited By:

Updated on: Feb 27, 2026 | 7:15 PM

ಏರ್​ ವಿಮಾನದಲ್ಲಿ ಬೆಂಗಳೂರಿನಿಂದ ನೇಪಾಳದ (Nepal) ಕಠ್ಮಂಡು (Kathmandu) ಹೊರಟಿದ್ದ ಕನ್ನಡಿಗರು (Kolar) ಪರದಾಡಿರುವ ಘಟನೆ ನಡೆದಿದೆ. ಕಠ್ಮಂಡುನಲ್ಲಿ ವಿಮಾನ ಲ್ಯಾಂಡಿಂಗ್​ಗೆ ಅನುಮತಿ ಸಿಗದ ಕಾರಣ ಎರಡು ದಿನ ವಿಮಾನದಲ್ಲೇ ಉಳಿಯುವಂತಾಗಿದೆ. ವಿಮಾನವು ಸಹ ಎಲ್ಲೂ ಲ್ಯಾಡ್ ಆಗದೇ ಆಕಾಶದಲ್ಲಿ ರೌಂಡ ಹಾಕಿದೆ.ಇದರಿಂದ ಪ್ರವಾಸಕ್ಕೆಂದು ತೆರಳಿದ್ದ ಪ್ರಯಾಣಿಕರು ಎರಡು ದಿನಗಳಿಂದ ಪ್ಲೈಟ್ ನಲ್ಲೇ ಸಿಲುಕಿ ಪರದಾಡಿದ್ದಾರೆ. ಇ

ಬೆಂಗಳೂರು, (ಫಬ್ರವರಿ 27): ಏರ್​ ವಿಮಾನದಲ್ಲಿ ಬೆಂಗಳೂರಿನಿಂದ ನೇಪಾಳದ (Nepal) ಕಠ್ಮಂಡು (Kathmandu) ಹೊರಟಿದ್ದ ಕನ್ನಡಿಗರು (Kolar) ಪರದಾಡಿರುವ ಘಟನೆ ನಡೆದಿದೆ. ಕಠ್ಮಂಡುನಲ್ಲಿ ವಿಮಾನ ಲ್ಯಾಂಡಿಂಗ್​ಗೆ ಅನುಮತಿ ಸಿಗದ ಕಾರಣ ಎರಡು ದಿನ ವಿಮಾನದಲ್ಲೇ ಉಳಿಯುವಂತಾಗಿದೆ. ವಿಮಾನವು ಸಹ ಎಲ್ಲೂ ಲ್ಯಾಡ್ ಆಗದೇ ಆಕಾಶದಲ್ಲಿ ರೌಂಡ ಹಾಕಿದೆ.ಇದರಿಂದ ಪ್ರವಾಸಕ್ಕೆಂದು ತೆರಳಿದ್ದ ಪ್ರಯಾಣಿಕರು ಎರಡು ದಿನಗಳಿಂದ ಪ್ಲೈಟ್ ನಲ್ಲೇ ಸಿಲುಕಿ ಪರದಾಡಿದ್ದಾರೆ. ಇನ್ನು ವಿಮಾನದಲ್ಲಿ ಸರಿಯಾದ ಊಟ ನೀರು ಕೊಡದೆ ತೊಂದರೆ ಕೊಡ್ತಿದ್ದಾರೆ ಎಂದು ಪ್ರಯಾಣಿಕರ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಿಂದ ಏರ್ ಇಂಡಿಯಾ ವಿಮಾನದಲ್ಲಿ ನಿನ್ನೆ(ಫೆಬ್ರವರಿ 26) ಬೆಳಗ್ಗೆ ಕಠ್ಮಂಡುಗೆ ಪ್ರಯಾಣ ಬೆಳೆಸಿದ್ದರು. ಆದ್ರೆ ಹವಾಮಾನ ವೈಪರಿತ್ಯದಿಂದಾಗಿ ಕಠ್ಮಂಡುನಲ್ಲಿ ವಿಮಾನ ಲ್ಯಾಂಡಿಂಗ್​ಗೆ ಅನುಮತಿ ಸಿಗದ ಕಾರಣ ವಿಮಾನ, ದಿನ ಪೂರ್ತಿ ಸುತ್ತಾಡಿ ರಾತ್ರಿ ವಾಪಸ್ ಬೆಂಗಳೂರಿಗೆ ಬಂದಿದೆ. ನಂತರ ಇಂದು (ಫೆಬ್ರವರಿ 27) ಬೆಳಗ್ಗೆ ಮತ್ತೆ ಬೆಳಗ್ಗೆ ಅದೇ ಪ್ಲೈಟ್ ನಲ್ಲಿ 170 ಜನ ಪ್ರಯಾಣಿಕರನ್ನ ಕರೆದೊಯ್ದಿದೆ.

Loading...
Unable to load recommendations.
Follow Us
ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More