‘ಕಾಂತಾರ: ಚಾಪ್ಟರ್ 1’ ವಿಶೇಷ ಶೋ ಝಲಕ್; ಮಿಂಚಿದ ರಿಷಬ್, ರುಕ್ಮಿಣಿ
‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಅದ್ದೂರಿಯಾಗಿ ಶೋ ಒಂದನ್ನು ಆಯೋಜನೆ ಮಾಡಲಾಗಿತ್ತು. ಈ ಶೋಗೆ ರಿಷಬ್, ರುಕ್ಮಿಣಿ ವಸಂತ್ ಹಾಗೂ ಕುಟುಂಬದವರು ಹಾಜರಿ ಹಾಕಿದ್ದರು. ಈ ಶೋ ಸಾಕಷ್ಟು ಗಮನ ಸೆಳೆದಿದೆ. ಅದರ ವಿಡಿಯೋನ ‘ಕಾಂತಾರ: ಚಾಪ್ಟರ್ 1’ ತಂಡ ಹಂಚಿಕೊಂಡಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದ ವಿಶೇಷ ಶೋ ಅಕ್ಟೋಬರ್ 1ರಂದು ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಆಯೋಜನೆ ಮಾಡಲಾಗಿತ್ತು. ಈ ಶೋಗೆ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಕೆಲಸ ಮಾಡಿದವರು ಹಾಗೂ ಅವರ ಕುಟುಂಬದವರು ಹಾಜರಿ ಹಾಕಿದ್ದರು. ಈ ವಿಡಿಯೋದಲ್ಲಿ ರಿಷಬ್ ಹಾಗೂ ರುಕ್ಮಿಣಿ ಗಮನ ಸೆಳೆದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.