ಮತ್ತೊಂದು ವಿವಾದದಲ್ಲಿ ‘ಕಾಂತಾರ’ ಸಿನಿಮಾ; ದಲಿತರನ್ನು ಕೀಳಾಗಿ ತೋರಿಸಲಾಗಿದೆ ಎಂಬ ಆರೋಪ
ದಲಿತ ಮಹಿಳೆಯರು, ದಲಿತ ಯುವಕರಿಗೆ ಅವಮಾನ ಮಾಡಲಾಗಿದೆ. ದಲಿತ ಸಮುದಾಯದ ಯುವಕರನ್ನು ಪೋಲಿ ಹುಡುಗರ ರೀತಿ ಚಿತ್ರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
‘ಕಾಂತಾರ’ ಸಿನಿಮಾ (Kantara Movie) ಪ್ರದರ್ಶನ ಸ್ಥಗಿತಗೊಳಿಸುವಂತೆ ದಲಿತ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಮಾಡಿವೆ. ‘ಕಾಂತಾರ’ ಚಿತ್ರದಲ್ಲಿ ದಲಿತ ಸಮುದಾಯಕ್ಕೆ ಅವಹೇಳನ ಮಾಡಲಾಗಿದೆ. ದಲಿತ ಮಹಿಳೆಯರು, ದಲಿತ ಯುವಕರಿಗೆ ಅವಮಾನ ಮಾಡಲಾಗಿದೆ. ದಲಿತ ಸಮುದಾಯದ ಯುವಕರನ್ನು ಪೋಲಿ ಹುಡುಗರ ರೀತಿ ಚಿತ್ರಿಸಲಾಗಿದೆ. ಹಣ-ಹೆಂಡ ಕೊಟ್ಟರೆ ಏನು ಬೇಕಾದರೂ ಮಾಡುತ್ತಾರೆ ಎಂಬ ರೀತಿಯಲ್ಲಿ ತೋರಿಸಲಾಗಿದೆ. ಹೀಗಾಗಿ ಸಿನಿಮಾ ಪ್ರದರ್ಶನ ನಿಲ್ಲಬೇಕು’ ಎಂದು ಸಮತಾ ಸೈನಿಕದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಆಗ್ರಹಿಸಿದ್ದಾರೆ.
Latest Videos