AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲೀಸ್​​ಗೂ ಮೊದಲೇ ‘ಕರಾವಳಿ’ಗೆ ಮೆಚ್ಚುಗೆ; ಪ್ರೀಮಿಯರ್ ಶೋಗೆ ಪಾಸಿಟಿವ್ ರೆಸ್ಪಾನ್ಸ್

ರಿಲೀಸ್​​ಗೂ ಮೊದಲೇ ‘ಕರಾವಳಿ’ಗೆ ಮೆಚ್ಚುಗೆ; ಪ್ರೀಮಿಯರ್ ಶೋಗೆ ಪಾಸಿಟಿವ್ ರೆಸ್ಪಾನ್ಸ್

ರಾಜೇಶ್ ದುಗ್ಗುಮನೆ
|

Updated on: Jul 22, 2026 | 11:48 AM

Share

ದಾವಣಗೆರೆಯಲ್ಲಿ ಕರಾವಳಿ ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಾಬಲ, ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ ಶೆಟ್ಟಿ ಅವರ ಅಭಿನಯವನ್ನು ಅಭಿಮಾನಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಗುರುದತ್ತ್ ಗಾಣಿಗ ನಿರ್ದೇಶನದ ಈ ಚಿತ್ರದ ಭರ್ಜರಿ ಬ್ಯಾಕ್‌ಗ್ರೌಂಡ್ ಸ್ಕೋರ್ ಮತ್ತು ಭಾವನಾತ್ಮಕ ಕಥೆಗೆ ಪ್ರೇಕ್ಷಕರು ಸಂಪೂರ್ಣವಾಗಿ ಕಳೆದುಹೋಗಿದ್ದಾರೆ.

ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ನಟನೆಯ ‘ಕರಾವಳಿ’ ಚಿತ್ರ ವಿವಿಧ ಕಡೆ ಪ್ರೀಮಿಯರ್ ಶೋ ಆಯೋಜನೆ ಮಾಡುತ್ತಿದೆ. ಇದಕ್ಕೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ದಾವಣಗೆರೆಯಲ್ಲಿ ನಡೆದ ಪ್ರೀಮಿಯರ್ ಪ್ರದರ್ಶನಕ್ಕೆ ಸಿನಿಪ್ರೇಮಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಭಾವನಾತ್ಮಕವಾಗಿ ಚಿತ್ರಕ್ಕೆ ಕನೆಕ್ಟ್ ಆಗಿದ್ದು, ಮೈಯಲ್ಲೆಲ್ಲಾ ಗೂಸ್​ಬಂಪ್ಸ್ ಬಂದ ಅನುಭವ ಹಂಚಿಕೊಂಡಿದ್ದಾರೆ. ಪಾತ್ರವರ್ಗದ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಅದರಲ್ಲೂ ಮಹಾಬಲನ ಪಾತ್ರಕ್ಕೆ ಮಾತೇ ಇಲ್ಲ ಎಂದು ಹಲವರು ಹೇಳಿದ್ದಾರೆ.

ಈ ಹಿಂದೆ ಕಾಮಿಡಿ ಪಾತ್ರಗಳಲ್ಲಿ ಹೆಚ್ಚಾಗಿ ಕಂಡ ಮಿತ್ರ ಅವರ ಅಭಿನಯ ನೆಕ್ಸ್ಟ್ ಲೆವೆಲ್ ಎಂದು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ. ಪ್ರಜ್ವಲ್ ದೇವರಾಜ್ ಅವರ ಅಭಿನಯ ಕೂಡ ಸೂಪರ್ ಆಗಿದ್ದು, ಇದು ಅವರಿಗೆ ಒಳ್ಳೆಯ ಕಮ್‌ಬ್ಯಾಕ್ ಎಂದು ಬಣ್ಣಿಸಿದ್ದಾರೆ. ರಾಜ್ ಬಿ ಶೆಟ್ಟಿ ನಟನೆಯೂ ಸಖತ್ ಆಗಿದೆ ಎಂದಿದ್ದಾರೆ. ‘ಕರಾವಳಿ ಸಿನಿಮಾಗೆ ಗುರುದತ್ತ್ ಗಾಣಿಗ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Follow Us