ಕೆಲಸ ಏನೂ ಅನ್ನೋದೇ ಗೊತ್ತಿಲ್ಲ ನಿಮ್ಗೆ, ನಾವೇನು ಮಣ್ಣು ತಿನ್ನೋದಾ? ಮಹಿಳೆ ಫುಲ್ ಗರಂ

Updated on: Dec 10, 2025 | 5:08 PM

ಸುರ್ವಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದರೆ, ಇತ್ತ ಹೊರಗಡೆ ಸಾಲು ಸಾಲು ಪ್ರತಿಭಟನೆಗಳು ನಡೆದಿವೆ. ಅದರಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟಂತೆ ನಮಗೂ ಗೌರವ ಧನ ಹೆಚ್ಚಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ನೀವು ಈಗ ತಿಂಗಳಿಗೆ ಹದಿನೈದು ಸಾವಿರ ವೇತನ ಪಡೆಯುತ್ತಿದ್ದೀರಿ ಎಂದರು. ಈ ಮಾತು ಹೇಳುತ್ತಿದ್ದಂತೆಯೇ ಆಶಾ ಕಾರ್ಯಕರ್ತೆಯರು ಸಿಡಿದೆದ್ದಿದ್ದು, ಇಲ್ಲ ಯಾರಿಗೂ ಅಷ್ಟು ಹಣ ಸಿಗುತ್ತಿಲ್ಲ. ದಾರಿ ತಪ್ಪಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗಾದ್ರೆ, ಏನೆಲ್ಲಾ ಆಯ್ತು ಎನ್ನುವುದನ್ನು ವಿಡಿಯೋದಲ್ಲಿ ನೀವೇ ನೋಡಿ.

ಬೆಳಗಾವಿ, (ಡಿಸೆಂಬರ್ 10): ಸುರ್ವಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದರೆ, ಇತ್ತ ಹೊರಗಡೆ ಸಾಲು ಸಾಲು ಪ್ರತಿಭಟನೆಗಳು ನಡೆದಿವೆ. ಅದರಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟಂತೆ ನಮಗೂ ಗೌರವ ಧನ ಹೆಚ್ಚಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ನೀವು ಈಗ ತಿಂಗಳಿಗೆ ಹದಿನೈದು ಸಾವಿರ ವೇತನ ಪಡೆಯುತ್ತಿದ್ದೀರಿ ಎಂದರು. ಈ ಮಾತು ಹೇಳುತ್ತಿದ್ದಂತೆಯೇ ಆಶಾ ಕಾರ್ಯಕರ್ತೆಯರು ಸಿಡಿದೆದ್ದಿದ್ದು, ಇಲ್ಲ ಯಾರಿಗೂ ಅಷ್ಟು ಹಣ ಸಿಗುತ್ತಿಲ್ಲ. ದಾರಿ ತಪ್ಪಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗಾದ್ರೆ, ಏನೆಲ್ಲಾ ಆಯ್ತು ಎನ್ನುವುದನ್ನು ವಿಡಿಯೋದಲ್ಲಿ ನೀವೇ ನೋಡಿ.