ಬೆಳಗಾವಿ ಅಧಿವೇಶನ; ಪಿಎಸ್​ಐ ಹಗರಣದಲ್ಲಿ ಭಾಗಿಯಾಗಿರುವವರನ್ನು ಚೆನ್ನಾಗಿ ತದುಕಿ ಜೈಲಿಗೆ ಹಾಕಬೇಕು: ಬಸನಗೌಡ ಪಾಟೀಲ್ ಯತ್ನಾಳ್

|

Updated on: Dec 04, 2023 | 7:31 PM

Karnataka Assembly Winter Session: ಸದನದಲ್ಲಿ ಮಾತಾಡುವಾಗ ಬಸನಗೌಡ ಯತ್ನಾಳ್ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಾಲೆಳೆದರು. ಪಿಎಸ್ ಐ ನೇಮಕಾತಿ ಹಗರಣವನ್ನು ಹಾಗೆ ಹೀಗೆ ಮಾಡ್ತೀವಿ ಅಂತ ವೀರಭದ್ರನ ಹಾಗೆ ವೀರಾವೇಶದಿಂದ ಕೂಗಾಡಿದ ಸಚಿವರು ಈಗ್ಯಾಕೆ ಸುಮ್ಮನಾಗಿದ್ದಾರೋ ಅಂತ ಲೇವಡಿ ಮಾಡಿದಾಗ ಉತ್ತರಿಲು ಸಚಿವ ಎದ್ದುನಿಂತರು.

ಬೆಳಗಾವಿ: ಬೆಳಗಾವಿ ವಿಧಾನ ಸಭಾ ಅಧಿವೇಶನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಸರ್ಕಾರಕ್ಕಿಂತ ತಮ್ಮ ಪಕ್ಷದ ಸದಸ್ಯರಿಗೆ ಹೆಚ್ಚು ಕಂಟಕಪ್ರಾಯರಾಗುತ್ತಿದ್ದಾರೆ! ನಿಮಗೆ ನೆನಪಿರಬಹುದು, ಪಿಎಸ್ ಐ ನೇಮಕಾತಿ ಹಗರಣ (PSI recruitment scam) ಬೆಳಕಿಗೆ ಬಂದಾಗ ಅವರು ನೇರವಾಗಿ ಅಗಿನ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪನವರ ಮಗ ಬಿವೈ ವಿಜಯೇಂದ್ರ ಮೇಲೆ ಆರೋಪ ಮಾಡಿದ್ದರು. ಇವತ್ತು ಸದನದಲ್ಲಿ ಡಿಸೆಂಬರ್ 23ರಂದು ನಡೆಯಲಿರುವ ಪಿಎಸ್ ಐ ಪರೀಕ್ಷೆಗೆ ಸಂಬಂಧಿಸಿದಂತೆ ಮಾತಾಡಿದ ಯತ್ನಾಳ್ ಪರೀಕ್ಷೆ ಬರೆಯಲಿರುವ ಉದ್ಯೋಗಾಕಾಂಕ್ಷಿಗಳಿಗೆ ಪೂರ್ವತಯಾರಿಗಾಗಿ ಸಮಯ ಸಿಕ್ಕಿರದ ಕಾರಣ ಪರೀಕ್ಷೆಯನ್ನು 6 ತಿಂಗಳು ಇಲ್ಲವೇ ಕನಿಷ್ಟ 3 ತಿಂಗಳು ಮುಂದೂಡಬೇಕೆಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಮಾಡುತ್ತಿರುವುದಾಗಿ ಹೇಳಿದರು. ಮುಂದುವರಿದು ಮಾತಾಡಿದ ಅವರು ಪಿಎಸ್ ಐ ನೇಮಕಾತಿ ಹಗರಣವನ್ನು ತನಿಖೆಗೆ ಒಪ್ಪಿಸಿ ಅದರಲ್ಲಿ ಶಾಮೀಲಾಗಿರುವವರನ್ನು ಒದ್ದು ಜೈಲಿಗೆ ಹಾಕಿಸುವ ಕೆಲಸವಾಗಬೇಕು ಅಂತ ಒತ್ತಾಯಿಸುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 04, 2023 07:25 PM