ಅಜಾನ್ ವಿರುದ್ಧ ಕೂಗುಮಾರಿಗಳ ಕೂಗು ಜೋರಾಗಿದೆ, ಸರಕಾರ ಯಾಕೋ ಮೌನಕ್ಕೆ ಜಾರಿದೆ: ಟಿವಿ9 ಡಿಜಿಟಲ್ ಲೈವ್ ಚರ್ಚೆಗೆ ಬನ್ನಿ
Karnataka BJP Givernment: ಇದು ಸದ್ಯಕ್ಕೆ ನಿಲ್ಲುವ ಸೂಚನೆಗಳೂ ಇಲ್ಲವಾಗಿದೆ. ಆಜಾನ್ ನಿಂದ ತೊಂದರೆ ಆಗುತ್ತಿದೆ. ಹಾಗಾಗಿ, ಅದನ್ನು ನಿಲ್ಲಿಸಬೇಕು ಎಂಬ ಕೂಗು ಜೋರಾಗಿದೆ. ಮುಸ್ಲಿಮರ ವಿರುದ್ಧ ಈ ರೀತಿ ಪ್ರಚಾರ ಕೈಗೊಂಡಿರುವ ಕೂಗುಮಾರಿಗಳು ಬಿಜೆಪಿಯ ಭಾಗ ಅಲ್ಲದಿದ್ದರೆ ಅವರ ವಿರುದ್ಧ ಬಿಜೆಪಿ ಸರಕಾರವು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂಬುದು ಸದ್ಯದ ಚರ್ಚಾರ್ಹ ಪ್ರಶ್ನೆ.
ಬೆಂಗಳೂರು: ಲವ್ ಹಿಜಾದ್, ಅದಾದ ಮೇಲೆ ಹಿಜಾಬ್ ಇದೀಗ ಅಜಾನ್ ಹೀಗೆ ಸರಣಿ ಸಮುದಾಯ ಅಶಾಂತಿ ಕಾರ್ಯಯೋಜನೆಗಳು ಕರ್ನಾಟಕದಲ್ಲಿ ನಿರಂತರವಾಗಿ ಚಾಲ್ತಿಯಲ್ಲಿವೆ. ಇದು ಯಾರ ಯೋಜನೆಗಳೋ ಬಹಿರಂಗವಾಗಿ ತಿಳಿದಿಲ್ಲವಾದರೂ ಅದಕ್ಕೆ ಮೂಗುದಾರ ಹಾಕಬೇಕಿದ್ದ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆರೋಪ, ಮಾತುಗಳೂ ಸಹಾ ಜಾರಿಯಲ್ಲಿವೆ. ಹೌದು ಹಿಂದೂ ಜಾತ್ರೆಗಳಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು ಎಂಬ ವಿವಾದದಿಂದ ಶುರುವಾದ ಹಿಂದೂ ಸಂಘಟನೆಗಳ ವಿವಾದ ಈಗ ಅಜಾನ್ ವರೆಗೂ ಬಂದು ನಿಂತಿದೆ.
ಇದು ಸದ್ಯಕ್ಕೆ ನಿಲ್ಲುವ ಸೂಚನೆಗಳೂ ಇಲ್ಲವಾಗಿದೆ. ಆಜಾನ್ ನಿಂದ ತೊಂದರೆ ಆಗುತ್ತಿದೆ. ಹಾಗಾಗಿ, ಅದನ್ನು ನಿಲ್ಲಿಸಬೇಕು ಎಂಬ ಕೂಗು ಜೋರಾಗಿದೆ. ಮುಸ್ಲಿಮರ ವಿರುದ್ಧ ಈ ರೀತಿ ಪ್ರಚಾರ ಕೈಗೊಂಡಿರುವ ಕೂಗುಮಾರಿಗಳು ಬಿಜೆಪಿಯ ಭಾಗ ಅಲ್ಲದಿದ್ದರೆ ಅವರ ವಿರುದ್ಧ ಬಿಜೆಪಿ ಸರಕಾರವು (Karnataka BJP Government) ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂಬುದು ಸದ್ಯದ ಪ್ರಶ್ನೆ. ಈ ಕುರಿತು ಇಂದಿನ ಟಿವಿ 9 ಕನ್ನಡ ಡಿಜಿಟಲ್ ಲೈವ್ನಲ್ಲಿ ಹಿರಿಯ ಆ್ಯಂಕರ್ ಹರಿಪ್ರಸಾದ್ ಚರ್ಚೆ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ರ ಈ ಚರ್ಚೆಗೆ ನಿಮಗಿದೋ ಸ್ವಾಗತ… ಕೂಗುಮಾರಿಗಳಿಗೆ ಸರಕಾರ ಮೂಗುದಾರ ಹಾಕುತ್ತಿಲ್ಲ, ಯಾಕೆ (Islamic Prayer, Azan, Namaz)?
Also Watch:
RRR Box Office Collection: ಬಾಕ್ಸಾಫೀಸ್ನಲ್ಲಿ ‘ಆರ್ಆರ್ಆರ್’ ದಾಖಲೆಯ ಓಟ; ₹ 1,000 ಕೋಟಿ ಕ್ಲಬ್ಗೆ ಇನ್ನೆಷ್ಟು ದೂರ?
Published on: Apr 05, 2022 03:31 PM
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್ ಅಶೋಕ್
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್ಗೆ ಸೂಚನೆ

