ರಾಜ್ಯ ಬಿಜೆಪಿ ಒಂದೇ ಕುಟುಂಬದ ಹಿಡಿತಕ್ಕೆ ಸಿಕ್ಕಿ ನಲುಗಿರುವುದರಿಂದ ಹೊಸದಾಗಿ ಕಟ್ಟಬೇಕಿದೆ ಎನ್ನುತ್ತಿದ್ದಾರೆ ನಾಯಕರು: ಪ್ರಿಯಾಂಕ್ ಖರ್ಗೆ

|

Updated on: Mar 27, 2024 | 1:37 PM

ಕೆಎಸ್ ಈಶ್ವರಪ್ಪ, ಡಿವಿ ಸದಾನಂದ ಗೌಡ ಮತ್ತು ಅನಂತಕುಮಾರ್ ಹೆಗಡೆ ಮೊದಲಾದವರು ರಾಜ್ಯದಲ್ಲಿ ಪಕ್ಷವು ಒಂದೇ ಕುಟುಂಬದ ಹಿಡಿತಕ್ಕೆ ಸಿಕ್ಕು ನಲುಗುತ್ತಿರುವುದರಿಂದ ಅದನ್ನು ಶುದ್ಧೀಕರಣ ಮಾಡಿ ಪುನಃ ಹೊಸದಾಗಿ ಕಟ್ಟಬೇಕಿದೆ ಎನ್ನುತ್ತಿದ್ದಾರೆ ಅಂತ ಹೇಳಿದರು.

ಕಲಬುರಗಿ: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ರಾಜ್ಯದಲ್ಲಿ ಬಿಜೆಪಿ ಒಂದು ಒಡೆದ ಮನೆಯಾಗಿದೆ (divided house), ಒಂದೇ ಕುಟುಂಬದ (one family dominance) ಹಿಡಿತಕ್ಕೆ ಸಿಕ್ಕು ಮುರುಟಿ ಹೋಗುತ್ತಿದೆ, ತಮ್ಮ ಮನೆಯನ್ನು ನೇರಗೊಳಿಸಿಕೊಳ್ಳುವ ಬದಲು ಆದರ ನಾಯಕರು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ ಎಂದರು. ಕೆಎಸ್ ಈಶ್ವರಪ್ಪ, ಡಿವಿ ಸದಾನಂದ ಗೌಡ ಮತ್ತು ಅನಂತಕುಮಾರ್ ಹೆಗಡೆ ಮೊದಲಾದವರು ರಾಜ್ಯದಲ್ಲಿ ಪಕ್ಷವು ಒಂದೇ ಕುಟುಂಬದ ಹಿಡಿತಕ್ಕೆ ಸಿಕ್ಕು ನಲುಗುತ್ತಿರುವುದರಿಂದ ಅದನ್ನು ಶುದ್ಧೀಕರಣ ಮಾಡಿ ಪುನಃ ಹೊಸದಾಗಿ ಕಟ್ಟಬೇಕಿದೆ ಎನ್ನುತ್ತಿದ್ದಾರೆ ಅಂತ ಹೇಳಿದರು. ಸಿಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಪ್ರತಾಪ್ ಸಿಂಹ ಮುಂತಾದವರು ಹಿಂದೂತ್ವವನ್ನು ಪ್ರತಿಪಾದಿಸುವ ನಾಯಕರಿಗೆ ಕವಡೆಕಾಸಿನ ಕಿಮ್ಮತ್ತು ಸಿಗುತ್ತಿಲ್ಲ ಎಂದು ಹಲುಬುತ್ತಿದ್ದಾರೆ ಎಂದು ಖರ್ಗೆ ಹೇಳಿದರು. ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಹೇಳಿಕೊಳ್ಳಲು ಏನೂ ಇಲ್ಲ, ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದನ್ನೇ ಅವರು ತಮ್ಮ ಪ್ರಚಾರದ ಅಸ್ತ್ರವಾಗಿಸಿಕೊಂಡಿದ್ದಾರೆ. ಯಾವುದೇ ಸಾಧನೆ ಮಾಡದ ಕಾರಣ ಮತ್ತೇ ಧರ್ಮ ಮತ್ತು ದೇವರ ಮೇಲೆ ವೋಟು ಕೇಳುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜಾತಿಗಣತಿ ವರದಿ ಸಲ್ಲಿಕೆ; ಜನಸಂಖ್ಯೆ ಆಧಾರದ ಮೇಲೆ ಹಕ್ಕು ಹಂಚಲು ಕಾಂಗ್ರೆಸ್ ನಾಯಕರ ತಕರಾರಿಲ್ಲ: ಪ್ರಿಯಾಂಕ್ ಖರ್ಗೆ