ಸುಮಲತಾರೊಂದಿಗೆ ವರಿಷ್ಠರು ಸಂಪರ್ಕದಲ್ಲಿದ್ದಾರೆ, ಅವರಿಗೆ ಸೂಕ್ತ ಸ್ಥಾನಮಾನ ಸಿಗಲಿದೆ: ಬಿಎಸ್ ಯಡಿಯೂರಪ್ಪ
ಮಂಡ್ಯ ಕ್ಷೇತ್ರದಿಂದ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸುವುದು ಹೆಚ್ಚು ಕಡಿಮೆ ಖಚಿತವಾಗಿರುವುದರಿಂದ ಸುಮಲತಾ ಅವರೊಂದಿಗೆ ದೆಹಲಿ ವರಿಷ್ಠರು ಮಾತಾಡಲಿದ್ದಾರೆ, ಅವರಿಗೆ ಸೂಕ್ತ ಸ್ಥಾನಮಾನ ಖಂಡಿತವಾಗಿಯೂ ನೀಡಲಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.
ಬೆಳಗಾವಿ: ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಕ್ಷೇತ್ರಗಳನ್ನು ಸುತ್ತುತ್ತಿರುವ ಬಿಎಸ್ ಯಡಿಯೂರಪ್ಪ (BS Yediyurappa) ಇಂದು ಬೆಳಗಾವಿಯಲ್ಲಿದ್ದರು. ಅವರು ಯಾವುದೇ ಕ್ಷೇತ್ರದಲ್ಲಿದ್ದರೂ, ಸುಮಲತಾ ಅಂಬರೀಶ್ (Sumalatha Ambareesh) ಮತ್ತು ಕೆಎಸ್ ಈಶ್ವರಪ್ಪ (KS Eshwarappa) ಬಗ್ಗೆ ಪ್ರಶ್ನೆಗಳನ್ನು ಮಾಧ್ಯಮದವರು ಕೇಳೇ ಕೇಳುತ್ತಾರೆ. ಸುಮಲತಾ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಮಂಡ್ಯ ಕ್ಷೇತ್ರದಿಂದ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸುವುದು ಹೆಚ್ಚು ಕಡಿಮೆ ಖಚಿತವಾಗಿರುವುದರಿಂದ ಸುಮಲತಾ ಅವರೊಂದಿಗೆ ದೆಹಲಿ ವರಿಷ್ಠರು ಮಾತಾಡಲಿದ್ದಾರೆ, ಅವರಿಗೆ ಸೂಕ್ತ ಸ್ಥಾನಮಾನ ಖಂಡಿತವಾಗಿಯೂ ನೀಡಲಾಗುತ್ತದೆ ಎಂದು ಹೇಳಿದರು. ತಾವೇನಾದರೂ ಅವರೊಂದಿಗೆ ಮಾತಾಡಿದ್ದೀರಾ ಅಂತ ಕೇಳಿದಾಗ ಇಲ್ಲವೆಂದ ಯಡಿಯೂರಪ್ಪ, ರಾಷ್ಟ್ರೀಯ ನಾಯಕರೇ ಅವರ ಜೊತೆ ಮಾತಾಡಲಿದ್ದಾರೆ ಎಂದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ನಿಧಿ ಇದುವರೆಗೆ ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಷಯದ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ ಎನ್ನುತ್ತಾ ಪ್ರಶ್ನೆಯನ್ನು ಎವೇಡ್ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೇಮಾಡುತ್ತಾರೆ: ಹನಕೆರೆ ಶಶಿಕುಮಾರ್, ಸಂಸದೆ ಆಪ್ತ