ಜಾತಿಗಣತಿ ಆರಂಭಕ್ಕೂ ಮುನ್ನವೇ ಭುಗಿಲೆದ್ದ ಆಕ್ರೋಶ: ಕ್ರಿಶ್ಚಿಯನ್ ಜತೆ ಹಿಂದೂ ಉಪಜಾತಿ ಸೇರ್ಪಡೆ

Updated on: Sep 14, 2025 | 3:04 PM

ಕರ್ನಾಟಕದಲ್ಲಿ ಜಾತಿ ಗಣತಿ ಆರಂಭಕ್ಕೂ ಮುನ್ನವೇ ಕಿಚ್ಚು ಧಗಧಗಿಸುತ್ತಿದೆ. ಗಣತಿಯಲ್ಲಿ ಕ್ರಿಶ್ಚಿಯನ್ ಜೊತೆ ಹಿಂದೂ ಉಪಜಾತಿ ಸೇರ್ಪಡೆಯಾಗಿದ್ದು, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ದಲಿತ ಸೇರಿ ಇತರೆ ಉಪಜಾತಿಗಳ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸಮೀಕ್ಷೆ ವೇಳೆ ಏನ್ ಬರೀತಾರೋ ಬರೆಯಲಿ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಹೇಳಿದ್ದು, ಇದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಬೆಂಗಳೂರು, (ಸೆಪ್ಟೆಂಬರ್ 14): ಕರ್ನಾಟಕದಲ್ಲಿ ಜಾತಿ ಗಣತಿ ಆರಂಭಕ್ಕೂ ಮುನ್ನವೇ ಕಿಚ್ಚು ಧಗಧಗಿಸುತ್ತಿದೆ. ಗಣತಿಯಲ್ಲಿ ಕ್ರಿಶ್ಚಿಯನ್ ಜೊತೆ ಹಿಂದೂ ಉಪಜಾತಿ ಸೇರ್ಪಡೆಯಾಗಿದ್ದು, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ದಲಿತ ಸೇರಿ ಇತರೆ ಉಪಜಾತಿಗಳ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸಮೀಕ್ಷೆ ವೇಳೆ ಏನ್ ಬರೀತಾರೋ ಬರೆಯಲಿ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಹೇಳಿದ್ದು, ಇದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.