AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಟಿ ರವಿ ಅಮಾನತು: ಬಂದರೆ ಹೊರಗೆ ನಿಲ್ಲಿಸಿ ಎಂದು ಸಭಾಪತಿ ಖಡಕ್ ಸೂಚನೆ

ಸಿಟಿ ರವಿ ಅಮಾನತು: ಬಂದರೆ ಹೊರಗೆ ನಿಲ್ಲಿಸಿ ಎಂದು ಸಭಾಪತಿ ಖಡಕ್ ಸೂಚನೆ

ರಮೇಶ್ ಬಿ. ಜವಳಗೇರಾ
|

Updated on: Feb 04, 2026 | 9:29 PM

Share

ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಈ ದಿನದ ಮಟ್ಟಿಗೆ ಬಿಜೆಪಿ ಸದಸ್ಯ ಸಿ.ಟಿ.ರವಿಯವರನ್ನು ಅಮಾನತು ಮಾಡಿದ್ದಾರೆ. ರಾತ್ರಿ 8 ಗಂಟೆಯೊಳಗೆ ಸಿ.ಟಿ.ರವಿ ಸದನಕ್ಕೆ ಕರೆತರುವಂತೆ ವಿಪಕ್ಷ ನಾಯಕರು, ಪರಿಷತ್​ನ ವಿಪಕ್ಷ ಮುಖ್ಯ ಸಚೇತಕರಿಗೆ ಹೇಳಿದ್ದೆ. ಆದ್ರೆ, ಬಿಜೆಪಿ ಸದಸ್ಯ ಸಿ.ಟಿ.ರವಿ ಸಭಾಪತಿ ಆದೇಶಕ್ಕೆ ಗೌರವ ನೀಡಿರುವುದಿಲ್ಲ. ಹೀಗಾಗಿ ಸಿ.ಟಿ.ರವಿಯನ್ನು ಈ ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ. ಇದರಿಂದ ಪರಿಷತ್​​ ಸದಸ್ಯ ಸಿ.ಟಿ.ರವಿ ಬಂದರೆ ಹೊರಗೆ ನಿಲ್ಲಿಸಿ. ಯಾವ ಕಡೆಯಿಂದಲೂ ಅವರು ಒಳಗೆ ಬರತಕ್ಕದ್ದಲ್ಲ. ಎಲ್ಲಾ ಬಾಗಿಲಲ್ಲಿ ಇರುವವರಿಗೆ ಹೇಳಿ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅವರು ಪರಿಷತ್​​ನ ಚೀಫ್ ಮಾರ್ಷಲ್​​ಗೆ ಖಡಕ್ ಸೂಚನೆ ನೀಡಿದ್ದಾರೆ.

ಬೆಂಗಳೂರು, (ಫೆಬ್ರವರಿ 04): ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಈ ದಿನದ ಮಟ್ಟಿಗೆ ಬಿಜೆಪಿ ಸದಸ್ಯ ಸಿ.ಟಿ.ರವಿಯವರನ್ನು ಅಮಾನತು ಮಾಡಿದ್ದಾರೆ. ರಾತ್ರಿ 8 ಗಂಟೆಯೊಳಗೆ ಸಿ.ಟಿ.ರವಿ ಸದನಕ್ಕೆ ಕರೆತರುವಂತೆ ವಿಪಕ್ಷ ನಾಯಕರು, ಪರಿಷತ್​ನ ವಿಪಕ್ಷ ಮುಖ್ಯ ಸಚೇತಕರಿಗೆ ಹೇಳಿದ್ದೆ. ಆದ್ರೆ, ಬಿಜೆಪಿ ಸದಸ್ಯ ಸಿ.ಟಿ.ರವಿ ಸಭಾಪತಿ ಆದೇಶಕ್ಕೆ ಗೌರವ ನೀಡಿರುವುದಿಲ್ಲ. ಹೀಗಾಗಿ ಸಿ.ಟಿ.ರವಿಯನ್ನು ಈ ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ. ಇದರಿಂದ ಪರಿಷತ್​​ ಸದಸ್ಯ ಸಿ.ಟಿ.ರವಿ ಬಂದರೆ ಹೊರಗೆ ನಿಲ್ಲಿಸಿ. ಯಾವ ಕಡೆಯಿಂದಲೂ ಅವರು ಒಳಗೆ ಬರತಕ್ಕದ್ದಲ್ಲ. ಎಲ್ಲಾ ಬಾಗಿಲಲ್ಲಿ ಇರುವವರಿಗೆ ಹೇಳಿ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅವರು ಪರಿಷತ್​​ನ ಚೀಫ್ ಮಾರ್ಷಲ್​​ಗೆ ಖಡಕ್ ಸೂಚನೆ ನೀಡಿದ್ದಾರೆ.

ಮೋದಿಗೆ ದೇಶದ್ರೋಹಿ ಎಂದಿದ್ದ ಕಾಂಗ್ರೆಸ್ ಸದಸ್ಯ ನಜೀರ್ ಅಹ್ಮದ್ ಅವರಿಗೆ ಪಾಕಿಸ್ತಾನದ ನಾಲಿಗೆ ಎಂದು ಸಿಟಿ ರವಿಯವರು ಸದನದಲ್ಲೇ ಹೇಳಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಯ್ತು. ಕೂಡಲೇ ಸಿಟಿ ರವಿ ಕ್ಷಮೆಯಾಚನೆ ಮಾಡಬೇಕೆಂದು ಕಾಂಗ್ರೆಸ ಸದಸ್ಯರು ಪಟ್ಟು ಹಿಡಿದಿದ್ದರು. ಈ ಸಂಬಂಧ ಸಭಾಪತಿ ಹೊರಟ್ಟಿ ಕೂಡಲೇ ಸದನಕ್ಕೆ ಹಾಜರಾಗಬೇಕೆಂದು ಸೂಚಿಸಿದ್ದರು. ಆದರೂ ಸಿಟಿ ರವಿ ಬರದಿದ್ದರಿಂದ ಸಭಾಪತಿ ಈ ಕ್ರಮಕೈಗೊಂಡಿದ್ದಾರೆ.