ಬೆಂಗಳೂರಿನಲ್ಲಿ ಜಾತಿ ಗಣತಿ ವೇಳೆ ಕರ್ತವ್ಯ ಲೋಪ, ಗಣತಿ ಮೇಲ್ವಿಚಾರಕರಿಗೆ ನೋಟಿಸ್
ಕರ್ನಾಟಕ ಜಾತಿ ಗಣತಿ ಸಂದರ್ಭದಲ್ಲಿ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ 13 ಗಣತಿ ಮೇಲ್ವಿಚಾರಕರಿಗೆ ಪಾಲಿಕೆ ಜಂಟಿ ಆಯುಕ್ತರು ನೋಟಿಸ್ ನೀಡಿದ್ದಾರೆ. ಸರಿಯಾಗಿ ಕೆಲಸ ಮಾಡದಿರುವುದು, ಕಿರಿಯರಿಗೆ ಮಾರ್ಗದರ್ಶನ ನೀಡದಿರುವುದು ಮತ್ತು ಗಣತಿ ಪ್ರಗತಿ ಕುಂಠಿತಗೊಂಡಿದೆ ಎಂಬ ಆರೋಪ ಮಾಡಿ ನೋಟಿಸ್ ನೀಡಲಾಗಿದೆ.
ಬೆಂಗಳೂರು, ಅ.15: ಬೆಂಗಳೂರಿನಲ್ಲಿ ಜಾತಿ ಗಣತಿ (Bengaluru Caste Survey) ವೇಳೆ ಕರ್ತವ್ಯ ಲೋಪ ಆಗಿದೆ ಎಂಬ ಅರೋಪ ಕೇಳಿ ಬಂದಿದೆ. ಇದೀಗ ಕೆಲವು ಗಣತಿ ಮೇಲ್ವಿಚಾರಕರಿಗೆ ನೋಟಿಸ್ ನೀಡಲಾಗಿದೆ. ಪಾಲಿಕೆಯ ಜಂಟಿ ಆಯುಕ್ತರು ಒಟ್ಟು 13 ಸಿಬ್ಬಂದಿಗೆ ಈ ನೋಟಿಸ್ ಜಾರಿಗೊಳಿಸಿದ್ದಾರೆ. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಗಣತಿ ಕಾರ್ಯದ ವೇಳೆ ಲೋಪಗಳಾಗಿವೆ ಎಂದು ಆರೋಪಿಸಲಾಗಿದೆ. ನೋಟಿಸ್‌ನಲ್ಲಿ, ಮೇಲ್ವಿಚಾರಕರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ, ತಮ್ಮ ಕಿರಿಯ ಸಿಬ್ಬಂದಿಗೆ ಸರಿಯಾದ ಮಾರ್ಗದರ್ಶನ ನೀಡಿಲ್ಲ ಮತ್ತು ಅವರಿಗೆ ಅಗತ್ಯ ವಿವರಗಳನ್ನು ಒದಗಿಸಿಲ್ಲ ಎಂದು ಈ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಮೇಲ್ವಿಚಾರಕರು ಐದಕ್ಕಿಂತ ಕಡಿಮೆ ಮನೆಗಳ ಗಣತಿ ಮಾಡಿದ್ದಾರೆಂದು ದೂರಲಾಗಿದೆ. ಇವರ ಕಾರ್ಯ ವೈಖರಿಯಿಂದಾಗಿ ಗಣತಿ ಪ್ರಗತಿಗೆ ಅಡ್ಡಿಯಾಗಿದ್ದು, ಸರ್ಕಾರದ ಆದೇಶಗಳನ್ನು ಧಿಕ್ಕರಿಸಿದಂತಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇದು ಕರ್ತವ್ಯ ಲೋಪ ಎಂದು ಪರಿಗಣಿಸಲಾಗಿದ್ದು, ಸಂಬಂಧಪಟ್ಟವರು ತಮ್ಮಿಂದಾದ ತಪ್ಪಿಗೆ ವಿವರಣೆ ನೀಡುವಂತೆ ಸೂಚಿಸಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

