AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣವೇಷಧಾರಿಯಾಗಿ ಬಂದು ಆರ್​ಎಸ್​ಎಸ್​ಗೆ ಅವಮಾನ ಮಾಡಿದ್ದಾರೆ; ಮುನಿರತ್ನ ವಿರುದ್ಧ ಡಿಕೆ ಶಿವಕುಮಾರ್ ಟೀಕೆ

ಗಣವೇಷಧಾರಿಯಾಗಿ ಬಂದು ಆರ್​ಎಸ್​ಎಸ್​ಗೆ ಅವಮಾನ ಮಾಡಿದ್ದಾರೆ; ಮುನಿರತ್ನ ವಿರುದ್ಧ ಡಿಕೆ ಶಿವಕುಮಾರ್ ಟೀಕೆ

ಶಾಂತಮೂರ್ತಿ
| Updated By: ಸುಷ್ಮಾ ಚಕ್ರೆ|

Updated on:Oct 12, 2025 | 12:37 PM

Share

ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲವೆಂಬ ಆರೋಪಕ್ಕೆ ಬಿಜೆಪಿ ಶಾಸಕ ಮುನಿರತ್ನ ಅವರ ಆರೋಪಕ್ಕೆ ಡಿಸಿಎಂ ಡಿಕೆಶಿ ತಿರುಗೇಟು ನೀಡಿದ್ದಾರೆ. ಇದು ಯಾವುದೇ ಅಭಿವೃದ್ಧಿ ಕಾರ್ಯಕ್ರಮವಲ್ಲ. ಇಲ್ಲಿ ಯಾವುದೇ ಶಿಲಾನ್ಯಾಸ ಮಾಡುತ್ತಿಲ್ಲ, ಕಾಮಗಾರಿಯನ್ನು ಉದ್ಘಾಟಿಸುತ್ತಿಲ್ಲ. ಇದು ಜನರ ಜೊತೆ ನಡಿಗೆ ಕಾರ್ಯಕ್ರಮವಷ್ಟೇ. ಆರ್​ಎಸ್ಎಸ್ ಶತಮಾನೋತ್ಸವದ ವೇಳೆಯಲ್ಲಿ ನಡೆದ ವರ್ತನೆ ಸರಿಯಲ್ಲ. ಗಣವೇಷಧಾರಿಯಾಗಿ ಬಂದು ಆರ್​ಎಸ್​ಎಸ್​ಗೆ ಬಿಜೆಪಿ ಶಾಸಕ ಮುನಿರತ್ನ ಅವಮಾನ ಮಾಡಿದ್ದಾರೆ ಎಂದು ಮತ್ತಿಕೆರೆ ಜೆಪಿ ಪಾರ್ಕ್​ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರು, ಅಕ್ಟೋಬರ್ 12: ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಜೆಪಿ ಪಾರ್ಕ್​ನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಎದುರೇ ಬಿಜೆಪಿ ಶಾಸಕ ಮುನಿರತ್ನ ಪ್ರತಿಭಟನೆ ನಡೆಸಿದ್ದರು. ತಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಆರೋಪಿಸಿದ್ದರು. ಅಲ್ಲದೆ, ತನಗೆ ಹೊಡೆಯಲೆಂದು ಕನಕಪುರ, ರಾಮನಗರದಿಂದ ರೌಡಿಗಳನ್ನು ಕರೆಸಲಾಗಿದೆ, ಪೊಲೀಸರು ಇರದಿದ್ದರೆ ನನ್ನನ್ನು ಕೊಂದು ಬಿಡುತ್ತಿದ್ದರು ಎಂದೆಲ್ಲ ಆರೋಪ ಮಾಡಿದ್ದರು. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯ ಶಾಸಕರಿಗೆ ತಾಳ್ಮೆ ಇರಲಿಲ್ಲ. ಸಭೆಗೆ ಅವಮಾನ ಮಾಡಬೇಕು ಅಂತ ಬಂದಿದ್ದರೋ ಏನೋ. ಈ ಕಾರ್ಯಕ್ರಮಕ್ಕೆ ಗಲಾಟೆ ಮಾಡೋಕೆ ಅಂತಲೇ ಬಂದಿದ್ದರು ಅನ್ಸುತ್ತೆ. ಗಣವೇಷಧಾರಿಯಾಗಿ ಬಂದು ಪ್ರತಿಭಟನೆ ನಡೆಸಿ ಅವರು ಆರ್​ಎಸ್​ಎಸ್​ಗೆ ಅವಮಾನ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲವೆಂಬ ಆರೋಪಕ್ಕೆ ಬಿಜೆಪಿ ಶಾಸಕ ಮುನಿರತ್ನ ಅವರ ಆರೋಪಕ್ಕೆ ಡಿಸಿಎಂ ಡಿಕೆಶಿ ತಿರುಗೇಟು ನೀಡಿದ್ದಾರೆ. ಇದು ಯಾವುದೇ ಅಭಿವೃದ್ಧಿ ಕಾರ್ಯಕ್ರಮವಲ್ಲ. ಇಲ್ಲಿ ಯಾವುದೇ ಶಿಲಾನ್ಯಾಸ ಮಾಡುತ್ತಿಲ್ಲ, ಕಾಮಗಾರಿಯನ್ನು ಉದ್ಘಾಟಿಸುತ್ತಿಲ್ಲ. ಇದು ಜನರ ಜೊತೆ ನಡಿಗೆ ಕಾರ್ಯಕ್ರಮವಷ್ಟೇ. ಆರ್​ಎಸ್ಎಸ್ ಶತಮಾನೋತ್ಸವದ ವೇಳೆಯಲ್ಲಿ ನಡೆದ ವರ್ತನೆ ಸರಿಯಲ್ಲ. ಗಣವೇಷಧಾರಿಯಾಗಿ ಬಂದು ಆರ್​ಎಸ್​ಎಸ್​ಗೆ ಬಿಜೆಪಿ ಶಾಸಕ ಮುನಿರತ್ನ ಅವಮಾನ ಮಾಡಿದ್ದಾರೆ ಎಂದು ಮತ್ತಿಕೆರೆ ಜೆಪಿ ಪಾರ್ಕ್​ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 12, 2025 12:35 PM