ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್

| Updated By: Ganapathi Sharma

Updated on: Jan 09, 2025 | 1:09 PM

ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ಪತ್ನಿ ಸಮೇತರಾಗಿ ತಮಿಳುನಾಡಿನ ಕುಂಭಕೋಣಂ ಜಿಲ್ಲೆಯಲ್ಲಿರುವ ಐತಿಹಾಸಿಕ ಮತ್ತು ಖ್ಯಾತ ಪ್ರತ್ಯಂಗಿರಾ ದೇವಿ ದೇವಸ್ಥಾನಕ್ಕೆ ತೆರಳಿ ಉಗ್ರ ಸ್ವರೂಪಿಣಿಯ ದರ್ಶನ ಪಡೆದರು. ಕೇರಳ ಹಾಗೂ ತಮಿಳುನಾಡಿನಲ್ಲಿ ಪ್ರತ್ಯಂಗಿರಾ ದೇವಿಯ ಆರಾಧಕರು ಹೆಚ್ಚಾಗಿದ್ದು, ಉನ್ನತ ಹುದ್ದೆಗಳಿಗೆ ಎದುರಾಗುವ ಅಡೆತಡೆಗಳನ್ನು ದೇವಿ ನಿವಾರಣೆ ಮಾಡುತ್ತಾಳೆ ಎಂಬ ನಂಬಿಕೆ ಇದೆ.

ಬೆಂಗಳೂರು, ಜನವರಿ 9: ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ತಮಿಳುನಾಡಿನ ಕುಂಭಕೋಣಂ ಜಿಲ್ಲೆಯ ಅಯ್ಯಾವುಡಿಯಲ್ಲಿರುವ ಪ್ರಾಚೀನ ಪ್ರತ್ಯಂಗಿರಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಉಗ್ರ ಸ್ವರೂಪಿಣಿ ಪ್ರತ್ಯಂಗಿರಾ ದೇವಿಯ ದರ್ಶನ ಪಡೆದರು. ಈ ದೇವಾಲಯ ಅತ್ಯಂತ ಪ್ರಾಚೀನವಾದ್ದಾಗಿದ್ದು, ಬಹಳ ಪ್ರಸಿದ್ಧಿ ಪಡೆದಿದೆ.

ಪ್ರತ್ಯಂಗಿರಾ ದೇವಿಗೆ ಮಾಡುವ ಪೂಜೆ, ಹೋಮವು ಅತ್ಯಂತ ಶಕ್ತಿಶಾಲಿ ಎಂಬ ನಂಬಿಕೆ ಭಕ್ತರಲ್ಲಿದೆ. ಪ್ರತ್ಯಂಗಿರಾ ದೇವಿಯ ಆಶೀರ್ವಾದದಿಂದ ನಮಗೆ ಯಾವುದೇ ನಕಾರಾತ್ಮಕ ಶಕ್ತಿ ಅಥವಾ ದುಷ್ಟ ಶಕ್ತಿ ತೊಂದರೆಯನ್ನು ನೀಡುವುದಿಲ್ಲ ಎಂಬ ನಂಬಿಕೆ ತಮಿಳುನಾಡು ಹಾಗೂ ಕೇರಳದ ಭಕ್ತರಲ್ಲಿದೆ. ಪ್ರತ್ಯಂಗಿರಾ ಹೋಮವನ್ನು ಯಾವ ಸ್ಥಳದಲ್ಲಿ ಮಾಡುತ್ತೇವೋ, ಆ ಸ್ಥಳದಲ್ಲಿ ಎಂದಿಗೂ ಕೂಡ ನಕಾರಾತ್ಮಕ ಶಕ್ತಿಗಳು ಪ್ರವೇಶವನ್ನು ಪಡೆಯುವುದಿಲ್ಲ ಎಂಬ ನಂಬಿಕೆ ಇದೆ.

ಉನ್ನತ ಹುದ್ದೆಗೆ ಎದುರಾಗುವ ಅಡೆತಡೆಗೆ ಪೂಜೆ!

ಸಾಮಾನ್ಯವಾಗಿ ಉನ್ನತ ಹುದ್ದೆಗಳಿಗೆ ಎದುರಾಗುವ ಅಡೆತಡೆಗಳಿಗೆ ಪ್ರತ್ಯಂಗಿರಾ ದೇವಿಗೆ ಪೂಜೆ ಮಾಡಿಸುತ್ತಾರೆ. ಕೇರಳದಲ್ಲಿ ಪ್ರತ್ಯಂಗಿರಾ ದೇವಿಯ ಆರಾಧಕರು ಹೆಚ್ಚಾಗಿ ಇದ್ದಾರೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ